AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗದೀಶ್-ಕಿರಣ್ ಮಾಡಿದ ತಪ್ಪಿಗೆ ಖುದ್ದು ಶಿಕ್ಷೆ ಕೊಟ್ಟ ಸುದೀಪ್

Bigg Boss Kannada 13: ಸಾಮಾನ್ಯವಾಗಿ ಅಲ್ಲಿ ಕಳ್ಳತನವಾಗುವುದು ಊಟ ಅಥವಾ ತಿಂಡಿ ತಿನಿಸುಗಳು. ಕಳೆದ ವಾರ ಮನೆಯ ಎಲ್ಲ ಸದಸ್ಯರು ಅದ್ಭುತವಾಗಿ ಟಾಸ್ಕ್ ಆಡಿದ್ದರು. ಆದರೆ ಈ ಟಾಸ್ಕ್ ಆಡುವ ವೇಳೆ ಕಿರಣ್ ಶಾಸ್ತ್ರಿ ಮತ್ತು ಜಗದೀಶ್ ಅವರು ಮನೆಯವರಿಗೆ ಕೊಡಲಾಗಿದ್ದ ತಿನಿಸನ್ನು ಕದ್ದು ಇರಿಸಿಕೊಂಡಿದ್ದರು. ಆ ವಿಡಿಯೋ ಅನ್ನು ಎಲ್ಲರ ಮುಂದೆ ಸುದೀಪ್ ಅವರು ತೋರಿಸಿದರು.

ಜಗದೀಶ್-ಕಿರಣ್ ಮಾಡಿದ ತಪ್ಪಿಗೆ ಖುದ್ದು ಶಿಕ್ಷೆ ಕೊಟ್ಟ ಸುದೀಪ್
Sudeep Kiran Jagadish
ಮಂಜುನಾಥ ಸಿ.
|

Updated on: Oct 25, 2026 | 10:47 PM

Share

ಮುಖ್ಯಾಂಶಗಳು

  • ಜಗದೀಶ್-ಕಿರಣ್​​ಗೆ ಶಿಕ್ಷೆ ಕೊಟ್ಟ ಸುದೀಪ್
  • ತಿನಿಸು ಕಳ್ಳತನ ಮಾಡಿದ್ದಕ್ಕೆ ಶಿಕ್ಷೆ
  • ಗಂಭೀರ ಶಿಕ್ಷೆಯನ್ನೇ ನೀಡಿದ ಕಿಚ್ಚ

ಬಿಗ್​​ಬಾಸ್ ಮನೆಯಲ್ಲಿ ಆಗಾಗ್ಗೆ ಕಳ್ಳತನಗಳು ನಡೆಯುತ್ತಲೇ ಇರುತ್ತವೆ. ಸಾಮಾನ್ಯವಾಗಿ ಅಲ್ಲಿ ಕಳ್ಳತನವಾಗುವುದು ಊಟ ಅಥವಾ ತಿಂಡಿ ತಿನಿಸುಗಳು. ಕಳೆದ ವಾರ ಮನೆಯ ಎಲ್ಲ ಸದಸ್ಯರು ಅದ್ಭುತವಾಗಿ ಟಾಸ್ಕ್ ಆಡಿದ್ದರು. ಆದರೆ ಈ ಟಾಸ್ಕ್ ಆಡುವ ವೇಳೆ ಕಿರಣ್ ಶಾಸ್ತ್ರಿ ಮತ್ತು ಜಗದೀಶ್ ಅವರು ಮನೆಯವರಿಗೆ ಕೊಡಲಾಗಿದ್ದ ತಿನಿಸನ್ನು ಕದ್ದು ಇರಿಸಿಕೊಂಡಿದ್ದರು. ಆ ವಿಡಿಯೋ ಅನ್ನು ಎಲ್ಲರ ಮುಂದೆ ಸುದೀಪ್ ಅವರು ತೋರಿಸಿದರು.

