ಕಿಯಾರಾ ಕುಟುಂಬ ವಿಷಯದಲ್ಲಿ ನಡೆಯಿತು ಎಡವಟ್ಟು; ಸಿದ್ದಾರ್ಥ್-ಕಿಯಾರಾ ವಿಶೇಷ ಮನವಿ

ಏರ್‌ಪೋರ್ಟ್ ವಿಡಿಯೋದಲ್ಲಿ ಮಗಳು ಸರಾಯಾ ಮುಖ ಕಾಣಿಸಿಕೊಂಡ ಬೆನ್ನಲ್ಲೇ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪಾಪರಾಜಿಗಳಿಗೆ ಮನವಿ ಮಾಡಿದ್ದಾರೆ. ವಿಡಿಯೋ ಹಂಚಿಕೊಳ್ಳದಂತೆ ಹಾಗೂ ಮಗುವಿನ ಮುಖಕ್ಕೆ ಎಮೋಜಿ ಹಾಕುವಂತೆ ಕೇಳಿಕೊಂಡಿದ್ದಾರೆ. ದಂಪತಿ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಕಿಯಾರಾ ಕುಟುಂಬ ವಿಷಯದಲ್ಲಿ ನಡೆಯಿತು ಎಡವಟ್ಟು; ಸಿದ್ದಾರ್ಥ್-ಕಿಯಾರಾ ವಿಶೇಷ ಮನವಿ
ಕಿಯಾರಾ-ಸಿದ್ದಾರ್ಥ್
Edited By:

Updated on: Nov 19, 2026 | 10:51 AM

ಬಾಲಿವುಡ್ ತಾರಾ ದಂಪತಿ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮಗಳು ಸರಾಯಾ ಖಾಸಗಿತನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಮನವಿ ಮಾಡಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸೆರೆಯಾದ ವಿಡಿಯೋವೊಂದರಲ್ಲಿ ಒಂದು ವರ್ಷದ ಮಗುವಿನ ಮುಖ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ದಂಪತಿ ಪಾಪರಾಜಿಗಳಿಗೆ ವಿಶೇಷ ವಿನಂತಿ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮಗಳನ್ನು ಎತ್ತಿಕೊಂಡು ನಡೆಯುತ್ತಿರುವುದು ಕಂಡುಬಂದಿದೆ. ಕಿಯಾರಾ ಅಡ್ವಾಣಿ ಅವರ ಪಕ್ಕದಲ್ಲೇ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಮಗುವಿನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಕ್ಷಣವೇ ಕಿಯಾರಾ ಬಟ್ಟೆಯಿಂದ ಮಗಳ ಮುಖ ಮುಚ್ಚಲು ಪ್ರಯತ್ನಿಸಿದ್ದಾರೆ. ಆದರೂ ಈ ದೃಶ್ಯಗಳು ಅನೇಕ ಪೇಜ್‌ಗಳಲ್ಲಿ ಹರಿದಾಡಲು ಶುರುವಾಗಿದೆ.

Loading...

ತಮ್ಮ ತಂಡದ ಮೂಲಕ ಸಿದ್ದಾರ್ಥ್ ಮತ್ತು ಕಿಯಾರಾ ಮಾಧ್ಯಮಗಳಿಗೆ ಸಂದೇಶ ರವಾನಿಸಿದ್ದಾರೆ. ಮಗಳ ವಿಡಿಯೋವನ್ನು ಪೋಸ್ಟ್ ಮಾಡದಂತೆ ಅವರು ವಿನಂತಿಸಿದ್ದಾರೆ. ಒಂದು ವೇಳೆ ವಿಡಿಯೋ ಹಂಚಿಕೊಂಡರೂ ಮಗುವಿನ ಮುಖಕ್ಕೆ ಎಮೋಜಿ ಹಾಕಿ ಮರೆಮಾಚಬೇಕು ಎಂದು ಕೇಳಿಕೊಂಡಿದ್ದಾರೆ. ಕುಟುಂಬದ ಖಾಸಗಿತನವನ್ನು ಗೌರವಿಸಿ ಸಹಕರಿಸುವಂತೆ ದಂಪತಿ ಮನವಿ ಮಾಡಿದ್ದಾರೆ.

2025ರ ಜುಲೈ 15ರಂದು ಜನಿಸಿದ ಸರಾಯಾಳನ್ನು ದಂಪತಿ ಇದುವರೆಗೂ ಸಾರ್ವಜನಿಕರ ಕಣ್ಣಿನಿಂದ ದೂರವೇ ಇಟ್ಟಿದ್ದಾರೆ. ಸಿದ್ದಾರ್ಥ್ ಮತ್ತು ಕಿಯಾರಾ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನು ಅಕ್ಟೋಬರ್ ತಿಂಗಳಲ್ಲಿ ಹಂಚಿಕೊಂಡಿದ್ದರು. ಪುಟ್ಟ ಸಾಕ್ಸ್ ಹಿಡಿದಿರುವ ಫೋಟೋ ಪೋಸ್ಟ್ ಮಾಡಿ ತಮ್ಮ ಸಂತಸವನ್ನು ಅಭಿಮಾನಿಗಳೊಂದಿಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ‘ಟಾಕ್ಸಿಕ್’ ಬೋಲ್ಡ್ ದೃಶ್ಯ ನೋಡಿ ಸಿದ್ದಾರ್ಥ್ ಹೇಳಿದ್ದೇನು? ಕೊನೆಗೂ ಮೌನ ಮುರಿದ ಕಿಯಾರಾ

ಇತ್ತೀಚೆಗೆ ‘ಕಾಫಿ ವಿತ್ ಕರಣ್’ ಶೋನಲ್ಲೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು ಪೋಷಕರಾದ ಅನುಭವ ಹಂಚಿಕೊಂಡಿತ್ತು. ಕಿಯಾರಾ ಧರಿಸಿದ್ದ ಕೆಂಪು ಗೌನ್‌ನಲ್ಲಿ ಬೇಬಿ ಬಂಪ್ ಎದ್ದು ಕಾಣುತ್ತಿತ್ತು. 2023ರ ಫೆಬ್ರವರಿ 7ರಂದು ರಾಜಸ್ಥಾನದ ಸೂರ್ಯಗಢ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಈಗ ಎರಡನೇ ಮಗುವಿನ ಸ್ವಾಗತಕ್ಕೆ ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:50 am, Thu, 19 November 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us