ಮುಗ್ಧ ನಟನೆಯ ಮುದ್ದು ಚೆಲುವೆ ನಿಹಾರಿಕಾ ವರ್ಕೌಟ್ ರುಟೀನ್ ಇಲ್ಲಿದೆ

ನಿಹಾರಿಕಾ ಕೊನಿಡೆಲಾ -ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬುವಿನ ಪುತ್ರಿ. ಟಿ.ವಿ ನಿರೂಪಕಿಯಾಗಿದ್ದ ಇವರು ನಂತರದಲ್ಲಿ ಸಿನಿ ಜರ್ನಿ ಆರಂಭಿಸಿದ ತಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ ನಟಿ. ಮೊದಲ ಸಿನಿಮಾದಿಂದಲೇ ಮುಗ್ಧ ನಟನೆಯಿಂದ ಎಲ್ಲರ ಮೆಚ್ಚುಗೆ ಪಡೆದುಕೊಂಡ ಬ್ಯೂಟಿ. ಸದಾ ಹಸನ್ಮುಖಿಯಾಗಿರುವ ನಿಹಾರಿಕಾ ನಟನೆ ಮಾತ್ರವಲ್ಲ ಪರ್ಫೆಕ್ಟ್​ ಫಿಟ್ನೆಸ್​ ಕೂಡಾ ಮೇಂಟೇನ್​ ಮಾಡಿದ್ದಾರೆ. ಬ್ಯೂಟಿ ಫುಲ್ ನಿಹಾರಿಕಾ ತಮ್ಮ ಫಿಟ್ನೆಸ್ ಸೀಕ್ರೆಟ್​ ಅನ್ನು ಈಗಾಗ್ಲೇ ಹಂಚಿಕೊಂಡಿದ್ದಾರೆ. ಅವರ ಫಿಟ್ನೆಸ್ […]

ಮುಗ್ಧ ನಟನೆಯ ಮುದ್ದು ಚೆಲುವೆ ನಿಹಾರಿಕಾ ವರ್ಕೌಟ್ ರುಟೀನ್ ಇಲ್ಲಿದೆ
ಸಾಧು ಶ್ರೀನಾಥ್​

Updated on: Oct 20, 2019 | 3:32 PM

ನಿಹಾರಿಕಾ ಕೊನಿಡೆಲಾ -ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬುವಿನ ಪುತ್ರಿ. ಟಿ.ವಿ ನಿರೂಪಕಿಯಾಗಿದ್ದ ಇವರು ನಂತರದಲ್ಲಿ ಸಿನಿ ಜರ್ನಿ ಆರಂಭಿಸಿದ ತಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ ನಟಿ. ಮೊದಲ ಸಿನಿಮಾದಿಂದಲೇ ಮುಗ್ಧ ನಟನೆಯಿಂದ ಎಲ್ಲರ ಮೆಚ್ಚುಗೆ ಪಡೆದುಕೊಂಡ ಬ್ಯೂಟಿ. ಸದಾ ಹಸನ್ಮುಖಿಯಾಗಿರುವ ನಿಹಾರಿಕಾ ನಟನೆ ಮಾತ್ರವಲ್ಲ ಪರ್ಫೆಕ್ಟ್​ ಫಿಟ್ನೆಸ್​ ಕೂಡಾ ಮೇಂಟೇನ್​ ಮಾಡಿದ್ದಾರೆ.

ಬ್ಯೂಟಿ ಫುಲ್ ನಿಹಾರಿಕಾ ತಮ್ಮ ಫಿಟ್ನೆಸ್ ಸೀಕ್ರೆಟ್​ ಅನ್ನು ಈಗಾಗ್ಲೇ ಹಂಚಿಕೊಂಡಿದ್ದಾರೆ. ಅವರ ಫಿಟ್ನೆಸ್ ಗುಟ್ಟು ನಿತ್ಯದ ವರ್ಕೌಟ್ ಅಂತೆ. ಹಾಗಾದ್ರೆ ಇವರ ವರ್ಕೌಟ್​ ರುಟಿನ್​ನಲ್ಲಿ ಏನೇನಿರುತ್ತೆ ಅಂತೀರಾ. ಇವರು ಪ್ರತಿದಿನ ತಪ್ಪದೆ ಜಿಮ್​ ವರ್ಕೌಟ್ ಮಾಡ್ತಾರಂತೆ. ಇದು ಇವರನ್ನು ಫಿಟ್ ಆ್ಯಂಡ್​ ಫೈನ್ ಆಗಿರುವುದಕ್ಕೆ ಸಹಕಾರಿಯಾಗಿದೆಯಂತೆ.

ಇನ್ನು ನಿಹಾರಿಕಾ ಅವರ ವರ್ಕೌಟ್​ನಲ್ಲಿ ಪ್ಲಾಂಕ್ಸ್​, ಬ್ಯಾಟಲ್​ ರೋಪ್​ ಎಕ್ಸ್​ಸೈಜ್, ಕೋರ್ ಎಕ್ಸ್​ಸೈಜ್ ಮತ್ತು ವೇಟ್​ ಟ್ರೇನಿಂಗ್ ವ್ಯಾಯಾಮಗಳು ಇರುತ್ತೆ. ಈ ಎಕ್ಸ್​ಸೈಜ್​ಗಳು ಇವರನ್ನು ಮತ್ತಷ್ಟು ಸ್ಟ್ರಾಂಗ್​ ಮಾಡಿದೆಯಂತೆ.

ಇಷ್ಟು ಮಾತ್ರವಲ್ಲದೆ ಕ್ಲೈಂಬಿಂಗ್, ಎಲಿಪ್ಟಿಕಲ್ ಮತ್ತು ಟ್ರೆಡ್ಮಿಲ್ ಕೂಡಾ ಮಾಡ್ತಾರಂತೆ ಈ ಚೆಲುವೆ. ನಿತ್ಯ ವರ್ಕೌಟ್​ಗಳು ಸ್ಟ್ರೆಸ್ ರೆಡ್ಯೂಸ್ ಮಾಡಿ. ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಆಗಿರುವಂತೆ ಮಾಡಿದೆ ಅಂತಾರೆ ನಿಹಾರಿಕಾ.

ದಿನದಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿಯೋ ಅಭ್ಯಾಸ ಬೆಳೆಸಿಕೊಂಡಿದ್ದಾರೆ ನಿಹಾರಿಕಾ. ಇಂಟ್ರೆಸ್ಟಿಂಗ್ ಅಂದ್ರೆ ನೀರು ಕುಡಿಯೋದಕ್ಕೋಸ್ಕರ ಅಲರಾಂ ಕೂಡಾ ಸೆಟ್ ಮಾಡಿದ್ದಾರಂತೆ. ಯಾಕಂದ್ರೆ ನೀರು ಶರೀರವನ್ನು ತೇವಾಂಶದಿಂದ ಇರುವಂತೆ ಮಾಡಿ, ತ್ವಚೆ ಹೆಲ್ತಿ ಆಗುತ್ತಂತೆ.

Published On - 7:07 pm, Fri, 18 October 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us