ಆಕರ್ಷಕ ಮೈಕಟ್ಟಿಗಾಗಿ ಜಿಮ್​ನಲ್ಲಿ ಹೀಗೆ ವರ್ಕೌಟ್ ಮಾಡ್ತಾರಂತೆ ಈ ನಟಿ

|

Updated on: Oct 21, 2019 | 7:43 PM

ಮೇಘ ಆಕಾಶ್ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಬ್ಯೂಟಿಫುಲ್ ನಟಿ. ತಮಿಳು, ತೆಲುಗು ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಬೆಡಗಿ. ಅದ್ರಲ್ಲೂ ಕಾಲಿವುಡ್​ಗೆ ಎಂಟ್ರಿ ಕೊಟ್ಟ ಒಂದೇ ವರ್ಷದಲ್ಲಿ ಸಿನಿಪ್ರಿಯರನ್ನು ಮೋಡಿ ಮಾಡಿದ ಬ್ಯೂಟಿ. ಮೇಘಾ ಅವರ ನಟನೆಗೆ ಮನಸೋತ ಸಿನಿರಸಿಕರು ಅವರ ಸೌಂದರ್ಯ ಮತ್ತು ಪರ್ಫೆಕ್ಟ್​ ಫಿಟ್ನೆಸ್​ಗೂ ಫಿದಾ ಆಗಿದ್ದಾರೆ. ಫಿಟ್ನೆಸ್ ಪ್ರೀಕ್ ಮೇಘಾ ಈಗಾಗ್ಲೇ ತಮ್ಮ ಆರೋಗ್ಯಕರ ಮೈಕಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇವರ ಪರ್ಫೆಕ್ಟ್ ಫಿಟ್ನೆಸ್​ ಗುಟ್ಟು […]

ಆಕರ್ಷಕ ಮೈಕಟ್ಟಿಗಾಗಿ ಜಿಮ್​ನಲ್ಲಿ ಹೀಗೆ ವರ್ಕೌಟ್ ಮಾಡ್ತಾರಂತೆ ಈ ನಟಿ
Follow us on

ಮೇಘ ಆಕಾಶ್ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಬ್ಯೂಟಿಫುಲ್ ನಟಿ. ತಮಿಳು, ತೆಲುಗು ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಬೆಡಗಿ. ಅದ್ರಲ್ಲೂ ಕಾಲಿವುಡ್​ಗೆ ಎಂಟ್ರಿ ಕೊಟ್ಟ ಒಂದೇ ವರ್ಷದಲ್ಲಿ ಸಿನಿಪ್ರಿಯರನ್ನು ಮೋಡಿ ಮಾಡಿದ ಬ್ಯೂಟಿ. ಮೇಘಾ ಅವರ ನಟನೆಗೆ ಮನಸೋತ ಸಿನಿರಸಿಕರು ಅವರ ಸೌಂದರ್ಯ ಮತ್ತು ಪರ್ಫೆಕ್ಟ್​ ಫಿಟ್ನೆಸ್​ಗೂ ಫಿದಾ ಆಗಿದ್ದಾರೆ.

ಫಿಟ್ನೆಸ್ ಪ್ರೀಕ್ ಮೇಘಾ ಈಗಾಗ್ಲೇ ತಮ್ಮ ಆರೋಗ್ಯಕರ ಮೈಕಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇವರ ಪರ್ಫೆಕ್ಟ್ ಫಿಟ್ನೆಸ್​ ಗುಟ್ಟು ನಿತ್ಯದ ವರ್ಕೌಟ್ ಅಂತೆ. ದಿನಂಪ್ರತಿ ತಪ್ಪದೆ ಜಿಮ್​ನಲ್ಲಿ ವರ್ಕೌಟ್​ ಮಾಡ್ತಾರಂತೆ. ಅದರಲ್ಲಿ ವೇಟ್​ ಟ್ರೇನಿಂಗ್ ಮತ್ತು ಫಂಕ್ಷನಲ್​ ಎಕ್ಸ್​ಸೈಜ್​ಗಳ ಕಡೆಗೆ ಹೆಚ್ಚಿನ ಗಮನ ಹರಿಸಿ ಫಿಟ್ ಆಗಿದ್ದಾರಂತೆ ಈ ಚೆಲುವೆ.

ಇನ್ನು ಇವರ ವರ್ಕೌಟ್​ನಲ್ಲಿ ಪ್ಲಾಂಕ್ಸ್​, ಬ್ಯಾಟಲ್​ ರೋಪ್​ ಎಕ್ಸ್​ಸೈಜ್, ಕೋರ್ ಎಕ್ಸ್​ಸೈಜ್ ಮತ್ತು ವೇಟ್​ ಟ್ರೇನಿಂಗ್ ವ್ಯಾಯಾಮಗಳು ಇರುತ್ತೆ. ಈ ಎಲ್ಲ ಎಕ್ಸ​ಸೈಜ್​ಗಳು ಇವರನ್ನು ಮತ್ತಷ್ಟು ಚೈತನ್ಯದಿಂದ ಇರುವಂತೆ ಮಾಡಿದೆಯಂತೆ.

ನಿತ್ಯದ ವರ್ಕೌಟ್​ಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಆಗಿರುವಂತೆ ಮಾಡಿದೆ ಅಂತಾರೆ ಮೇಘಾ. ದಿನದಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿಯೋ ಅಭ್ಯಾಸ ಕೂಡಾ ಬೆಳೆಸಿಕೊಂಡಿದ್ದಾರೆ. ಇದು ಇವರ ಹೆಲ್ತಿ ಫಿಟ್ನೆಸ್​ನ ಇನ್ನೊಂದು ಗುಟ್ಟು. ಯಾಕಂದ್ರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದ್ರಿಂದ ತ್ವಚೆ ತೇವಾಂಶವನ್ನು ಕಾಯ್ದುಕೊಳ್ಳುವುದಕ್ಕೆ ಸಹಕಾರಿಯಾಗುತ್ತೆ ಅನ್ನೋದು ಇವರ ಮಾತು.

 

Published On - 7:42 pm, Mon, 21 October 19