AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೊದಲು ನೀನು ಗಂಡಸಾಗಿ ಬಾ’: ಜಗದೀಶ್‌ ವಿರುದ್ಧ ನಾಲಿಗೆ ಹರಿಬಿಟ್ಟ ಮಂಜ

ಬಿಗ್ ಬಾಸ್ ಕನ್ನಡ 13: ಗಾನವಿ ಜೊತೆ ಆಪ್ತವಾಗಿರಲು ಮಂಜ ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನದಲ್ಲಿ ಅವರು ಜಗದೀಶ್ ವಿರುದ್ಧ ನಿಂತಿದ್ದಾರೆ. ಜಗದೀಶ್ ಮತ್ತು ಗಾನವಿ ನಡುವಿನ ಜಗಳ ಬಿಡಿಸಲು ಹೋದ ಮಂಜ ಅವರು ಗಾನವಿಯ ಪರ ವಹಿಸಿದ್ದಾರೆ. ಈ ವೇಳೆ ಅವರು ಜಗದೀಶ್‌ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ.

‘ಮೊದಲು ನೀನು ಗಂಡಸಾಗಿ ಬಾ’: ಜಗದೀಶ್‌ ವಿರುದ್ಧ ನಾಲಿಗೆ ಹರಿಬಿಟ್ಟ ಮಂಜ
Manja Image Credit source: Colors Kannada
ಮದನ್​ ಕುಮಾರ್​
|

Updated on: Nov 17, 2026 | 10:42 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಂಜ ಅವರು ಕೆಟ್ಟ ಮಾತುಗಳ ಮೂಲಕವೇ ಕುಖ್ಯಾತಿ ಪಡೆದವರು. ಆ ಕಾರಣದಿಂದಲೇ ಅವರು ಈ ಮೊದಲು ಎಲಿಮಿನೇಟ್ ಆಗಿದ್ದರು. ಆದರೆ ಅವರಿಗೆ ಎರಡನೇ ಅವಕಾಶ ನೀಡಿ ಮತ್ತೆ ಬಿಗ್ ಬಾಸ್ ಮನೆಗೆ ಕಳಿಸಲಾಗಿದೆ. ಆದರೂ ಕೂಡ ಅವರು ಮತ್ತೆ ಹಳೇ ಬುದ್ಧಿ ಮುಂದುವರಿಸಿದ್ದಾರೆ. ಅವರ ವರ್ತನೆಯಲ್ಲಿ ಬದಲಾವಣೆ ಆಗಿಲ್ಲ. ಗಾನವಿಯ ಪರ ವಹಿಸುವ ಭರದಲ್ಲಿ ಜಗದೀಶ್ ವಿರುದ್ಧ ಮಂಜ ಅವರು ನಾಲಿಗೆ ಹರಿಬಿಟ್ಟಿದ್ದಾರೆ.

ನವೆಂಬರ್ 17ರ ಸಂಚಿಕೆಯಲ್ಲಿ ಅಡುಗೆ ಮಾಡುವ ವಿಚಾರಕ್ಕೆ ಗಾನವಿ ಮತ್ತು ಜಗದೀಶ್ ನಡುವೆ ಜಗಳ ಶುರುವಾಯಿತು. ‘ಗಂಡಸರ ರೀತಿ ಮಾತನಾಡು’ ಎಂದು ಜಗದೀಶ್ ಅವರನ್ನು ಗಾನವಿ ಹೀಯಾಳಿಸಿದರು. ಅದರಿಂದ ಕೋಪಗೊಂಡ ಜಗದೀಶ್ ಅವರು ಸಖತ್ ಖಾರವಾಗಿ ವಾಗ್ದಾಳಿ ನಡೆಸಿದರು. ತಮ್ಮನ್ನು ಕೆಣಕಿದ ಗಾನವಿಯ ವಿರುದ್ಧ ಮಾತಿನ ಚಾಟಿ ಬೀಸಿದರು.

