
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ 50 ದಿನಗಳು ಕಳೆದಿವೆ. ಶೇಕಡ 50 ಭಾಗ ಆಟ ಮುಗಿದಿದೆ. ಇನ್ನುಳಿದ ದಿನಗಳಲ್ಲಿ ಆಟದ ತೀವ್ರತೆ ಜಾಸ್ತಿ ಆಗಲಿದೆ. ಹಳೇ ಸ್ಪರ್ಧಿಗಳು ಹಲವರು ಎಲಿಮಿನೇಟ್ ಆಗಿದ್ದಾರೆ. ಅದೇ ರೀತಿ, ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕೂಡ ಆಟವನ್ನು ಮುಂದುವರಿಸಿದ್ದಾರೆ. ಸೆಲೆಬ್ರಿಟಿ, ಕಾಮನರ್ ಎಂಬ ವ್ಯತ್ಯಾಸ ಇಲ್ಲದೇ ಈಗ ಬಿಗ್ ಬಾಸ್ ಆಟ ಮುಂದುವರಿಯುತ್ತಿದೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಏಳು ಸ್ಪರ್ಧಿಗಳ ಹೆಸರು ನಾಮಿನೇಷನ್ ಪಟ್ಟಿಯಲ್ಲಿದೆ.
ಈ ವಾರ ಸೌಂದರ್ಯಾ ಶೆಟ್ಟಿ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರ ಉಸ್ತುವಾರಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿದೆ. ಟಾಸ್ಕ್ ಮೂಲಕ ನಾಮಿನೇಟ್ ಮಾಡುವ ಅಧಿಕಾರವನ್ನು ಕೆಲವು ಸ್ಪರ್ಧಿಗಳಿಗೆ ನೀಡಲಾಯಿತು. ಅಂತಿಮವಾಗಿ ಕೆಲವು ಪ್ರಮುಖ ಸ್ಪರ್ಧಿಗಳು ಕೂಡ ಈ ವಾರ ನಾಮಿನೇಟ್ ಆಗಿರುವುದರಿಂದ ವೀಕ್ಷಕರಲ್ಲಿ ಕೌತುಕ ಹೆಚ್ಚಾಗಿದೆ.
ಆಸಿಯಾ, ಕಿರಣ್ ಶಾಸ್ತ್ರಿ, ಕುಮಾರಿ, ಜಗದೀಶ್, ಗಗನ್ ಚಿನ್ನಪ್ಪ, ಪ್ರಶಾಂತ್ ಹಾಗೂ ಧನುಷ್ ಅವರು ನಾಮಿನೇಟ್ ಆಗಿದ್ದಾರೆ. ಈ ಎಲ್ಲ ಸ್ಪರ್ಧಿಗಳಿಗೆ ಅವರದ್ದೇ ಆದ ಪ್ಲಸ್ ಮತ್ತು ಮೈನಸ್ ಅಂಶಗಳು ಇವೆ. ಈ ವಾರ ಯಾರು ಸರಿಯಾಗಿ ತಮ್ಮ ಸಾಮರ್ಥ್ಯ ಸಾಬೀತು ಮಾಡುತ್ತಾರೆ ಎಂಬುದರ ಆಧಾರದ ಮೇಲೆ ಅವರ ಭವಿಷ್ಯ ನಿರ್ಧಾರ ಆಗಲಿದೆ.
ಗಗನ್ ಚಿನ್ನಪ್ಪ ಅವರು ಫೈನಲ್ ತಲುಪುವ ಸ್ಪರ್ಧಿ ಎಂಬ ಭಾವನೆ ಹಲವರಿಗೆ ಇದೆ. ಅದೇ ರೀತಿ ಧನುಷ್ ಅವರು ಕೂಡ ಟಾಸ್ಕ್ ವಿಚಾರದಲ್ಲಿ ಹಿಂದೆ ಬೀಳುವುದಿಲ್ಲ. ಆದರೆ ಅವರು ಈ ವಾರ ನಾಮಿನೇಟ್ ಆಗಿರುವುದರಿಂದ ಹೆಚ್ಚು ಎಚ್ಚರಿಕೆಯಿಂದ ಆಟ ಆಡಬೇಕಿದೆ. ಅದೇ ರೀತಿ ಆಸಿಯಾ, ಕಿರಣ್ ಶಾಸ್ತ್ರಿ, ಕುಮಾರಿ, ಜಗದೀಶ್, ಪ್ರಶಾಂತ್ ಕೂಡ ಆಟದ ಶೈಲಿ ಬದಲಾಯಿಸುವ ಅವಶ್ಯಕತೆ ಇದೆ.
ಇದನ್ನೂ ಓದಿ: ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ಈ ವಾರ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಹಲವು ಮನಸ್ಸುಗಳು ಒಡೆದಿವೆ. ಹಲವರ ನಾಮಿನೇಷನ್ಗೆ ಕಾರಣವಾದ ಗಾನವಿ ಅವರ ಮೇಲೆ ಅಸಮಾಧಾನ ಉಂಟಾಗಿದೆ. ಆಸಿಯಾ ಅವರು ಗಾನವಿ ಬಗ್ಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾನವಿ ಅವರು ಹಲವರ ನಂಬಿಕೆ ಕಳೆದುಕೊಂಡಿದ್ದಾರೆ. ಆದರೂ ಕೂಡ, ತಮ್ಮ ಆಟದ ಶೈಲಿಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.