AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಲ್​​ಬಾಗ್ ಫ್ಲವರ್ ಶೋನಲ್ಲಿ ಸಿಗಲಿದೆ ಬಿಗ್​​ಬಾಸ್​​ಗೆ ಹೋಗುವ ಅವಕಾಶ

Bigg Boss Kannada season 13: ಬಿಗ್​​ಬಾಸ್ ಕನ್ನಡ ಸೀಸನ್ 13 ಶೀಘ್ರವೇ ಶುರು ಆಗಲಿದೆ. ಈ ಬಾರಿ ಸಾಮಾನ್ಯರು ಸಹ ಬಿಗ್​​ಬಾಸ್ ಸ್ಪರ್ಧಿಗಳಾಗಿ ಮನೆ ಪ್ರವೇಶಿಸಲಿದ್ದಾರೆ. ವಿಶೇಷವೆಂದರೆ ಈ ಬಾರಿ ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಅನ್ನು ಲೈವ್ ನೋಡುವ ಅವಕಾಶವನ್ನು ಸಹ ಗೆಲ್ಲಬಹುದಾಗಿದೆ. ಅದಕ್ಕೆ ಕೆಲವು ನಿಯಮಗಳಿದ್ದು, ಮಾಹಿತಿ ಇಲ್ಲಿದೆ ನೋಡಿ...

ಲಾಲ್​​ಬಾಗ್ ಫ್ಲವರ್ ಶೋನಲ್ಲಿ ಸಿಗಲಿದೆ ಬಿಗ್​​ಬಾಸ್​​ಗೆ ಹೋಗುವ ಅವಕಾಶ
Sudeep Bigg Boss
ಮಂಜುನಾಥ ಸಿ.
|

Updated on:Aug 06, 2026 | 3:03 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಸೀಸನ್ 13 ಶೀಘ್ರ ಪ್ರಾರಂಭ ಆಗಲಿದೆ.
  • ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ನೋಡುವ ಅವಕಾಶ ಸಿಗಲಿದೆ.
  • ಅವಕಾಶ ಗೆಲ್ಲಲು ಕೆಲವು ನಿಯಮಗಳಿವೆ, ಮಾಹಿತಿ ಇಲ್ಲಿದೆ.

ಬಿಗ್​​ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಸುದೀಪ್ ಅವರ ಪ್ರೊಮೊ ಒಂದು ಬಿಡುಗಡೆ ಆಗಿದ್ದು, ಶೀಘ್ರವೇ ದಿನಾಂಕ ಘೋಷಣೆ ಆಗಲಿದೆ. ಈ ಬಾರಿ ಸಾಮಾನ್ಯರು ಸಹ ಬಿಗ್​​ಬಾಸ್​​ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಸ್ಪರ್ಧಿಗಳ ಅಂತಿಮ ಪಟ್ಟಿಯೂ ರೆಡಿ ಆಗಿದೆ. ಕೆಲವೇ ದಿನಗಳಲ್ಲಿ ಬಿಗ್​​ಬಾಸ್ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಈ ಅದ್ಧೂರಿ ಗ್ರ್ಯಾಂಡ್ ಓಪನಿಂಗ್​​ ಅನ್ನು ನೇರವಾಗಿ ಅವಕಾಶ ಇದೀಗ ನಿಮ್ಮದಾಗಲಿದೆ.

ಸುದೀಪ್ ಅವರು ಬಿಗ್​​ಬಾಸ್ ಸ್ಪರ್ಧಿಗಳನ್ನು ಪರಿಚಯಿಸಿ, ಅವರನ್ನು ಬಿಗ್​​ಬಾಸ್ ಮನೆಯೊಳಗೆ ಕಳಿಸುವ ಸಂದರ್ಭವನ್ನು ಲೈವ್ ಆಗಿ ನೋಡುವ ಅವಕಾಶವನ್ನು ಸಾರ್ವಜನಿಕರು ಪಡೆಯಬಹುದಾಗಿದೆ. ಅವಕಾಶ ಪಡೆಯಲು ನೀವು ಲಾಲ್​ಬಾಗ್ ಫ್ಲವರ್ ಶೋನಲ್ಲಿ ಭಾಗವಹಿಸಬೇಕಿದೆ. ಲಾಲ್​​ಬಾಗ್ ಫ್ಲವರ್ ಶೋ ಇದೀಗ ಆರಂಭವಾಗಿದೆ. ಈ ಲಾಲ್​​ಬಾಗ್ ಫ್ಲವರ್ ಶೋನಲ್ಲಿ ‘ಬಿಗ್​​ಬಾಸ್ ಅಗ್ನಿಪರೀಕ್ಷೆ ಎಕ್ಸ್ಪೀರಿಯನ್ಸ್ ಜೋನ್’ ಒಂದನ್ನು ಬಿಗ್​​ಬಾಸ್ ತಂಡ ಮಾಡಿದೆ. ಇಲ್ಲಿ ಬಿಗ್​​ಬಾಸ್​​ನ ಐಕಾನಿಕ್ ಚೇರ್ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೊತೆಗೆ ಬಿಗ್​​ಬಾಸ್ ಸೆಲ್ಫಿ ಜೋನ್ ಸಹ ಇರಲಿದೆ.