‘ಮಾನಗೇಡಿ, ಮಾನ ಮರ್ಯಾದೆ ಇಲ್ಲದವಳು ನೀನು. ನೀನು ಲಫಂಗಾ. ನಿನ್ನ ಬಾಯಿಗೆ ಬೆಂಕಿ ಹಾಕ. ನಾಚಿಕೆ ಇಲ್ಲದವಳ ರೀತಿ ಮಾತಾಡುತ್ತಿದ್ದೀಯ’ ಎಂದು ಜಗದೀಶ್ ಅವರು ಕಿಡಿಕಾರಿದರು. ‘ಕೆಟ್ಟ ಮಾತು ಆಟಬೇಡ’ ಎಂದು ಗಾನವಿ ಅವರು ಎಚ್ಚರಿಕೆ ನೀಡಿದರು. ನಂತರ ಜಗದೀಶ್ ಮತ್ತು ಗಾನವಿಯ ಜಗಳದ ನಡುವೆ ಮಂಜ ಎಂಟ್ರಿ ನೀಡಿದರು. ಗಾನವಿಯ ಪರವಾಗಿ ನಿಂತು ಜಗದೀಶ್‌ಗೆ ಬಾಯಿಗೆ ಬಂದಂತೆ ಮಾತನಾಡಿದರು.

‘ಮಾನಗೇಡಿ, ಮಾನ ಮರ್ಯಾದೆ ಇಲ್ಲದವಳು ಅಂತ ಮಾತಾಡಬೇಡ. ಮೂರು ಬಿಟ್ಟವನು ನೀನು ಅಂತ ನಾನು ಹೇಳಲಾ? ನೀನು ಮಾಡಿರುವುದು ಒಂದೇ ಸಿನಿಮಾ. ಅದು ಬಿಟ್ಟು ಬೇರೆ ಏನು ಮಾಡಿದ್ದೀಯ ನೀನು? ಮೊದಲು ನೀನು ಗಂಡಸಾಗಿ ಬಾ’ ಎಂದು ಮಂಜ ಅವರು ಹೇಳಿದರು. ಆ ಮೂಲಕ ಜಗದೀಶ್ ಅವರನ್ನು ಕುಗ್ಗಿಸುವ ಪ್ರಯತ್ನ ಮಾಡಿದರು. ‘ನಾನು ಗಂಡಸು. ಮಗಳಿಗೆ ತಂದೆಯಾಗಿದ್ದೇನೆ’ ಎಂದು ಜಗದೀಶ್ ತಿರುಗೇಟು ನೀಡಿದರು.

ಇದನ್ನೂ ಓದಿ: ‘ಗಾನವಿ ನನ್ನ ತಲೆ ಮೇಲೆ ಕಾಲು ಇಟ್ಟಿದ್ದಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ

ಮಂಜ, ಜಗದೀಶ್ ಮತ್ತು ಗಾನವಿ ನಡುವಿನ ಈ ಜಗಳದಲ್ಲಿ ತೀರಾ ವೈಯಕ್ತಿಕವಾದ ವಿಚಾರವನ್ನು ಎಳೆದುತಂದಿದ್ದು ಇನ್ನುಳಿದ ಸದಸ್ಯರಿಗೆ ಇಷ್ಟ ಆಗಲಿಲ್ಲ. ಆ ರೀತಿ ಮಾತನಾಡಬಾರದು ಎಂದು ಧನುಷ್, ಸೌಂದರ್ಯಾ, ಗಗನ್ ಚಿನ್ನಪ್ಪ, ಪ್ರಶಾಂತ್ ಅವರು ತಮ್ಮ ಅಭಿಪ್ರಾಯ ತಿಳಿಸಿದರು. ಕೀಳಾಗಿ ಮಾತನಾಡಿದ ಸದಸ್ಯರಿಗೆ ವಾರಾಂತ್ಯದ ಸಂಚಿಕೆಯಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದು ಪ್ರೇಕ್ಷಕರ ನಂಬಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು