
ಮಾರ್ಚ್ 19ರಂದು ಕನ್ನಡದ ‘ಟಾಕ್ಸಿಕ್’ (Toxic Movie) ಹಾಗೂ ಹಿಂದಿಯ ‘ಧುರಂಧರ್ 2’ ಮಧ್ಯೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಏರ್ಪಡುತ್ತಿದೆ. ‘ಧುರಂಧರ್’ ಸಿನಿಮಾ ಈಗಾಗಲೇ ತನ್ನನ್ನು ತಾನು ಸಾಬೀತು ಮಾಡಿಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ಬಾಚಿಕೊಂಡಿದೆ. ಹೀಗಾಗಿ, ‘ಧುರಂಧರ್ 2’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ನು, ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಸಿಕ್ಕಿರೋ ಹೈಪ್ ಕಡಿಮೆ ಏನು ಇಲ್ಲ. ಈ ಎಲ್ಲಾ ಕಾರಣದಿಂದ ಎರಡೂ ಸಿನಿಮಾಗಳಲ್ಲಿ ಯಾವುದು ಗೆಲ್ಲುತ್ತದೆ ಎಂಬ ಕುತೂಹಲ ಮೂಡಿದೆ. ಈಗ ‘ಟಾಕ್ಸಿಕ್’ ಚಿತ್ರಕ್ಕೆ ಸೆಡ್ಡು ಹೊಡೆಯಲು ‘ಧುರಂಧರ್’ ತಂಡ ದೊಡ್ಡ ಪ್ಲ್ಯಾನ್ ಮಾಡಿದೆ.
‘ಧುರಂಧರ್’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಿದ್ದು ಹಿಂದಿಯಲ್ಲಿ ಮಾತ್ರ. ಹಿಂದಿ ಭಾಷೆ ಅರ್ಥವಾಗದೇ ಇದ್ದವರು ಕೂಡ ತೆರಳಿ ಸಿನಿಮಾ ನೋಡಿದ್ದಾರೆ. ಆದರೆ, ಕೆಲವರು ಹಿಂದಿ ಬರುವುದಿಲ್ಲ ಎಂಬ ಕಾರಣದಿಂದಲೇ ಸಿನಿಮಾ ನೋಡದೇ ಇದ್ದಿರಬಹುದು. ಈ ಪ್ರೇಕ್ಷಕರನ್ನು ಸೆಳೆಯಲು ಒಟಿಟಿಯಲ್ಲಿ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ‘ಧುರಂಧರ್’ ಪ್ರಸಾರ ಕಂಡಿತು. ಆದರೆ, ಕನ್ನಡ ವರ್ಷನ್ ಇಲ್ಲದೆ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಈಗ ತಪ್ಪನ್ನು ತಿದ್ದಿಕೊಂಡಿದ್ದಾರೆ ನಿರ್ದೇಶಕ ಆದಿತ್ಯ ಧಾರ್.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಟೀಸರ್ನಲ್ಲಿ ಅಶ್ಲೀಲತೆ: ಸಿಬಿಎಫ್ಸಿ ಮುಖ್ಯಸ್ಥ ಹೇಳಿದ್ದೇನು?
‘ಟಾಕ್ಸಿಕ್’ ಸಿನಿಮಾ ಕನ್ನಡದಲ್ಲಿ ದೊಡ್ಡ ಮಾರುಕಟ್ಟೆ ಪಡೆದುಕೊಳ್ಳೋದು ಫಿಕ್ಸ್. ಇದರ ಜೊತೆಗೆ ಪರಭಾಷೆಯಲ್ಲೂ ಸಿನಿಮಾಗೆ ಸಾಕಷ್ಟು ಕ್ರೇಜ್ ಇದೆ. ಇದು ಎಲ್ಲಾ ರೀತಿಯಲ್ಲೂ ‘ಧುರಂದರ್’ ಚಿತ್ರಕ್ಕೆ ತೊಂದರೆ ತಂದೊಡ್ಡಬಹುದು. ಈಗ ‘ಧುರಂಧರ್ 2’ ಚಿತ್ರವನ್ನು ಕನ್ನಡದಲ್ಲೂ ರಿಲೀಸ್ ಮಾಡೋದಾಗಿ ನಿರ್ದೇಶಕ ಆದಿತ್ಯ ಧಾರ್ ತಿಳಿಸಿದ್ದಾರೆ. ‘ಟಾಕ್ಸಿಕ್’ ಚಿತ್ರಕ್ಕೆ ಸೆಡ್ಡು ಹೊಡೆದು, ಈ ಚಿತ್ರದ ಮಾರುಕಟ್ಟೆಯನ್ನು ಕನ್ನಡಕ್ಕೂ ವಿಸ್ತರಿಸೋ ಆಲೋಚನೆ ಅವರದ್ದು.
‘ಟಾಕ್ಸಿಕ್’ ಸಿನಿಮಾದ ಟೀಸರ್ ಸೃಷ್ಟಿಸಿದ ಸಂಚಲನ ತುಂಬಾನೇ ದೊಡ್ಡದು. ಈ ಚಿತ್ರದ ಟೀಸರ್ ಸಾಕಷ್ಟು ಸದ್ದು ಮಾಡಿತು. ಈಗ ‘ಧುರಂಧರ್ 2’ ಟೀಸರ್ ಯಾವ ರೀತಿಯಲ್ಲಿ ಗಮನ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:39 am, Tue, 3 February 26