ಈ ಬಿಗ್​​ಬಾಸ್ ಎಕ್ಸ್​ಪೀರಿಯನ್ಸ್ ಝೋನ್​​ಗೆ ಹೋಗಿ ಅಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡು ಅದನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕಿದೆ. ಹೀಗೆ ಹಂಚಿಕೊಂಡ ಫೋಟೊವನ್ನು ಕಲರ್ಸ್ ಕನ್ನಡದ ಜೊತೆಗೆ ಟ್ಯಾಗ್ ಮಾಡಬೇಕಿದೆ, ಚಿತ್ರಕ್ಕೆ ‘ಬಿಬಿಕೆಅಗ್ನಿಪರೀಕ್ಷೆ’ (#BBKAGNIPARIKSHE) ಹ್ಯಾಷ್ ಟ್ಯಾಗ್ ಅನ್ನು ಹಾಕುವುದು ಮರೆಯುವಂತಿಲ್ಲ. ಈ ಫೋಟೊಗಳು ಪಬ್ಲಿಕ್ ಆಗಿರುವುದು ಕಡ್ಡಾಯ. ಹೀಗೆ ಮಾಡಿದಲ್ಲಿ, ಕಲರ್ಸ್ ವಾಹಿನಿ ಅಥವಾ ಬಿಗ್​​ಬಾಸ್ ಆಯೋಜಕರು ಆಯ್ದ ಕೆಲವರನ್ನು ಬಿಗ್​​ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ನೋಡಲು ಆಹ್ವಾನವನ್ನು ಕಳಿಸಲಿದ್ದಾರೆ. ಜೊತೆಗೆ ಬಿಗ್​​ಬಾಸ್ ಬಹುಮಾನಗಳನ್ನು ಗೆಲ್ಲುವ ಅವಕಾಶ ಸಹ ಲಭಿಸಲಿದೆ.

ಇದನ್ನೂ ಓದಿ:‘ಮತ್ತೆ ಶುರು ಮಾಡೋಣ್ವ’ ಬಿಗ್​​ಬಾಸ್ ಬಾಗಿಲು ತೆರೆದ ಸುದೀಪ್

ಲಾಲ್​​ಬಾಗ್ ಫ್ಲವರ್ ಶೋ ಇಂದಿನಿಂದ (ಆಗಸ್ಟ್ 06) ಆರಂಭವಾಗಿದ್ದು, ಆಗಸ್ಟ್ 17ರ ವರೆಗೆ ನಡೆಯಲಿದೆ. ಬಿಗ್​​ಬಾಸ್ ಎಕ್ಸ್​ಪೀರಿಯನ್ಸ್ ಜೋನ್ ಸಹ ಸಾರ್ವಜನಿಕ ಪ್ರವೇಶಕ್ಕೆ ಲಭ್ಯವಿದೆ. ಇಲ್ಲಿ ಸೆಲ್ಫಿ ತೆಗೆದುಕೊಂಡು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡರೆ ಅದುವೇ ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ವೀಕ್ಷಣೆಗೆ ಟಿಕೆಟ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Thu, 6 August 26

Follow Us
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ
125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ
ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?
ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?
ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ ಪೊಲೀಸರಿಂದ ದಂಡ
ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ ಪೊಲೀಸರಿಂದ ದಂಡ
ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದ ಕ್ರಿಮಿನಲ್!
ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದ ಕ್ರಿಮಿನಲ್!
ಈದ್ ಮಿಲಾದ್​ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ
ಈದ್ ಮಿಲಾದ್​ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ
ನಾಗೇಂದ್ರ ರಾಜೀನಾಮೆ ಕೊಟ್ರೆ ಬಿಜೆಪಿ ಪಾದಯಾತ್ರೆ ಮಾಡುತ್ತೋ ಇಲ್ವೋ?
ನಾಗೇಂದ್ರ ರಾಜೀನಾಮೆ ಕೊಟ್ರೆ ಬಿಜೆಪಿ ಪಾದಯಾತ್ರೆ ಮಾಡುತ್ತೋ ಇಲ್ವೋ?
ಅಮೆರಿಕದಲ್ಲಿ ಹೇಗಿದೆ ‘ಟಾಕ್ಸಿಕ್’ ಸಿನಿಮಾ ಅಬ್ಬರ: ವಿಡಿಯೋ ನೋಡಿ
ಅಮೆರಿಕದಲ್ಲಿ ಹೇಗಿದೆ ‘ಟಾಕ್ಸಿಕ್’ ಸಿನಿಮಾ ಅಬ್ಬರ: ವಿಡಿಯೋ ನೋಡಿ