‘ವಾರಣಾಸಿ’ ಸಿನಿಮಾದ ಪ್ರಚಾರ ಹೇಗಿರಲಿದೆ? ಮೀಸಲಿಟ್ಟಿರುವ ಬಜೆಟ್ ಎಷ್ಟು?

ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ನೋಡಲು ಭಾರತದಲ್ಲಿ ಮಾತ್ರವೇ ಅಲ್ಲ ವಿಶ್ವದಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾಕ್ಕೆ ಭಾರಿ ದೊಡ್ಡ ಬಜೆಟ್ ಅನ್ನು ಹೂಡಿಕೆ ಮಾಡಲಾಗಿದ್ದು, ಸಿನಿಮಾದ ಚಿತ್ರೀಕರಣ ಮುಗಿದಿದೆ. ಇದೀಗ ಸಿನಿಮಾದ ಪ್ರಚಾರ ಶುರುವಾಗಲಿದ್ದು, ರಾಜಮೌಳಿ ಅವರು ಸಿನಿಮಾದ ಪ್ರಮೋಷನ್​​ಗೆ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ. ಭಾರಿ ಮೊತ್ತವನ್ನು ಅದಕ್ಕಾಗಿ ಖರ್ಚು ಸಹ ಮಾಡಲಿದ್ದಾರೆ.

‘ವಾರಣಾಸಿ’ ಸಿನಿಮಾದ ಪ್ರಚಾರ ಹೇಗಿರಲಿದೆ? ಮೀಸಲಿಟ್ಟಿರುವ ಬಜೆಟ್ ಎಷ್ಟು?
Varanasi Movie

Updated on: Sep 17, 2026 | 5:00 PM

ಮುಖ್ಯಾಂಶಗಳು

  • ವಾರಣಾಸಿ ಸಿನಿಮಾ ಬಿಡುಗಡೆಗೆ ಹತ್ತಿರ ಆಗುತ್ತಿದೆ.
  • ರಾಜಮೌಳಿ ಅವರು ಸಿನಿಮಾದ ಪ್ರಚಾರಕ್ಕೆ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ.
  • ವಾರಣಾಸಿ ಸಿನಿಮಾದ ಪ್ರಚಾರಕ್ಕೆ ಭಾರಿ ದೊಡ್ಡ ಬಜೆಟ್ ಮೀಸಲಿಡಲಾಗಿದೆ.

‘ವಾರಣಾಸಿ’ ಭಾರತದ ಮಾತ್ರವಲ್ಲ ವಿಶ್ವ ಸಿನಿಮಾ ರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ಒಟ್ಟಿಗೆ ನಟಿಸಿರುವ ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ವಾರಣಾಸಿ’ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ ಸಿನಿಮಾ ಎನ್ನಲಾಗುತ್ತಿದ್ದು, ಸಿನಿಮಾಕ್ಕಾಗಿ ಭಾರಿ ದೊಡ್ಡ ಮೊತ್ತವನ್ನು ನಿರ್ಮಾಪಕರು ಖರ್ಚು ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪ್ರಚಾರದ ಯೋಜನೆಯೂ ಸಹ ಬಹುತೇಕ ಸಿದ್ಧವಾಗಿದೆ. ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಊಹೆ ಸಹ ಮಾಡದಷ್ಟು ದೊಡ್ಡ ಮೊತ್ತವನ್ನು ಪ್ರಚಾರಕ್ಕಾಗಿ ಮೀಸಲಿಡಲಾಗಿದೆ.

‘ವಾರಣಾಸಿ’ ಸಿನಿಮಾದ ಪ್ರಚಾರವನ್ನು ಭಾರಿ ಅದ್ಧೂರಿಯಾಗಿ ಮಾಡಲು ಚಿತ್ರತಂಡ ಸಜ್ಜಾಗಿದೆ. ವಿಶೇಷವೆಂದರೆ ಈ ಬಾರಿ ರಾಜಮೌಳಿಯ ಗುರಿ ವಿದೇಶಿ ಮಾರುಕಟ್ಟೆ ಆಗಿರುವ ಕಾರಣ, ಬೇರೆ ಬೇರೆ ದೇಶಗಳಲ್ಲಿ ‘ವಾರಣಾಸಿ’ ಸಿನಿಮಾದ ಪ್ರಚಾರವನ್ನು ಭಾರಿ ಅದ್ಧೂರಿಯಾಗಿ ಮಾಡಲಿದ್ದಾರೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರತ್ಯೇಕ ಪ್ರೀ ರಿಲೀಸ್ ಕಾರ್ಯಕ್ರಮ, ಸಂದರ್ಶನಗಳು, ಪತ್ರಿಕಾಗೋಷ್ಠಿಗಳು ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಯೋಜಿಸಲಾಗಿದೆ.

