AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಚಂಡ ಸಾಹಸಕ್ಕೆ ಕೈ ಹಾಕಿದ ರಾಜಮೌಳಿ, 50 ಭಾಷೆಯಲ್ಲಿ ‘ವಾರಣಾಸಿ’

SS Rajamouli movie: ‘ಬಾಹುಬಲಿ’ ಬಳಿಕ ರಾಜಮೌಳಿ ಭಾರತದ ನಂಬರ್ 1 ನಿರ್ದೇಶಕ ಎನಿಸಿಕೊಂಡಿದ್ದರು. ಆದರೆ ‘ವಾರಣಾಸಿ’ ಸಿನಿಮಾದ ಬಳಿಕ ವಿಶ್ವದ ಅತ್ಯುತ್ತಮ ನಿರ್ದೇಶಕರ ಸಾಲಿಗೆ ಸೇರುವುದು ಬಹುತೇಕ ಖಾತ್ರಿ. ‘ವಾರಣಾಸಿ’ಯನ್ನು ಹಾಲಿವುಡ್​ ಅಲ್ಲ ಅದಕ್ಕಿಂತಲೂ ಉನ್ನತ ಮಟ್ಟದಲ್ಲಿ ನಿರ್ಮಿಸುವ ಹಾಗೂ ವಿತರಿಸುವ ಪ್ರಯತ್ನದಲ್ಲಿದ್ದಾರೆ ರಾಜಮೌಳಿ.

ಪ್ರಚಂಡ ಸಾಹಸಕ್ಕೆ ಕೈ ಹಾಕಿದ ರಾಜಮೌಳಿ, 50 ಭಾಷೆಯಲ್ಲಿ ‘ವಾರಣಾಸಿ’
Ss Rajamouli Varanasi
ಮಂಜುನಾಥ ಸಿ.
|

Updated on: Aug 23, 2026 | 7:18 PM

Share

ಮುಖ್ಯಾಂಶಗಳು

  • ರಾಜಮೌಳಿ ಅಪ್ರತಿಮ ಮಹಾತ್ವಾಕಾಂಕ್ಷಿ ನಿರ್ದೇಶಕ
  • ‘ವಾರಣಾಸಿ’ ಸಿನಿಮಾವನ್ನು ಹಾಲಿವುಡ್​​ಗಿಂತಲೂ ಎತ್ತರಕ್ಕೇರಿಸುವ ಯತ್ನದಲ್ಲಿದ್ದಾರೆ.
  • ‘ವಾರಣಾಸಿ’ ಸಿನಿಮಾ ಅನ್ನು 50 ಭಾಷೆಗಳಲ್ಲಿ ಡಬ್ ಮಾಡಲಿದ್ದಾರೆ ರಾಜಮೌಳಿ

ರಾಜಮೌಳಿ (Rajamouli) ಪ್ರತಿಭಾವಂತ ನಿರ್ದೇಶಕ ಮಾತ್ರವಲ್ಲ, ಅಪ್ರತಿಮ ಮಹಾತ್ವಾಕಾಂಕ್ಷಿ. ಅಸಾಧ್ಯವಾದ ಗುರಿಗಳನ್ನು ಇರಿಸಿಕೊಂಡು ಶ್ರಮ, ಹಠದಿಂದ ಸಾಧಿಸುವ ಛಲಗಾರ. ‘ಬಾಹುಬಲಿ’ ಮೂಲಕ ವಿಶ್ವ ಸಿನಿಮಾ ಪ್ರೇಮಿಗಳ ಗಮನ ಸೆಳೆದು, ‘ಆರ್​​ಆರ್​​ಆರ್’ ಮೂಲಕ ಅದೇ ವಿಶ್ವ ಸಿನಿಮಾ ಪ್ರೇಮಿಗಳ ತನ್ನ ಅಭಿಮಾನಿಗಳನ್ನಾಗಿ ಮಾಡಿಕೊಂಡ ರಾಜಮೌಳಿ, ಈಗ ‘ವಾರಣಾಸಿ’ಯನ್ನು ಹಾಲಿವುಡ್​​ಗಿಂತಲೂ ಒಂದು ಹಂತ ಮೇಲಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ. ಯಾರೂ ಊಹೆ ಸಹ ಮಾಡಿರದ ಅಪ್ರತಿಮ ಸಾಹಸಕ್ಕೆ ರಾಜಮೌಳಿ ಕೈ ಹಾಕಿದ್ದಾರೆ. ತಮ್ಮ ‘ವಾರಣಾಸಿ’ ಸಿನಿಮಾವನ್ನು ವಿಶ್ವದ 50 ಭಾಷೆಗಳಿಗೆ ಡಬ್ ಮಾಡಿಸುತ್ತಿದ್ದಾರೆ ಅದೂ ಎಐ ಸಹಾಯವಿಲ್ಲದೆ!

