AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾನಲ್ಲಿ ‘ಗನ್ ಎಕ್ಸ್​ಪರ್ಟ್’ ಟಿಟಿಯಾನಾ ಹಾಟ್ ಅವತಾರ

Toxic movie: ‘ಟಾಕ್ಸಿಕ್’ ಸಿನಿಮಾನಲ್ಲಿ ನಾಯಕಿಯರಾದ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ನೀಡಿರುವ ಸಂದರ್ಶನಗಳಲ್ಲಿ ಈ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ. ಸಿನಿಮಾನಲ್ಲಿ ಐವರು ನಾಯಕಿಯರಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ. ಇವರುಗಳ ಜೊತೆಗೆ ಕೆಲ ವಿದೇಶಿ ನಟಿಯರು ಸಹ ಇದ್ದು, ಪ್ರಮುಖವಾಗಿ ಹಾಲಿವುಡ್ ನಟಿ ಟಿಟಿಯಾನಾ ‘ಟಾಕ್ಸಿಕ್’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾನಲ್ಲಿ ‘ಗನ್ ಎಕ್ಸ್​ಪರ್ಟ್’ ಟಿಟಿಯಾನಾ ಹಾಟ್ ಅವತಾರ
Titiana
ಮಂಜುನಾಥ ಸಿ.
|

Updated on: Jun 24, 2026 | 11:00 AM

Share

ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆ ದಿನಾಂಕ ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಯಶ್ ನಾಯಕನಾದರೂ ಈ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಎಂಬ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ಸಿನಿಮಾದ ನಾಯಕಿಯರಾದ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ನೀಡಿರುವ ಸಂದರ್ಶನಗಳಲ್ಲಿ ಈ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ. ಸಿನಿಮಾನಲ್ಲಿ ಐವರು ನಾಯಕಿಯರಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ. ಇವರುಗಳ ಜೊತೆಗೆ ಕೆಲ ವಿದೇಶಿ ನಟಿಯರು ಸಹ ಇದ್ದು, ಪ್ರಮುಖವಾಗಿ ಹಾಲಿವುಡ್ ನಟಿ ಟಿಟಿಯಾನಾ ‘ಟಾಕ್ಸಿಕ್’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಟಿಟಿಯಾನಾ, ನಟಿ ಮತ್ತು ಕೊರಿಯೋಗ್ರಾಫರ್ ಆಗಿರು ಜೊತೆಗೆ ತಮ್ಮ ಶೂಟಿಂಗ್ ಸ್ಕಿಲ್​​ನಿಂದಲೂ ಜನಪ್ರಿಯರು. ಟಿಟಿಯಾನಾ, ‘ಟಾಕ್ಸಿಕ್’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾದ್ದು ಎನ್ನಲಾದ ಟಿಟಿಯಾನಾ ಅವರ ಪೋಸ್ಟರ್ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟರ್ ಅನ್ನು ಅಧಿಕೃತವಾಗಿ ಕೆವಿಎನ್ ಬಿಡುಗಡೆ ಮಾಡಿಲ್ಲವಾದರೂ ಯಶ್ ಅವರ ಫ್ಯಾನ್ಸ್ ಪೇಜುಗಳಲ್ಲಿ, ‘ಟಾಕ್ಸಿಕ್’ ಸಿನಿಮಾದ ಪೇಜುಗಳಲ್ಲಿ ಹರಿದಾಡುತ್ತಿದೆ. ಪೋಸ್ಟರ್​​ನಲ್ಲಿ ಟಿಟಿಯಾನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಟಿಟಿಯಾನಾ, ಯಶ್​​ ಅವರ ರಾಯ ಗ್ಯಾಂಗ್​​ನಲ್ಲಿರುವ ವ್ಯಕ್ತಿಯ ಪಾತ್ರದಲ್ಲಿ ಟಿಟಿಯಾನಾ ನಟಿಸಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದಾಗ, ಕಾರಿನಲ್ಲಿ ಯಶ್ ಪಾತ್ರದ ಜೊತೆಗಿದ್ದಿದ್ದು ಇದೇ ಟಿಟಿಯಾನಾ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಆ ನಟಿ ಬೇರೆ. ಟಿಟಿಯಾನಾ, ತಮ್ಮ ಇನ್​​ಸ್ಟಾಗ್ರಾಂ ಬಯೋನಲ್ಲಿ ಸಹ ‘ಟಾಕ್ಸಿಕ್’ ಸಿನಿಮಾದ ನಟಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ

ಅಮೆರಿಕದ ಖಾಸಗಿ ಶೂಟಿಂಗ್ ರೇಂಜ್​​ನಲ್ಲಿ ಅವರು ಟಾರ್ಗೆಟ್ ಶೂಟಿಂಗ್ ಮಾಡಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರ ಶೂಟಿಂಗ್​​ ಏರಿಯಾಕ್ಕೆ ಯಶ್ ಸೇರಿದಂತೆ ಹಲವು ಹಾಲಿವುಡ್​ ಸ್ಟಾರ್ ನಟ-ನಟಿಯರು ಭೇಟಿ ಕೊಟ್ಟು ಶೂಟಿಂಗ್ ಮಾಡಿದ್ದಾರೆ. ಒಳ್ಳೆಯ ಶೂಟರ್ ಆಗಿರುವ ಜೊತೆಗೆ ನೃತ್ಯಗಾರ್ತಿ ಮತ್ತು ಕುಂಫು ಪ್ರವೀಣೆ ಸಹ ಆಗಿದ್ದಾರೆ ಟಿಟಿಯಾನಾ.

ಟಿಟಿಯಾನಾ ಕೆಲವು ಹಾಲಿವುಡ್ ಸಿನಿಮಾ ಮತ್ತು ಟಿವಿ ಶೋಗಳಲ್ಲಿ ಸಹ ನಟಿಸಿದ್ದಾರೆ. ‘ರೆಸಿಡೆಂಟ್ ಇವಿಲ್’, ‘ಡೇ ಶಿಫ್ಟ್’, ‘ಗೆಟ್ ದಿ ಗರ್ಲ್’, ‘ಹಂಟರ್ಸ್’, ‘ಬೋಷ್:ಲೆಗಸಿ’ ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಮಲ್ಲತ್ತಹಳ್ಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!
ಚೆನ್ನೈನಲ್ಲಿ 12,000 ಶಂಖಗಳಿಂದ ಸಿದ್ಧವಾಯ್ತು ಗಣೇಶನ ಮೂರ್ತಿ!
ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಪಂಚಾಯ್ತಿ ಎಲೆಕ್ಷನ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಡಿಸಿಎಂ ಪರಮೇಶ್ವರ್
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!