ಬಂದಷ್ಟೆ ವೇಗವಾಗಿ ಹೊರಗೆ ಹೋದ ವೈಲ್ಡ್ ಕಾರ್ಡ್ ಸ್ಪರ್ಧಿ

ಪ್ರತಿವಾರದಂತೆ ಈ ಭಾನುವಾರವೂ ಸಹ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆಯಲೇ ಬೇಕಿತ್ತು. ಅದರಂತೆ ಈ ವಾರವೂ ಸಹ ಜನರ ಮತಗಳ ಆಧಾರದಲ್ಲಿ ಒಬ್ಬರನ್ನು ಸುದೀಪ್ ಅವರು ಎವಿಕ್ಟ್ ಮಾಡಿದರು. ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಳಗೆ ಹೋಗಿದ್ದ ಲಕ್ಷ್ಮಿ ಅವರು ಮನೆಯಿಂದ ಹೊರಗೆ ಬಂದರು.

ಬಂದಷ್ಟೆ ವೇಗವಾಗಿ ಹೊರಗೆ ಹೋದ ವೈಲ್ಡ್ ಕಾರ್ಡ್ ಸ್ಪರ್ಧಿ
Bigg Boss Eviction

Updated on: Oct 25, 2026 | 10:45 PM

ಮುಖ್ಯಾಂಶಗಳು

  • ಬಿಗ್​ಬಾಸ್ ಕನ್ನಡದಲ್ಲಿ ಎಲಿಮಿನೇಷನ್
  • ವೈಲ್ಡ್ ಕಾರ್ಡ್ ಸ್ಪರ್ಧಿ ಲಕ್ಷ್ಮಿ ಹೊರಕ್ಕೆ
  • ಎರಡೇ ವಾರಕ್ಕೆ ಹೊರ ಹೋದ ಲಕ್ಷ್ಮಿ

ಬಿಗ್​​ಬಾಸ್ ಪ್ರಾರಂಭವಾಗಿ 50 ದಿನಗಳಾಗಿವೆ. ಇದೇ ಕಾರಣಕ್ಕೆ ಸುದೀಪ್ ಅವರು ಎಲ್ಲ ಸ್ಪರ್ಧಿಗಳಿಗೂ ಶುಭಾಶಯಗಳನ್ನು ಹೇಳಿದರು. ಸಾಕಷ್ಟು ತಮಾಷೆ, ಆಟಗಳ ಮೂಲಕ ಭಾನುವಾರದ ಎಪಿಸೋಡನ್ನು ನಡೆಸಿಕೊಟ್ಟರು. ಆದರೆ ಪ್ರತಿವಾರದಂತೆ ಈ ಭಾನುವಾರವೂ ಸಹ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆಯಲೇ ಬೇಕಿತ್ತು. ಅದರಂತೆ ಈ ವಾರವೂ ಸಹ ಜನರ ಮತಗಳ ಆಧಾರದಲ್ಲಿ ಒಬ್ಬರನ್ನು ಸುದೀಪ್ ಅವರು ಎವಿಕ್ಟ್ ಮಾಡಿದರು. ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಳಗೆ ಹೋಗಿದ್ದ ಲಕ್ಷ್ಮಿ ಅವರು ಮನೆಯಿಂದ ಹೊರಗೆ ಬಂದರು.

ಲಕ್ಷ್ಮಿ ಅವರು ಅಗ್ನಿಪರೀಕ್ಷೆ ಕ್ಯಾಂಡಿಡೇಟ್ ಆಗಿದ್ದರು. ಅವರು ಬಿಗ್​​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಅವರು ಮನೆಗೆ ಹೋದ ಕೇವಲ ಎರಡೇ ವಾರದಲ್ಲಿ ಹೊರಗೆ ಬಂದಿದ್ದಾರೆ. ಮಂಜನನ್ನು ರೆಡ್ ಕಾರ್ಡ್ ಮೂಲಕ ಹೊರಗೆ ಕಳಿಸಿದರೆ, ಸಂಗೀತಾ ಅವರು ಅನಾರೋಗ್ಯದ ಕಾರಣಕ್ಕೆ ಹೊರಗೆ ಹೋದರು ಆಗ ಅವರಿಬ್ಬರ ಸ್ಥಾನ ತುಂಬಲು ಕುಮಾರಿ ಮತ್ತು ಲಕ್ಷ್ಮಿ ಬಿಗ್​​ಬಾಸ್ ಮನೆಯ ಒಳಗೆ ಬಂದರು. ಮನೆಗೆ ಬಂದ ಎರಡೇ ವಾರದಲ್ಲಿ ಲಕ್ಷ್ಮಿ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ.

ಈ ವಾರ ಕೆಲವು ಘನಾನುಘಟಿ ಸ್ಪರ್ಧಿಗಳೇ ನಾಮಿನೇಟ್ ಆಗಿದ್ದರು. ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಮೊದಲಿಗೆ ತಾಂಡವ್ ಅವರನ್ನು ಸೇಫ್ ಮಾಡಿದರು. ಬಳಿಕ ಆಸಿಯಾ ಅವರು ಸೇಫ್ ಆದರು, ಬಳಿಕ ಸೌಂದರ್ಯಾ ಶೆಟ್ಟಿ ಸೇಫ್ ಆದರು. ಉಳಿದಿದ್ದು ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಸೋನಿಕಾ, ಕುಮಾರಿ ಮತ್ತು ಲಕ್ಷ್ಮಿ. ಮೂವರನ್ನು ಆಕ್ಟಿವಿಟಿ ರೂಂಗೆ ಕಳಿಸಲಾಯ್ತು.

ಇದನ್ನೂ ಓದಿ:ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು

ಮೂವರ ಮುಂದೆ ಒಂದು ಹಳೆಯ ಫೋನ್ ಇತ್ತು. ಆ ಫೋನಿಗೆ ಕರೆ ಬರುತ್ತದೆ. ಕರೆಯಲ್ಲಿ ಎವಿಕ್ಷನ್ ಅಥವಾ ಸೇಫ್ ಆಗುವ ಸಂದೇಶ ಇರುತ್ತದೆ ಎಂದು ಸುದೀಪ್ ಸೂಚನೆ ನೀಡಿದ್ದರು. ಅದರಂತೆ ಮೊದಲು ಬಂದ ಕರೆಯನ್ನು ಕುಮಾರಿ ಸ್ವೀಕರಿಸಿದರು ಅವರಿಗೆ ಸೇಫ್ ಎಂಬ ಸಂದೇಶ ಬಂತು. ಎರಡನೇ ಕರೆಯನ್ನು ಲಕ್ಷ್ಮಿ ಪಡೆದರು ಅವರಿಗೆ ಎವಿಕ್ಟೆಡ್ ಎಂಬ ಸಂದೇಶ ಬಂತು. ಕೇವಲ ಎರಡು ವಾರಗಳೇ ಲಕ್ಷ್ಮಿ ಅವರು ಮನೆಯಲ್ಲಿದ್ದರೂ ಸಹ ಕೆಲವರೊಡನೆ ಒಳ್ಳೆಯ ಬಾಂಡಿಂಗ್ ಮಾಡಿಕೊಂಡಿದ್ದರು. ಈಗ ಮನೆಯಿಂದ ಹೊರಗೆ ಹೋಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us