ಜಕ್ಕನ್ನ ಎಂದೇ ಕರೆಯಲಾಗುವ ರಾಜಮೌಳಿ ‘ವಾರಣಾಸಿ’ ಸಿನಿಮಾಕ್ಕಾಗಿ ಈಗಾಗಲೇ ವಿಶ್ವದ ಅತ್ಯುತ್ತಮ ತಂತ್ರಜ್ಞಾನ, ಅತ್ಯುತ್ತಮ ತಂತ್ರಜ್ಞರನ್ನು ಬಳಸಿ, ವಿಶ್ವದ ಅತ್ಯುತ್ತಮ ಲೊಕೇಶನ್​​ಗಳಲ್ಲಿ ಶೂಟಿಂಗ್ ಮಾಡಿದ್ದು, ಸಿನಿಮಾ ಅನ್ನು ಬಲು ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಸಂಪೂರ್ಣಗೊಳಿಸಿರುವ ರಾಜಮೌಳಿ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಆರಂಭಿಸಿದ್ದಾರೆ. ಈ ಹಂತದಲ್ಲಿ ಬಲು ದಿಟ್ಟ ಮತ್ತು ಊಹಿಸಲಾಸಾಧ್ಯ ನಿರ್ಣಯವನನ್ನು ರಾಜಮೌಳಿ ಮಾಡಿದ್ದು, ಬರೋಬ್ಬರಿ 50 ಭಾಷೆಗಳಲ್ಲಿ ಸಿನಿಮಾಕ್ಕೆ ಡಬ್ಬಿಂಗ್ ಮಾಡಿಸಲು ರಾಜಮೌಳಿ ಮುಂದಾಗಿದ್ದಾರೆ.

‘ವಾರಣಾಸಿ’ ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಮೊದಲಿನಿಂದಲೂ ರಾಜಮೌಳಿ ಹೇಳುತ್ತಿದ್ದರು, ಅದನ್ನು ರಾಜಮೌಳಿ ನಿಜ ಮಾಡುತ್ತಿದ್ದು, 50 ಭಾಷೆಗಳಲ್ಲಿ ಸಿನಿಮಾ ಅನ್ನು ಡಬ್ ಮಾಡಿ ಒಟ್ಟಿಗೆ 120 ದೇಶಗಳಲ್ಲಿ ಸಿನಿಮಾ ಅನ್ನು ರಿಲೀಸ್ ಮಾಡುವ ಆಲೋಚನೆಯಲ್ಲಿದ್ದಾರೆ. ಹಾಲಿವುಡ್​​ನ ಹೆಸರಾಂತ ಡಿಸಿ, ಮಾರ್ವೆಲ್ ಇನ್ನಿತರೆ ಸ್ಟುಡಿಯೋಗಳ ಸಿನಿಮಾಗಳು ಒಟ್ಟಿಗೆ 100-120 ದೇಶಗಳಲ್ಲಿ ಬಿಡುಗಡೆ ಆಗುತ್ತವೆ. ಈಗ ರಾಜಮೌಳಿ ಸಹ ಅದೇ ರೀತಿ ಒಟ್ಟಿಗೆ 120 ದೇಶಗಳಲ್ಲಿ ಸಿನಿಮಾ ರಿಲೀಸ್​​ಗೆ ಸಜ್ಜಾಗಿದ್ದಾರೆ.

