ಆಮ್ನಾ ಷರೀಫ್ ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ತಾರೆ. 2012 ರಿಂದ ಇಲ್ಲಿಯವರೆಗೂ ನಿರಂತರವಾಗಿ ಟಿ.ವಿ ಸೀರಿಯಲ್ಗಳಲ್ಲಿ ಕಾಣಿಸಿಕೊಂಡ ಬೆಡಗಿ. ಮುಂಬರುವ ರೂಯಿ ಅಫ್ಜಾ ಸಿನಿಮಾದಲ್ಲಿ ಬಿಂದಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಚೆಲುವೆ.
ಬಣ್ಣದ ಲೋಕಕ್ಕೆ ಬಂದು ವರ್ಷಗಳೇ ಕಳೆದರೂ ಅದೇ ಸೌಂದರ್ಯ ಮತ್ತು ಫಿಟ್ನೆಸ್ ಮೇಂಟೇನ್ ಮಾಡಿದ್ದಾರೆ ಆಮ್ನಾ. ಆಮ್ನಾ ತನ್ನ ವಯಸ್ಸನ್ನೇ ನಾಚುವಂತೆ ಫಿಟ್ ಆಗಿರಲು ಕಾರಣ ಇವರು ಮಾಡೋ ಜಿಮ್ ವರ್ಕೌಟ್. ಇವರ ಜಿಮ್ ವರ್ಕೌಟ್ ನೋಡಿ ನಿಬ್ಬೆರಗಾಗದವರಿಲ್ಲ..!
ಆಮ್ನಾ ಒಂದು ಗಂಟೆ ಕಾಲ ಜಿಮ್ ವರ್ಕೌಟ್ ಮಾಡ್ತಾರೆ. ಅದರಲ್ಲಿ ಸ್ಕ್ವಾಟ್ಸ್ , ಕೇಬಲ್ ಕ್ರಾಸ್, ಡಂಬಲ್ಸ್, ವೇಟ್ ಲಿಫ್ಟಿಂಗ್, ಪಿಲೆಟ್ಸ್ ಮೊದಲಾದವುಗಳು ಇರುತ್ತಂತೆ.
ವರ್ಕೌಟ್ ಅನ್ನೋದು ನಮ್ಮನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಫಿಟ್ ಆಗಿರಲು ಸಹಾಯ ಮಾಡುತ್ತೆ ಅಂತಾರೆ ಫಿಟ್ನೆಸ್ ಫ್ರೀಕ್ ಆಮ್ನಾ ಷರೀಫ್.
ಹಾಗೆಯೇ ದಿನದಲ್ಲಿ ಅರ್ಧಗಂಟೆ ಯೋಗ ಮತ್ತು ಮೆಡಿಟೇಷನ್ಗಾಗಿಯೂ ತಮ್ಮ ಸಮಯ ಮೀಸಲಿಡ್ತಾರೆ.ಇವರು ಮಾಡೋ ನಿತ್ಯ ವರ್ಕೌಟ್ ಆ್ಯಬ್ಸ್ಗಳ ಮೇಲೆ ಪರಿಣಾಮ ಬೀರಿ ಟೋನ್ಡ್ ಬಾಡಿ ಇವರದ್ದಾಗಿದೆಯಂತೆ.
Published On - 5:52 pm, Wed, 16 October 19