ಇನ್ನು ಭಾರತದಲ್ಲಿ ಸಹ ಪ್ರಚಾರ ನಡೆಯಲಿದ್ದು, ಭಾರತದ ಎರಡು ಪ್ರಮುಖ ನಗರಗಳಲ್ಲಿ ಭಾರಿ ಬೃಹತ್ ಮಟ್ಟದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜನೆಗೆ ರಾಜಮೌಳಿ ಯೋಜನೆ ಹಾಕಿದ್ದಾರೆ. ದೇಶದ ಅತ್ಯಂತ ಗಣ್ಯ ವ್ಯಕ್ತಿಯೊಬ್ಬರನ್ನು ಆ ಕಾರ್ಯಕ್ರಮದ ಅತಿಥಿಯಾಗಿ ಆಹ್ವಾನಿಸುವ ಯೋಜನೆಯೂ ಸಹ ಇದೆಯಂತೆ.

ಇದನ್ನೂ ಓದಿ:‘ವಾರಣಾಸಿ’ಯ ಹಾಡು, ಹಿನ್ನೆಲೆ ಸಂಗೀತದ ಬಗ್ಗೆ ಕೀರವಾಣಿ ಬಿಟ್ಟಿಚ್ಚ ಆಸಕ್ತಿಕರ ಮಾಹಿತಿ

ಪ್ರಚಾರದ ಬಜೆಟ್

ಇನ್ನು ಈ ಸಿನಿಮಾಕ್ಕೆ ಎರಡು ರೀತಿಯ ಪ್ರಚಾರ ಬಜೆಟ್ ನಿಗದಿ ಪಡಿಸಲಾಗಿದೆ. ಸಿನಿಮಾ ಬಿಡುಗಡೆಗೆ ಮುಂಚೆ ಮಾಡಲಿರುವ ಪ್ರಚಾರಕ್ಕೆ ಸುಮಾರು 200 ಕೋಟಿ ರೂಪಾಯಿ ಬಜೆಟ್​​ ಮೀಸಲಾಗಿದೆ. ಸಿನಿಮಾ ಬಿಡುಗಡೆ ಆದ ಬಳಿಕ ಅಂದರೆ ಆಸ್ಕರ್ ಸೇರಿದಂತೆ ವಿಶ್ವದ ಪ್ರಮುಖ ಸಿನಿಮಾ ಪ್ರಶಸ್ತಿಗಳಿಗಾಗಿ ಪ್ರತ್ಯೇಕ ಬಜೆಟ್​​ ನಿಗದಿ ಪಡಿಸಲಾಗಿದ್ದು, ಈ ಬಜೆಟ್ ಸಿನಿಮಾದ ಮೂಲ ಪ್ರಚಾರದ ಬಜೆಟ್​​ಗಿಂತ ಐದು ಪಟ್ಟು ಹೆಚ್ಚಾಗಿದೆ.

‘ಆರ್​​​ಆರ್​​ಆರ್’ ಸಿನಿಮಾವನ್ನು ಆಸ್ಕರ್​​ಗೆ ಕೊಂಡೊಯ್ದು ಹಾಡಿಗಾಗಿ ಆಸ್ಕರ್ ಗೆದ್ದ ರಾಜಮೌಳಿ ಈ ಬಾರಿ ‘ವಾರಣಾಸಿ’ ಸಿನಿಮಾಕ್ಕೆ ಇನ್ನೂ ಹಲವು ವಿಭಾಗಗಳಲ್ಲಿ ಆಸ್ಕರ್ ಕೊಡಿಸುವ ಆಶಯವಿದ್ದು, ಇದೇ ಕಾರಣಕ್ಕೆ ಆಸ್ಕರ್​, ಗೋಲ್ಡನ್ ಗ್ಲೋಬ್, ಭಾಫ್ತಾ ಇನ್ನೂ ಕೆಲ ಪ್ರತಿಷ್ಠಿತ ಪ್ರಶಸ್ತಿಗಳಿಗಾಗಿ ವಿಶೇಷ ಬಜೆಟ್​​ ಅನ್ನು ಮೀಸಲಿರಿಸಿದ್ದಾರೆ. ಪ್ರಶಸ್ತಿ ಪ್ರಚಾರಕ್ಕೆ ಸುಮಾರು 1000 ಕೋಟಿ ಬಜೆಟ್​​ ಅನ್ನು ಮೀಸಲಿಡಲಾಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us