‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಕಳೆದು ಹೋದ ಮಗಳು ಗೌತಮ್​ಗೆ ಸಿಕ್ಕೇ ಬಿಟ್ಟಳು

ಅಮೃತಧಾರೆ ಧಾರಾವಾಹಿ ಪ್ರಸ್ತುತ TRPಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈಗ ಗೌತಮ್‌ನ ಕಳೆದುಹೋದ ಮಗಳು ಮತ್ತೆ ಸಿಗುವ ಸೂಚನೆ ಸಿಕ್ಕಿದೆ. ಹೊಸ ಪ್ರೋಮೋದಲ್ಲಿ ತೋರಿಸಿದ ಮಗು ಗೌತಮ್‌ಳದ್ದಾಗಿರಬಹುದು ಎಂದು ಹೇಳಲಾಗಿದೆ. ಇದು ಗೌತಮ್ ಮತ್ತು ಭೂಮಿಕಾ ಮರುಮಿಲನಕ್ಕೆ ದಾರಿ ಮಾಡಿಕೊಡಲಿದೆಯೇ ಎಂಬ ಕುತೂಹಲ ಹೆಚ್ಚಿಸಿದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಕಳೆದು ಹೋದ ಮಗಳು ಗೌತಮ್​ಗೆ ಸಿಕ್ಕೇ ಬಿಟ್ಟಳು
ಅಮೃತಧಾರೆ
Edited By:

Updated on: Oct 06, 2025 | 7:47 AM

‘ಅಮೃತಧಾರೆ’ (Amruthadhaare) ಧಾರಾವಾಹಿ ಸಾಕಷ್ಟು ತಿರುವುಗಳನ್ನು ಪಡೆದು ಸಾಗುತ್ತಾ ಇದೆ. ಈ ಧಾರಾವಾಹಿಯು ಟಿಆರ್​ಪಿಯಲ್ಲೂ ನಂಬರ್ ಒಂದನೇ ಸ್ಥಾನ ಪಡೆದುಕೊಂಡಿದೆ. ಈಗ ಧಾರಾವಾಹಿಯಲ್ಲಿ ಮತ್ತೊಂದು ರೋಚಕತೆ ಎದುರಾಗುವ ಸೂಚನೆ ಸಿಕ್ಕಿದೆ. ಕಳೆದು ಹೋಗಿದ್ದ ಗೌತಮ್ ಮಗಳು ಸಿಗುವ ಸೂಚನೆ ಸಿಕ್ಕಿದೆ. ಆ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಗಮನ ಸೆಳೆದಿದೆ.

ಗೌತಮ್ ದೀವಾನ್​ಗೆ ಇಬ್ಬರು ಮಕ್ಕಳು ಜನಿಸಿದ್ದರು. ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು. ಗಂಡು ಮಗು ಉಳಿದುಕೊಂಡರೆ, ಹೆಣ್ಣು ಮಗು ಕಳೆದು ಹೋಗಿದೆ. ಈ ಕೆಲಸ ಮಾಡಿದ್ದು ಜಯದೇವ್​ ದೀವಾನ್. ಆದರೆ, ನಂತರ ಮಗು ಎಲ್ಲಿ ಹೋಯಿತು ಎಂಬ ಬಗ್ಗೆ ಮಾಹಿತಿಯೇ ಇರಲಿಲ್ಲ. ಕೊನೆಗೂ ಈ ಬಗ್ಗೆ ಅಪ್​​ಡೇಟ್ ಸಿಕ್ಕಿದೆ. ಐದು ವರ್ಷಗಳ ಬಳಿಕ ಮಗು ಎಲ್ಲಿದೆ ಎಂಬ ವಿಷಯ ಗೊತ್ತಾಗಿದೆ!

Loading...

ಗೌತಮ್ ದೀವಾನ್ ಮಗುವನ್ನು ಹುಡಕಿಕೊಂಡು ಸಾಕಷ್ಟು ಕಡೆಗಳಲ್ಲಿ ಸುತ್ತಾಡಿದ್ದಾನೆ. ಆದರೆ, ಈವರೆಗೆ ಮಗು ಸಿಕ್ಕಿರಲೇ ಇಲ್ಲ. ಈ ಕಾರಣದಿಂದಲೇ ಭೂಮಿಕಾ ಕೂಡ ಗೌತಮ್​ನ ಬಿಟ್ಟು ಹೋಗಿದ್ದಳು. ಈ ವಿಚಾರ ಆತನಿಗೆ ಸಾಕಷ್ಟು ಬೇಸರ ಇದೆ. ಮಗು ಇಲ್ಲ ಎಂಬ ವಿಚಾರವನ್ನು ಆಕೆಗೆ ಒಪ್ಪಿಕೊಳ್ಳಳು ಸಾಧ್ಯವಾಗಲೇ ಇಲ್ಲ. ಇದು ಗೌತಮ್​ಗೆ ಬೇಸರ ಮೂಡಿಸಿದೆ.

ಜೀ ಕನ್ನಡ ಪ್ರೋಮೋ

ಈಗ ಹೊಸ ಪ್ರೋಮೋದಲ್ಲಿ ರೋಚಕ ತಿರುವು ಎಂಬ ಪ್ರೋಮೋ ಹಂಚಿಕೊಳ್ಳಲಾಗಿದೆ. ದಂಪತಿಯೊಬ್ಬರು ಹೆಣ್ಣು ಮಗುವೊಂದನ್ನು ದತ್ತು ಪಡೆದು ಸಾಕಿರುತ್ತಾರೆ. ಆದರೆ, ಮಗು ನಮಗೆ ಬೇಡ ಎಂದು ಅವರು ದೂರ ಹೋಗುತ್ತಾರೆ. ಇದು ಗೌತಮ್​ಗೆ ಹುಟ್ಟಿದ ಹೆಣ್ಣು ಮಗಳೇ ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ಸೀರಿಯಲ್​ನಲ್ಲಿ ನಂಬರ್ 1 ಆದ ‘ಅಮೃತಧಾರೆ’ ಧಾರಾವಾಹಿ; ಟಿಆರ್​ಪಿ ಪಟ್ಟಿ

‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಮತ್ತೆ ಒಂದಾಗಬೇಕು ಎಂಬುದು ಅನೇಕರ ಕೋರಿಕೆ. ಅದಕ್ಕೂ ಮೊದಲೇ ಅವನ ಮಗಳು ಸಿಗುವ ಸೂಚನೆ ಸಿಕ್ಕಿದೆ. ಮುಂದೆ ಯಾವ ರೀತಿಯ ತಿರುವುಗಳ ಜೊತೆ ಧಾರಾವಾಹಿ ಸಾಗುತ್ತದೆ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us