‘ಯುವರತ್ನ’ ಸಿನಿಮಾದ ಯುವರಾಣಿ ಡೈಲಿ ವರ್ಕೌಟ್​ ಮಾಡೋದು ಹೀಗೆ

|

Updated on: Oct 17, 2019 | 5:29 PM

ಸಾಯೆಷ ಸೇಗಲ್ ಭಾರತೀಯ ಚಿತ್ರರಂಗದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ ನಟಿ. ಮಗ್ಧ ನಟನೆಯಿಂದ ಸಿನಿಪ್ರಿಯರ ಗಮನ ಸೆಳೆದ ತಾರೆ. ಮುಂಬರುವ ಬಹುನಿರೀಕ್ಷಿತ ಸ್ಯಾಂಡಲ್​ವುಡ್​ ಯುವರತ್ನ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ನಟಿ. ಬ್ಯೂಟಿಫುಲ್​ ಸಾಯೇಷ ನಟನೆ ಮಾತ್ರವಲ್ಲ ಪರ್ಫೆಕ್ಟ್​ ಫಿಟ್ನೆಸ್​ ಕೂಡಾ ಮೇಂಟೇನ್ ಮಾಡಿದ್ದಾರೆ. ಹಾಗಾದ್ರೆ ಸಾಯೇಷ ಹೆಲ್ತಿ ಫಿಟ್ನೆಸ್​​ ಹೇಗೆ ಮೇಂಟೇನ್​ ಮಾಡ್ತಾರೆ ಅಂತೀರಾ..? ಯೆಸ್ ಇವರ ಫಿಟ್ನೆಸ್ ಗುಟ್ಟು ನಾವು ನಿಮ್ಗೆ ತಿಳಿಸ್ತೀವಿ. ಸಾಯೇಷ ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದ ಹಲವು ಸಿನಿಮಾಗಳಲ್ಲಿ […]

‘ಯುವರತ್ನ’ ಸಿನಿಮಾದ ಯುವರಾಣಿ ಡೈಲಿ ವರ್ಕೌಟ್​ ಮಾಡೋದು ಹೀಗೆ
Follow us on

ಸಾಯೆಷ ಸೇಗಲ್ ಭಾರತೀಯ ಚಿತ್ರರಂಗದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ ನಟಿ. ಮಗ್ಧ ನಟನೆಯಿಂದ ಸಿನಿಪ್ರಿಯರ ಗಮನ ಸೆಳೆದ ತಾರೆ. ಮುಂಬರುವ ಬಹುನಿರೀಕ್ಷಿತ ಸ್ಯಾಂಡಲ್​ವುಡ್​ ಯುವರತ್ನ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ನಟಿ.

ಬ್ಯೂಟಿಫುಲ್​ ಸಾಯೇಷ ನಟನೆ ಮಾತ್ರವಲ್ಲ ಪರ್ಫೆಕ್ಟ್​ ಫಿಟ್ನೆಸ್​ ಕೂಡಾ ಮೇಂಟೇನ್ ಮಾಡಿದ್ದಾರೆ. ಹಾಗಾದ್ರೆ ಸಾಯೇಷ ಹೆಲ್ತಿ ಫಿಟ್ನೆಸ್​​ ಹೇಗೆ ಮೇಂಟೇನ್​ ಮಾಡ್ತಾರೆ ಅಂತೀರಾ..? ಯೆಸ್ ಇವರ ಫಿಟ್ನೆಸ್ ಗುಟ್ಟು ನಾವು ನಿಮ್ಗೆ ತಿಳಿಸ್ತೀವಿ.

ಸಾಯೇಷ ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ಚೆಲುವೆ. ಅದರಲ್ಲೂ ಕಾಲಿವುಡ್​ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಮಣಿಯರಲ್ಲಿ ಇವರು ಕೂಡಾ ಒಬ್ಬರು. ಕಾಲಿವುಡ್​ ಬೆಡಗಿ ತಮ್ಮ ಬ್ಯುಸಿ ಶೆಡುಲ್​ ನಡುವೆಯೂ ಫಿಟ್​ ಆ್ಯಂಡ್​ ಫೈನ್​ ಆಗಿರಲು ಕಾರಣ ಇವರ ನಿತ್ಯದ ವರ್ಕೌಟ್​ ಅಂತೆ. ಯೆಸ್ ಸಾಯಿಷಾ ತಪ್ಪದೆ ಜಿಮ್​ ವರ್ಕೌಟ್ ಮಾಡ್ತಾರಂತೆ. ಇದು ಇವರ ಹೆಲ್ತಿ ಫಿಟ್ನೆಸ್ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ನಿತ್ಯ ವರ್ಕೌಟ್ ದೈಹಿಕ ಮತ್ತು ಮಾನಸಿಕವಾಗಿ ನಮ್ಮನ್ನು ಇನ್ನಷ್ಟು ಸ್ಟ್ರಾಂಗ್ ಮಾಡುತ್ತೆ ಅನ್ನೋದು ಸಾಯೇಷ ಅಭಿಪ್ರಾಯ.

ಇನ್ನು ಜಿಮ್ ವರ್ಕೌಟ್​ನಲ್ಲಿ ಇವರು ವೇಟ್​ ಟ್ರೇನಿಂಗ್​ ಎಕ್ಸಸೈಜ್​ಗಳ ಕಡೆಗೆ ಹೆಚ್ಚಿನ ಗಮನ ಹರಿಸ್ತಾರಂತೆ. ಹಾಗೆಯೆ ಲ್ಯಾಡರ್ ಡ್ರಿಲ್, ವೇಟ್ ಲಿಫ್ಟಿಂಗ್​ ಕೂಡಾ ಇವರ ವರ್ಕೌಟ್​ ರುಟಿನ್​ನಲ್ಲಿ ಇರುತ್ತಂತೆ. ನಿತ್ಯ ಯೋಗ ಮತ್ತು ದಿನಂಪ್ರತಿ ಅರ್ಧಗಂಟೆಗಳ ಕಾಲ ತಪ್ಪದೇ ವ್ಯಾಯಾಮ ಮಾಡ್ತಾರಂತೆ ಫಿಟ್ನೆಸ್​ ಪ್ರೀಕ್ ಸಾಯೇಷ. ಇದು ಹೆಚ್ಚಿನ ಪ್ರಮಾಣದ ಕ್ಯಾಲೋರಿಸ್​​ ಗಳನ್ನು ಬರ್ನ್ ಮಾಡಿ ಆರೋಗ್ಯಕರ ಮೈಕಟ್ಟು ಹೊಂದಲು ಸಹಾಯ ಮಾಡುತ್ತೆ ಅನ್ನೋದು ಇವರ ಮಾತು.

Published On - 11:33 am, Tue, 15 October 19