ರದ್ದಾದ ಟಾಸ್ಕ್ನಲ್ಲಿ ಗೆದ್ದವರ್ಯಾರು? ಮನೆಗೆ ಸುದೀಪ್ ನೀಡಿದ ಶಿಕ್ಷೆ ಏನು?
ಟಾಸ್ಕ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಪದೇ ಪದೇ ಟಾಸ್ಕನ್ನು ರದ್ದು ಮಾಡಲಾಗಿದೆ. ಆದರೆ ಕಳೆದ ಕೆಲ ವಾರಗಳಿಂದ ಟಾಸ್ಕ್ ಅನ್ನು ರದ್ದು ಮಾಡಲಾಗಿರಲಿಲ್ಲ. ಆದರೆ ಈ ವಾರ ಟಾಸ್ಕ್ ರದ್ದಾಯ್ತು. ಮುಖಂಡರ (ಯಶಸ್ ಮತ್ತು ಮಂಜ) ಪೋಸ್ಟರ್ಗಳನ್ನು ನಿಲ್ಲಿಸಿ ಸ್ಪರ್ಧಿಗಳು ಎದುರಾಳಿ ನಾಯಕನ ಪೋಸ್ಟರ್ಗೆ ಕೆಂಪು ಬಣ್ಣ ಬಳಿಯಬೇಕು ಎಂಬುದು ಟಾಸ್ಕ್ ಆಗಿತ್ತು. ಮಂಜ ಮತ್ತು ಯಶಸ್ನ ತಂಡಗಳು ಪರಸ್ಪರ ಎದುರಾಳಿ ಆಗಿದ್ದರು. ಮಂಜ ಮತ್ತು ಯಶಸ್ ಉಸ್ತುವಾರಿ ಆಗಿದ್ದರು.

ಮುಖ್ಯಾಂಶಗಳು
- ಬಿಗ್ಬಾಸ್ ವೀಕೆಂಡ್ ಎಪಿಸೋಡ್
- ಮನೆಗೆ ಶಿಕ್ಷೆ ಕೊಟ್ಟ ಸುದೀಪ್
- ಈ ವಾರ ಮನೆಗಿಲ್ಲ ಕ್ಯಾಪ್ಟನ್
ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಮತ್ತೊಮ್ಮೆ ಟಾಸ್ಕ್ ರದ್ದಾಯ್ತು. ಈ ಸೀಸನ್ನಲ್ಲಿ ಹಲವು ಬಾರಿ ಟಾಸ್ಕ್ ರದ್ದಾಗಿದೆ. ಸ್ಪರ್ಧಿಗಳು ಟಾಸ್ಕ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಪದೇ ಪದೇ ಟಾಸ್ಕನ್ನು ರದ್ದು ಮಾಡಲಾಗಿದೆ. ಆದರೆ ಕಳೆದ ಕೆಲ ವಾರಗಳಿಂದ ಟಾಸ್ಕ್ ಅನ್ನು ರದ್ದು ಮಾಡಲಾಗಿರಲಿಲ್ಲ. ಆದರೆ ಈ ವಾರ ಟಾಸ್ಕ್ ರದ್ದಾಯ್ತು. ಮುಖಂಡರ (ಯಶಸ್ ಮತ್ತು ಮಂಜ) ಪೋಸ್ಟರ್ಗಳನ್ನು ನಿಲ್ಲಿಸಿ ಸ್ಪರ್ಧಿಗಳು ಎದುರಾಳಿ ನಾಯಕನ ಪೋಸ್ಟರ್ಗೆ ಕೆಂಪು ಬಣ್ಣ ಬಳಿಯಬೇಕು ಎಂಬುದು ಟಾಸ್ಕ್ ಆಗಿತ್ತು. ಮಂಜ ಮತ್ತು ಯಶಸ್ನ ತಂಡಗಳು ಪರಸ್ಪರ ಎದುರಾಳಿ ಆಗಿದ್ದರು. ಮಂಜ ಮತ್ತು ಯಶಸ್ ಉಸ್ತುವಾರಿ ಆಗಿದ್ದರು.
