ವರಮಹಾಲಕ್ಷ್ಮಿ ಹಬ್ಬದಂದು ವಿಕ್ರಂ ರವಿಚಂದ್ರನ್​ರ ‘ತ್ರಿವಿಕ್ರಮ’ನಿಗೆ ಸಿಕ್ತು ಚಿನ್ನದಂಥ ಬೆಲೆ..!

|

Updated on: Jul 31, 2020 | 4:05 PM

ಬೆಂಗಳೂರು:ವಿಕ್ರಂ ರವಿಚಂದ್ರನ್, ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತಾ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಾರ. ಕ್ರೇಜಿ ಸ್ಟಾರ್​ ರವಿಚಂದ್ರನ್​ರ ಮಗ ಅನ್ನೋ ಹಣೆ ಪಟ್ಟಿ ಇಲ್ಲದೆ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನಿಟ್ಟುಕೊಂಡಿರೋ ಯುವ ನಟ. ಅಪ್ಪ ದೊಡ್ಡ ಸ್ಟಾರ್ ಆಗಿದ್ರೂ ಕೂಡ ಅವರ ಹೆಸರು ಬಳಸದೆ ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ‌ ದುಡಿದು ವಿಕ್ರಂ ರವಿಚಂದ್ರನ್ ಅನುಭವ ಪಡೆದುಕೊಂಡಿದ್ದಾರೆ.  ವಿಕ್ಕಿ ಈಗ ‘ತ್ರಿವಿಕ್ರಮ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಕ್ರಂ ಹೆಸರು, […]

ವರಮಹಾಲಕ್ಷ್ಮಿ ಹಬ್ಬದಂದು ವಿಕ್ರಂ ರವಿಚಂದ್ರನ್​ರ ತ್ರಿವಿಕ್ರಮನಿಗೆ ಸಿಕ್ತು ಚಿನ್ನದಂಥ ಬೆಲೆ..!
Follow us on

ಬೆಂಗಳೂರು:ವಿಕ್ರಂ ರವಿಚಂದ್ರನ್, ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತಾ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಾರ. ಕ್ರೇಜಿ ಸ್ಟಾರ್​ ರವಿಚಂದ್ರನ್​ರ ಮಗ ಅನ್ನೋ ಹಣೆ ಪಟ್ಟಿ ಇಲ್ಲದೆ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನಿಟ್ಟುಕೊಂಡಿರೋ ಯುವ ನಟ.

ಅಪ್ಪ ದೊಡ್ಡ ಸ್ಟಾರ್ ಆಗಿದ್ರೂ ಕೂಡ ಅವರ ಹೆಸರು ಬಳಸದೆ ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ‌ ದುಡಿದು ವಿಕ್ರಂ ರವಿಚಂದ್ರನ್ ಅನುಭವ ಪಡೆದುಕೊಂಡಿದ್ದಾರೆ.  ವಿಕ್ಕಿ ಈಗ ‘ತ್ರಿವಿಕ್ರಮ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಕ್ರಂ ಹೆಸರು, ನಟನಾ ಟ್ಯಾಲೆಂಟ್​, ಲುಕ್, ಮತ್ತು ಮ್ಯಾನರಿಸಂಗೆ ಸೂಟ್​ ಆಗುವಂಥ ಕಥೆಯನ್ನ ನಿರ್ದೇಶಕ ಸಹನಾ ಮೂರ್ತಿ ಸಿದ್ಧಪಡಿಸಿ ಶೂಟಿಂಗ್ ಕೂಡ ಮಾಡಿದ್ದಾರೆ.

ಸಹನಾ ಮೂರ್ತಿ ರವಿಚಂದ್ರನ್ ಎರಡನೇ ಪುತ್ರನ  ಫಸ್ಟ್​ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅಂದ ಮೇಲೆ ಆ ಚಿತ್ರದ ಮೇಲಿನ ನಿರೀಕ್ಷೆ ಒಂದು ಹಿಡಿ ಹೆಚ್ಚೇ ಇರುತ್ತೆ. ಅದನ್ನ ಸಹನಾ ಮೂರ್ತಿ ಫುಲ್​ಫಿಲ್​ ಮಾಡಿದ್ದಾರೆ ಅನ್ನೋದು ಈಗಾಗ್ಲೆ ಬಂದಿರೋ ಸಿನಿಮಾದ ಫಸ್ಟ್ ಲುಕ್ ಟೀಸರ್​ಗಳೇ ಸಾರಿ ಸಾರಿ ಹೇಳ್ತಿವೆ. ಇದೀಗ ವರಮಹಾಲಕ್ಷ್ಮಿ ಹಬ್ಬದಂದು ತ್ರಿವಿಕ್ರಮನ ಜೋಳಿಗೆಗೆ ಲಕ್ಷ್ಮಿ ಬಂದು ಸೇರಿದ್ದಾಳೆ.

ಆಡಿಯೋ ಹಕ್ಕಿನಲ್ಲಿ ‘ತ್ರಿವಿಕ್ರಮ’ನ ಪರಾಕ್ರಮ..!

ಜ್ಯೂನಿಯರ್ ಕನಸುಗಾರ ವಿಕ್ರಂ ರವಿಚಂದ್ರನ್‌ ಚಿತ್ರರಂಗಕ್ಕೆ ಡೆಬ್ಯೂ ಆಗ್ತಿರೋ‌ ಸಿನಿಮಾ ತ್ರಿವಿಕ್ರಮ. ಹೀಗಾಗಿ, ನಿರ್ಮಾಪಕ ಸೋಮಣ್ಣ ಜ್ಯೂನಿಯರ್ ಕ್ರೇಜಿಸ್ಟಾರ್​ನ ಸಖತ್ತಾಗಿ ತೋರಿಸಬೇಕು. ಅದೆಷ್ಟೇ ಖರ್ಚಾದ್ರೂ ಪರವಾಗಿಲ್ಲ ಅಂತಾ ಸಿನಿಮಾಗಾಗಿ ಕೋಟಿ ಕೋಟಿ ಬಂಡವಾಳ ಸುರಿದಿದ್ದಾರೆ.

ಇದಕ್ಕೆ ಬೆಸ್ಟ್ ಎಕ್ಸಾಂಪಲ್, ತ್ರಿವಿಕ್ರಮನ ಎರಡು ಹಾಡುಗಳ ಚಿತ್ರೀಕರಣವನ್ನ ಭಾರತ-ಚೀನಾ, ಮತ್ತು ಭಾರತ- ಪಾಕಿಸ್ತಾನ ಗಡಿಗಳಲ್ಲಿ ಶೂಟ್​ ಮಾಡೋಕೆ ಪ್ಲಾನ್ ಮಾಡಿರೋದು. ನಿರ್ಮಾಪಕ ಸೋಮಣ್ಣರ ಈ effortಗೆ ಈಗ ಚಿನ್ನದಂಥ ಬೆಲೆ ದೊರೆತಿದೆ. ಯಾಕಂದ್ರೆ ಸಿನಿಮಾದ ಹಾಡುಗಳು ಮಾರಾಟವಾಗಿದ್ದು ವಿಕ್ರಂ ಮೊದಲ ಸಿನಿಮಾದಲ್ಲೇ ದಾಖಲೆ ಬರೆದಿದ್ದಾರೆ.

50 ಲಕ್ಷಕ್ಕೆ ಸೇಲ್ ಆಯ್ತು ‘ತ್ರಿವಿಕ್ರಮ’ ಆಡಿಯೋ ಹಕ್ಕು!

ಯೆಸ್, ಜ್ಯೂನಿಯರ್ ಕನಸುಗಾರ ವಿಕ್ಕಿಯ ತ್ರಿವಿಕ್ರಮನಿಗೆ‌ ಭಾರಿ‌ ಡಿಮ್ಯಾಂಡ್ ಬಂದಿದೆ. ಇದರ ಮೊದಲ ಹೆಜ್ಜೆಯಂತೆ ತ್ರಿವಿಕ್ರಮ ಸಿನಿಮಾದ ಆಡಿಯೋ ಹಕ್ಕು ಬರೋಬ್ಬರಿ 50 ಲಕ್ಷಕ್ಕೆ ಮಾರಾಟವಾಗಿದೆ. ಎ2 ಮ್ಯೂಸಿಕ್ ಸಂಸ್ಥೆ ತ್ರಿವಿಕ್ರಮನ ಹಾಡುಗಳನ್ನ ಕೇಳಿ ಖುಷಿಯಿಂದ ಡಿಮ್ಯಾಂಡ್ ಮಾಡಿ ಹಾಡುಗಳನ್ನ ಖರೀದಿಸಿದೆ. ಒಬ್ಬ ಸ್ಟಾರ್ ಹೀರೋನಾ ಸಿನಿಮಾದ ಆಡಿಯೋ ಹಕ್ಕು 50 ಲಕ್ಷಕ್ಕೆ ಮಾರಾಟವಾಗೋದು ತೀರಾ ಅಪರೂಪ. ಅಂಥದ್ರಲ್ಲಿ ವಿಕ್ಕಿ ಮೊದಲ‌ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು, ತ್ರಿವಿಕ್ರಮ ಸಿನಿಮಾದ ಕ್ರೆಡಿಬಲಿಟಿಯನ್ನ ತೋರಿಸುತ್ತೆ.

ತ್ರಿವಿಕ್ರಮ‌ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು ಅದಕ್ಕೆ ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗು ಯೋಗರಾಜ್ ಭಟ್​ರ ಸಾಹಿತ್ಯವಿದೆ. ಅರ್ಜುನ್ ಜನ್ಯಾ ಭರ್ಜರಿ‌ ಮ್ಯೂಸಿಕ್ ಟ್ಯೂನ್ ಕೊಟ್ಟಿದ್ದು ವಿಜಯ್ ಪ್ರಕಾಶ್ ಹಾಗೂ ಸಂಚಿತ್ ಹೆಗಡೆ‌ ಹಾಡುಗಳಿಗೆ ತಮ್ಮ ಗಾಯನದಿಂದ ಹೊಸ ಆಯಾಮವೇ ನೀಡಿದ್ದಾರೆ. ತ್ರಿವಿಕ್ರಮ‌ ಸಿನಿಮಾದ ಹಾಡುಗಳ ಸೌಂಡು ಮಾರುಕಟ್ಟೆಯಲ್ಲಿ ಜೋರಾಗಿದ್ದು ಇದೀಗ ಸಿನಿಮಾದ ಮೇಲಿರೋ ನಿರೀಕ್ಷೆಯನ್ನ ಚಿತ್ರತಂಡ ಉಳಿಸಿಕೊಳ್ಳುತ್ತೆ ಅನ್ನೋ ಭರವಸೆ ಎಲ್ಲರಲ್ಲೂ ಮೂಡಿದೆ.