ಇದನ್ನೂ ಓದಿ:‘ವಾರಣಾಸಿ’ ಟೈಟಲ್ ವಿವಾದ ಸುಖಾಂತ್ಯ, ರಾಜಮೌಳಿ ನಿರಾಳ

ರಾಜಮೌಳಿ ಅವರ ಮತ್ತೊಂದು ವಿಶೇಷ ನಿರ್ಧಾರವೆಂದರೆ ‘ವಾರಣಾಸಿ’ ಸಿನಿಮಾದ ಡಬ್ಬಿಂಗ್​​ಗೆ ಅವರು ಎಐ ಬಳಸುತ್ತಿಲ್ಲ. ಸಣ್ಣ-ಪುಟ್ಟ ಸಿನಿಮಾಗಳು, ಹಲವು ಪ್ಯಾನ್ ಇಂಡಿಯಾ ಸಿನಿಮಾಗಳು ಸಹ ಇತ್ತೀಚೆಗೆ ಡಬ್ಬಿಂಗ್​​ಗಾಗಿ ಎಐ ಬಳಸುತ್ತಿವೆ. ಆದರೆ ರಾಜಮೌಳಿ ಅವರು ಡಬ್ಬಿಂಗ್ ಅನ್ನು ಖುದ್ದು ಆಯಾ ಭಾಷೆಯ ಪರಿಣಿತರನ್ನು ಕರೆಸಿ ಮಾಡಿಸಲಿದ್ದಾರೆ.

ಮೂಲ ನಟನೆಯ ಭಾವನೆಗಳನ್ನು ರಕ್ಷಿಸುವುದೇ ಇಲ್ಲಿನ ಮುಖ್ಯ ಗಮನವಾಗಿರುವಂತೆ ತೋರುತ್ತದೆ. ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವುದರಿಂದ, ಪ್ರತಿಯೊಂದು ಭಾಷೆಯಲ್ಲೂ ಪಾತ್ರಗಳ ಧ್ವನಿ ಮತ್ತು ಭಾವನೆಗಳು ಅತ್ಯಂತ ಮುಖ್ಯವಾಗುತ್ತವೆ. ನಿರ್ದೇಶಕ ರಾಜಮೌಳಿ ಅವರು ಈ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿಲ್ಲ.

50 ಭಾಷೆಗಳಿಗೆ ಡಬ್ಬಿಂಗ್ ಮಾಡಿಸುವುದು ಸುಲಭದ ಕಾರ್ಯವಲ್ಲ. ಪ್ರತಿಯೊಂದು ಪಾತ್ರಕ್ಕೂ ಭಿನ್ನ ಧ್ವನಿ ಕಲಾವಿದರನ್ನು ಕರೆಸಿ, ಧ್ವನಿ ಪರೀಕ್ಷೆ ನಡೆಸಿ, ಸಂಭಾಷಣೆಯ ಶುದ್ಧ ತರ್ಜುಮೆಯನ್ನು ಭಾಷಾ ಪರಿಣಿತರಿಂದ ಮಾಡಿಸಿ, ಅರ್ಥ ವ್ಯತ್ಯಾಸ, ಭಾವ ವ್ಯತ್ಯಾಸ ಇಲ್ಲದಂತೆ ಡಬ್ಬಿಂಗ್ ಮಾಡಿಸುವುದು ಬಹಳ ಸಮಯ ಹಿಡಿಯುವ ಕೆಲಸ ಆದರೆ ರಾಜಮೌಳಿ, ಇಂಥಹಾ ಅಸಾಧ್ಯಗಳನ್ನು ಸಾಧಿಸುವ ಛಾತಿ ಉಳ್ಳವರು. ‘ವಾರಣಾಸಿ’ ಸಿನಿಮಾವನ್ನು ಮುಂದಿನ ವರ್ಷ ಏಪ್ರಿಲ್ 7ಕ್ಕೆ ರಿಲೀಸ್ ಮಾಡುವುದಾಗಿ ರಾಜಮೌಳಿ ಹೇಳಿದ್ದಾರೆ. ಆದರೆ 50 ಭಾಷೆಗಳಿಗೆ ಡಬ್ಬಿಂಗ್, ಸಂಗೀತ, ಹಿನ್ನೆಲೆ ಸಂಗೀತ, ಎಡಿಟಿಂಗ್, ಸ್ಪೆಷಲ್ ಎಫೆಕ್ಟ್, ಕಲರ್ ಗ್ರೇಡಿಂಗ್ ಇನ್ನೂ ಹಲವಾರು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಷ್ಟರಲ್ಲೇ ಮುಗಿಯುತ್ತವೇ ಎಂಬುದು ಅನುಮಾನ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