ಮೇಲ್ನೋಟಕ್ಕೆ ಯಶಸ್ ತಂಡ ಗೆದ್ದಿತ್ತು. ಅದನ್ನು ಯಶಸ್ ಪದೇ ಪದೇ ಹೇಳಿದರೂ ಸಹ ಮಂಜ ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ಯಶಸ್ ಮತ್ತು ಮಂಜ ಇಬ್ಬರೂ ಸೇರಿ ತನಗೆ ವಿನ್ನರ್ ಅನ್ನು ನಿರ್ಧರಿಸಲು ಆಗುತ್ತಿಲ್ಲ ಎಂದು ಬಿಗ್ಬಾಸ್ ಬಳಿ ಹೇಳಿದರು. ಅದರಂತೆ ಬಿಗ್ಬಾಸ್ ಸಹ ಟಾಸ್ಕ್ ಅನ್ನು ರದ್ದು ಮಾಡಿದರು. ಆದರೆ ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಟಾಸ್ಕ್ ಬಗ್ಗೆ ಸ್ಪಷ್ಟವಾದ ಫಲಿತಾಂಶ ನೀಡಿದರು.
ಇದನ್ನೂ ಓದಿ:ಮಂಜನ ಮತ್ತೆ ಬಿಗ್ಬಾಸ್ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಅಸಲಿಗೆ ಇದೇ ಮೊದಲ ಬಾರಿಗೆ ಬಿಗ್ಬಾಸ್ನಲ್ಲಿ ಟಾಸ್ಕ್ನಲ್ಲಿ ಗೆದ್ದವರನ್ನು ಕಂಡು ಹಿಡಿಯಲು ಎಐ ಬಳಕೆ ಮಾಡಲಾಯ್ತು. ಯಶಸ್ ಹಾಗೂ ಮಂಜನ ತಂಡ ಆಡಿದ ಟಾಸ್ಕಿನ ಚಿತ್ರಗಳನ್ನು ಎಐಗೆ ನೀಡಿ, ಸೂಕ್ತವಾದ, ಹಲವು ರೀತಿಯ ಪ್ರಾಮ್ಟ್ಗಳನ್ನು ಬರೆದು, ಟಾಸ್ಕ್ಗೆ ಇದ್ದ ನಿಯಮಗಳನ್ನೆಲ್ಲ ಎಐಗೆ ಅರ್ಥ ಮಾಡಿಸಿ ಕೇಳಲಾದ ಪ್ರಶ್ನೆಗೆ ಎಐ, ಯಶಸ್ ತಂಡ ಟಾಸ್ಕ್ನಲ್ಲಿ ಗೆಲುವು ಸಾಧಿಸಿದೆ ಎಂಬ ಉತ್ತರ ನೀಡಿತು. ಅಲ್ಲಿಗೆ ಯಶಸ್ ತಂಡ ಬಣ್ಣ ಹಚ್ಚುವ ಟಾಸ್ಕ್ನಲ್ಲಿ ವಿಜೇತಗೊಂಡಿತ್ತು.
ಅಸಲಿಗೆ ಆ ಟಾಸ್ಕ್ ರದ್ದಾದ ಕಾರಣಕ್ಕೆ ಆ ಬಳಿಕ ನಡೆದ ಟಾಸ್ಕುಗಳಲ್ಲೂ ಸಾಕಷ್ಟು ಬದಲಾವಣೆ ಆಯ್ತು. ನಾಯಕತ್ವದ ಟಾಸ್ಕಿಗೂ ಸಹ ಬೇರೆ ಸ್ಪರ್ಧಿಗಳು ಹೋಗಬೇಕಾಯ್ತು. ಇದೆಲ್ಲವನ್ನೂ ಪರಿಗಣಿಸಿ ಸುದೀಪ್ ಅವರು ಈ ವಾರ ಮನೆಯ ನಾಯಕತ್ವವನ್ನೇ ರದ್ದು ಮಾಡಿದರು. ಜಗ್ಗ ಮಮ್ಮಿ ಈ ವಾರ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ ಸ್ಪರ್ಧಿಗಳು ಮಾಡಿದ ತಪ್ಪಿನ ಕಾರಣದಿಂದಾಗಿ, ಶಿಕ್ಷೆಯ ರೂಪದಲ್ಲಿ ಸುದೀಪ್ ಅವರು ಮನೆಯ ಕ್ಯಾಪ್ಟನ್ ಅನ್ನು ರದ್ದು ಮಾಡಿದರು. ಜಗ್ಗ, ಕ್ಯಾಪ್ಟೆನ್ಸಿ ರೂಮಿನಿಂದ ತನ್ನ ಬಟ್ಟೆ, ಹಾಸಿಗೆಗಳನ್ನು ಮರಳಿ ತಮ್ಮ ಹಳೆ ಜಾಗಕ್ಕೆ ತಂದಿಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




