ಫಿಟ್ನೆಸ್​ಗಾಗಿ ನಿತ್ಯ ಇದನ್ನ ತಪ್ಪದೆ ಮಾಡ್ತಾರಂತೆ ಬೆಂಗಾಲಿ ಬೆಡಗಿ ನುಸ್ರತ್ ಜಹಾನ್!

|

Updated on: Oct 15, 2019 | 7:13 AM

ನುಸ್ರತ್ ಜಹಾನ್ ಬೆಂಗಾಲಿ ನಟಿ ಹಾಗೂ ಸಂಸದೆ. ಚಿತ್ರರಂಗದಲ್ಲಿ ಫೇಮಸ್ ಆಗಿರೋ ನುಸ್ರತ್ ರಾಜಕೀಯ ಕ್ಷೇತ್ರದಲ್ಲೂ ಸುದ್ದಿಯಲ್ಲಿರುವ ತಾರೆ. ನಟನೆ ಮತ್ತು ರಾಜಕೀಯದಲ್ಲಿ ಸಕ್ರಿಯವಾಗಿರುವ ನುಸ್ರತ್ ಪರ್ಫೆಕ್ಟ್ ಫಿಟ್ನೆಸ್ ಕೂಡಾ ಮೇಂಟೇನ್ ಮಾಡಿದ್ದಾರೆ. ಗಾರ್ಜಿಯಸ್ ನುಸ್ರತ್ ಫಿಟ್ನೆಸ್ ಗುಟ್ಟೇನು ಎಂಬುದನ್ನ ಹಂಚಿಕೊಂಡಿದ್ದಾರೆ. ನನ್ನ ಮೆಟಬೋಲಿಸಂ ಸ್ಟ್ರಾಂಗ್ ಇರುವುದರಿಂದ ಫಿಟ್ ಆಗೋಕೆ ಜಿಮ್​ನಲ್ಲಿ ಬೆವರಿಳಿಸೋ ಅವಶ್ಯಕತೆ ಇಲ್ಲ ಅಂತಾರೆ ನುಸ್ರತ್. ಆದ್ರೆ ತಮ್ಮನ್ನು ತಾವು ಫಿಟ್ ಆಗಿರುವುದಕ್ಕೆ ಕಾರ್ಡಿಯೋ ಎಕ್ಸ್​ಸೈಜ್ ಮಾಡ್ತಾರೆ. ಹಾಗೆಯೇ ನಿತ್ಯ ಅಭ್ಯಾಸದಲ್ಲಿ ರನ್ನಿಂಗ್ ಇವರ […]

ಫಿಟ್ನೆಸ್​ಗಾಗಿ ನಿತ್ಯ ಇದನ್ನ ತಪ್ಪದೆ ಮಾಡ್ತಾರಂತೆ ಬೆಂಗಾಲಿ ಬೆಡಗಿ ನುಸ್ರತ್ ಜಹಾನ್!
Follow us on

ನುಸ್ರತ್ ಜಹಾನ್ ಬೆಂಗಾಲಿ ನಟಿ ಹಾಗೂ ಸಂಸದೆ. ಚಿತ್ರರಂಗದಲ್ಲಿ ಫೇಮಸ್ ಆಗಿರೋ ನುಸ್ರತ್ ರಾಜಕೀಯ ಕ್ಷೇತ್ರದಲ್ಲೂ ಸುದ್ದಿಯಲ್ಲಿರುವ ತಾರೆ. ನಟನೆ ಮತ್ತು ರಾಜಕೀಯದಲ್ಲಿ ಸಕ್ರಿಯವಾಗಿರುವ ನುಸ್ರತ್ ಪರ್ಫೆಕ್ಟ್ ಫಿಟ್ನೆಸ್ ಕೂಡಾ ಮೇಂಟೇನ್ ಮಾಡಿದ್ದಾರೆ.

ಗಾರ್ಜಿಯಸ್ ನುಸ್ರತ್ ಫಿಟ್ನೆಸ್ ಗುಟ್ಟೇನು ಎಂಬುದನ್ನ ಹಂಚಿಕೊಂಡಿದ್ದಾರೆ. ನನ್ನ ಮೆಟಬೋಲಿಸಂ ಸ್ಟ್ರಾಂಗ್ ಇರುವುದರಿಂದ ಫಿಟ್ ಆಗೋಕೆ ಜಿಮ್​ನಲ್ಲಿ ಬೆವರಿಳಿಸೋ ಅವಶ್ಯಕತೆ ಇಲ್ಲ ಅಂತಾರೆ ನುಸ್ರತ್. ಆದ್ರೆ ತಮ್ಮನ್ನು ತಾವು ಫಿಟ್ ಆಗಿರುವುದಕ್ಕೆ ಕಾರ್ಡಿಯೋ ಎಕ್ಸ್​ಸೈಜ್ ಮಾಡ್ತಾರೆ. ಹಾಗೆಯೇ ನಿತ್ಯ ಅಭ್ಯಾಸದಲ್ಲಿ ರನ್ನಿಂಗ್ ಇವರ ಫೇವರೇಟ್ ಅಂತೆ. ಹಾಗಾಗಿ ದಿನಂಪ್ರತಿ ತಪ್ಪದೆ ರನ್ನಿಂಗ್ ಮಾಡ್ತಾರೆ ನುಸ್ರತ್.

ಇವರ ಬ್ಯೂಟಿ ಮತ್ತು ಫಿಟ್ನೆಸ್​ನ ಗುಟ್ಟು ನಿತ್ಯ ಯೋಗ. ನುಸ್ರತ್ ಅವರಿಗೆ ದೈಹಿಕ ಮತ್ತು ಮಾನಸಿಕವಾಗಿ ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಯೋಗವಂತೆ. ಇನ್ನಷ್ಟು ಯಂಗ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣಲು ಇದು ಸಹಕಾರಿಯಾಗಿದೆ ಅನ್ನೋದು ಇವರ ಅಭಿಪ್ರಾಯ. ದಿನದಲ್ಲಿ ಅರ್ಧ ಗಂಟೆಗಳ ಕಾಲ ವಿವಿಧ ಭಂಗಿಯಲ್ಲಿ ಯೋಗ ಮಾಡಿ ಫಿಟ್ ಆಗಿದ್ದಾರಂತೆ ಈ ಚೆಲುವೆ.
ಡ್ಯಾನ್ಸ್ ಕೂಡಾ ಇವರ ಫಿಟ್ನೆಸ್​ನಲ್ಲಿ ಪ್ರಮುಖ ಪಾತ್ರವಹಿಸಿದೆಯಂತೆ. ಡ್ಯಾನ್ಸ್​ ಮಾಡುವುದ್ರಿಂದ ಟೋನ್ಡ್​ ಬಾಡಿ ಇವರದ್ದಾಗಿದೆಯಂತೆ.

Published On - 3:49 pm, Sat, 12 October 19