ನಟ ಯಶ್ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್. ರಾಷ್ಟ್ರ ಮಟ್ಟದಲ್ಲಿ ಅವರಿಗೆ ಬೇಡಿಕೆ ಇದೆ. ಮುಂಬೈಗೆ ಹೋದರೆ ಅವರನ್ನು ಗುರುತಿಸುತ್ತಾರೆ. ಪಾಪರಾಜಿಗಳು ಯಶ್ ಫೋಟೋ ತೆಗೆಯಲು ಮುಗಿಬೀಳುತ್ತಾರೆ. ಇತ್ತೀಚೆಗೆ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್ಗೆ ಮುಂಬೈಗೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರು ಕನ್ನಡದಲ್ಲೇ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ರಾಕಿಂಗ್ ಸ್ಟಾರ್ ಉತ್ತರ ಸಖತ್ ಸ್ವೀಟ್ ಆಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕನ್ನಡದ ಮೇಲೆ ಸಾಕಷ್ಟು ಪ್ರೀತಿ ಇದೆ. ಮುಂಬೈಗೆ ತೆರಳಿದಾಗ ಅವರನ್ನು ಕನ್ನಡದಲ್ಲಿ ಯಾರಾದರೂ ಮಾತನಾಡಿಸಿದರೆ ಅವರು ಪ್ರೀತಿಯಿಂದ ಉತ್ತರ ನೀಡುತ್ತಾರೆ. ಈಗ ಅವರು ಮುಂಬೈನಲ್ಲಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಸೆಟ್ಗೆ ಹೋಗಲು ಬೋಟ್ ಏರಿದ್ದಾರೆ. ಈ ವೇಳೆ ಅವರನ್ನು ಅಲ್ಲಿನ ವ್ಯಕ್ತಿ ಕನ್ನಡದಲ್ಲಿ ಮಾತನಾಡಿಸಲು ಪ್ರಯತ್ನಿಸಿದ್ದಾರೆ.
‘ಯಶ್, ಯಶ್..’ ಎಂದು ಅನೇಕರು ಕರೆದಿದ್ದಾರೆ. ಆದರೆ, ಯಾರೊಬ್ಬರಿಗೂ ಯಶ್ ಅವರು ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ಅಲ್ಲಿದ್ದ ವ್ಯಕ್ತಿ, ‘ಅಣ್ಣ ಹೇಗಿದ್ದೀರಾ’ ಎಂದು ಕನ್ನಡದಲ್ಲೇ ಮಾತನಾಡಿದ್ದಾರೆ. ಅವರು ಪ್ರಶ್ನೆ ಕೇಳಿದ ಶೈಲಿಯಲ್ಲೇ ಅವರು ಕನ್ನಡದವರಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಯಶ್ ಉತ್ತರಿಸಿದ್ದಾರೆ. ‘ನಾವು ಚೆನ್ನಾಗಿದೀವಿ, ನೀವು ಹೇಗಿದೀರಾ’ ಎಂದು ಉತ್ತರಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.
Getting superstar treatment in Mumbai, reporters trying to approach him in Kannada… He is the real Game Changer for KFI
The name is Yash 🫡pic.twitter.com/OITPws82sX
— Insulter (@Insulter3730010) November 10, 2024
Location – Mumbai
Random guy : “ಅಣ್ಣ ಹೇಗಿದೀರಾ !?”@TheNameIsYash : ನಾವು ಚೆನ್ನಾಗಿದೀವಿ, ನೀವು ಹೇಗಿದೀರಾ !? 💛❤️#YashBOSS #ToxicTheMovie. pic.twitter.com/oXcFUFr22A
— 𝙍𝙎𝙆 (@RSKTheMonsters) November 10, 2024
ಯಶ್ ಅವರು ಮುಖಕ್ಕೆ ಮಾಸ್ಕ್ ಹಾಕಿದ್ದರು. ಅದನ್ನು ತೆಗೆಯುವಂತೆ ಯಶ್ಗೆ ಪದೇ ಪದೇ ಬಂದಿದೆ. ‘ಮಾಸ್ಕ್ ತೆಗಿ ಅಣ್ಣಾ’ ಎಂದು ಕೇಳಲಾಗಿದೆ. ಆದರೆ, ಧೂಳಿನ ಕಾರಣಕ್ಕೆ ಯಶ್ ಅವರು ಮಾಸ್ಕ್ ತೆಗೆಯಲಿಲ್ಲ. ಯಶ್ ಅವರ ಸುತ್ತ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಇದ್ದರು.
ಇದನ್ನೂ ಓದಿ:‘ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಅಂದ್ರು’; ಯಶ್ ಸಹಾಯ ನೆನೆದು ಭಾವುಕರಾದ ‘ಕೆಜಿಎಫ್’ ಚಾಚಾ
ಯಶ್ ಜೊತೆ ಕಿಯಾರಾ ಅಡ್ವಾಣಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ಈ ಚಿತ್ರದಲ್ಲಿ ನಟಿಸುತ್ತಿರುವುದ ಖಚಿತವಾಗಿದೆ. ಈ ಸಿನಿಮಾ ಮೂಲಕ ಕಿಯಾರಾ ಅವರು ಕನ್ನಡಕ್ಕೆ ಕಾಲಿಟ್ಟಂತೆ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Mon, 11 November 24