ಬೇರೆ ಸ್ಪರ್ಧಿಗಳಿಗೆ ಸಿಗದಂತೆ ತಿನಿಸನ್ನು ಕದ್ದ ಕಿರಣ್ ಮತ್ತು ಜಗದೀಶ್ ಅವರಿಗೆ ಖುದ್ದು ಸುದೀಪ್ ಅವರೇ ಶಿಕ್ಷೆ ಘೋಷಣೆ ಮಾಡಿದರು. ಮುಂದಿನ ವಾರದ ವರೆಗೆ ಮನೆಗೆ ಏನೇ ತಿನಿಸು ಬಂದರೂ ಸಹ ಕಿರಣ್ ಹಾಗೂ ಜಗದೀಶ್ ಅವರಿಗೆ ಕೊಡುವಂತೆ ಇಲ್ಲ ಎಂದರು. ಮಾತ್ರವಲ್ಲ, ಒಂದೊಮ್ಮೆ ಮತ್ತೊಮ್ಮೆ ತಿನಿಸನ್ನು ಕಿರಣ್ ಆಗಲಿ, ಜಗದೀಶ್ ಆಗಲಿ ಕದ್ದರೆ ಅವರಿಬ್ಬರನ್ನೂ ನೇರವಾಗಿ ನಾಮಿನೇಟ್ ಮಾಡಲಾಗುತ್ತದೆ ಎಂದು ಸಹ ಸುದೀಪ್ ಹೇಳಿದರು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಫ್ಯಾಷನ್ ಶೋ, ಸೌಂದರ್ಯಾ-ಆಸಿಯಾ ಕ್ಯಾಟ್ ವಾಕ್: ವಿಡಿಯೋ

ತಿನಿಸುಗಳಿಗೆ ಮಾತ್ರವೇ ಅಲ್ಲ ದಿನಸಿಗೂ ಸಹ ಕೆಲವು ನಿಯಮಗಳನ್ನು ಸುದೀಪ್ ಹಾಕಿದರು. ಪ್ರತಿ ವಾರ ದಿನಸಿ ಬಂದಾಗಲೂ ಸಹ ಜಗದೀಶ್ ಹಾಗೂ ಕಿರಣ್ ಅವರನ್ನು ದಿನಸಿಯಿಂದ ದೂರ ಇಟ್ಟು ಅವರಿಗೆ ಬರಬೇಕಾದ ಪಾಲನ್ನು ಪ್ರತ್ಯೇಕಿಸಿ ಅದನ್ನು ಬೇರೆ ಯಾರೋ ಇರಿಸಿಕೊಂಡು ಕಾಲ-ಕಾಲಕ್ಕೆ ಅವರಿಗೆ ನೀಡಬೇಕೆ ವಿನಃ ಅವರಿಗೆ ನೇರವಾಗಿ ನೀಡುವಂತಿಲ್ಲ’ ಎಂದರು. ಒಂದೊಮ್ಮೆ ಅವರು ಮತ್ತೊಮ್ಮೆ ಕಳ್ಳತನ ಮಾಡಿದರೆ ನೇರವಾಗಿ ನಾಮಿನೇಟ್ ಸಹ ಆಗಲಿದ್ದಾರೆ.

ಈ ವಿಷಯವಾಗಿ ಮಾತನಾಡಿದ ಗಾನವಿ, ‘ನನಗೆ ಮೊದಲಿನಿಂದಲೂ ಗೊತ್ತಿತ್ತು ಸಾರ್, ಇವನಿಗೆ (ಕಿರಣ್) ಕಳ್ಳತನದ ಬುದ್ಧಿ ಇದೆ ಎಂದು. ನಾನು ಅವನನ್ನು ಕಳ್ಳ ಶಾಸ್ತ್ರಿ ಎಂದೇ ಕರೆಯುತ್ತೀನಿ’ ಎಂದರು. ಕೊನೆಗೆ ಸುದೀಪ್ ಅವರು ಗಾನವಿ ಅವರನ್ನೇ ಉಸ್ತುವಾರಿಯನ್ನಾಗಿ ಮಾಡಿ, ಕಿರಣ್ ಹಾಗೂ ಜಗದೀಶ್​​ಗೆ ಯಾವ ತಿಂಡಿಯೂ ಸಿಗದಂತೆ ನೋಡಿಕೊಳ್ಳುವಂತೆ ಜವಾಬ್ದಾರಿ ವಹಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More