
‘ಬಿಗ್ ಬಾಸ್ ಒಟಿಟಿ’ (Bigg Boss OTT) ಸೀಸನ್ ಕನ್ನಡಿಗರ ಪಾಲಿಗೆ ಹೊಸತು. ಈ ಸೀಸನ್ ಸಾಕಷ್ಟು ಗಮನ ಸೆಳೆದಿದೆ. ಟಿವಿಯಲ್ಲಿ ಪ್ರಸಾರ ಕಾಣದೆ ಕೇವಲ ವೂಟ್ ಒಟಿಟಿ ಮೂಲಕ ‘ಬಿಗ್ ಬಾಸ್’ ಪ್ರಸಾರ ಕಂಡಿದ್ದು, ವೀಕ್ಷಕರಿಗೆ ಹೊಸ ಅನುಭವ ನೀಡಿದೆ. ದಿನದ 24 ಗಂಟೆ ಈ ಶೋ ವೀಕ್ಷಿಸುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಈಗ ಬಿಗ್ ಬಾಸ್ ಟಿವಿ ಸೀಸನ್ ಆರಂಭ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ ಯಾವಾಗ ಎಂಬ ಬಗ್ಗೆ ಘೋಷಣೆ ಆಗಿದೆ. ಇದರ ಜತೆಗೆ ಒಟಿಟಿ ಮಂದಿಗೆ ಸರ್ಪ್ರೈಸ್ ಒಂದು ಸಿಕ್ಕಿದೆ. ಪ್ರೋಮೋದಲ್ಲಿ ಈ ವಿಚಾರ ಸ್ಪಷ್ಟವಾಗಿದೆ.
‘ಬಿಗ್ ಬಾಸ್’ ಮನೆಯಲ್ಲಿ ಸದ್ಯ 8 ಸ್ಪರ್ಧಿಗಳು ಬಂಧಿಯಾಗಿದ್ದಾರೆ. ಒಟಿಟಿ ಸೀಸನ್ ಮುಗಿಯುತ್ತಿದ್ದ ತಕ್ಷಣ ಟಿವಿ ಸೀಸನ್ ಆರಂಭ ಆಗಲಿದೆ ಎಂದು ಈ ಮೊದಲು ಘೋಷಣೆ ಆಗಿತ್ತು. ಆದರೆ, ಈಗ ಆ ರೀತಿ ಮಾಡುತ್ತಿಲ್ಲ. ಒಂದು ವಾರ ಗ್ಯಾಪ್ನ ನಂತರದಲ್ಲಿ ಟಿವಿ ಸೀಸನ್ ಆರಂಭ ಆಗಲಿದೆ. ಒಟಿಟಿಯಿಂದ ನಾಲ್ಕು ಸ್ಪರ್ಧಿಗಳು ಟಿವಿ ಸೀಸನ್ಗೆ ತೆರಳುತ್ತಾರೆ. ಒಟಿಟಿಯಿಂದ ಟೀವಿ ಸೀಸನ್ ಹೋಗುವ ಮುನ್ನ ನಾಲ್ಕು ಸ್ಪರ್ಧಿಗಳಿಗೆ ಒಂದು ವಾರ ಗ್ಯಾಪ್ ಸಿಗಲಿದೆ.
ಬಿಗ್ ಬಾಸ್ ಮನೆಯಲ್ಲಿ ಇರೋದು ಸಣ್ಣ ಟಾಸ್ಕ್ ಅಲ್ಲವೇ ಅಲ್ಲ. ಹೊರ ಜಗತ್ತಿನ ಪ್ರಪಂಚದಿಂದ ದೂರ ಇರಬೇಕು. ಮನೆಯಲ್ಲಿ ತಮ್ಮದೇ ಪ್ರಪಂಚ ಕಟ್ಟಿಕೊಳ್ಳಬೇಕು. ಮೊಬೈಲ್ ಬಳಕೆ ಮಾಡುವಂತಿಲ್ಲ. ಈ ಎಲ್ಲಾ ಕಾರಣದಿಂದ ಈ ಮನೆಯಲ್ಲಿ ಇರೋದು ಒಂದು ದೊಡ್ಡ ಟಾಸ್ಕ್. ಈಗ ಮನೆಯ ಸ್ಪರ್ಧಿಗಳಿಗೆ ಒಂದು ವಾರ ಗ್ಯಾಪ್ ಸಿಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.
ಇದನ್ನೂ ಓದಿ: ‘ನನಗೆ ತುಂಬಾ ಕೆಲಸಗಳಿವೆ, ಬಿಗ್ ಬಾಸ್ಗೆ ಹೋಗಲ್ಲ: TV9ಗೆ ಅನಿರುದ್ಧ ಜತ್ಕರ್ ಸ್ಪಷ್ಟನೆ
ಈ ಬಾರಿ ಟಿವಿ ಬಿಗ್ ಬಾಸ್ ಹೊಸ ರೀತಿಯಲ್ಲಿ ಮೂಡಿ ಬರಲಿದೆ. ಈ ಮೊದಲು ಬಿಗ್ ಬಾಸ್ನಲ್ಲಿ ಆಡಿದಂತಹ ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ ಮೊದಲಾದ ಸ್ಪರ್ಧಿಗಳು ದೊಡ್ಮನೆಗೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹೊಸ ಸ್ಪರ್ಧಿಗಳು ಕೂಡ ಬಿಗ್ ಬಾಸ್ಗೆ ಬರುತ್ತಿದ್ದಾರೆ. ಸೆಪ್ಟೆಂಬರ್ 24ರಂದು ಸಂಜೆ 6 ಗಂಟೆಗೆ ಬಿಗ್ ಬಾಸ್ ಆರಂಭ ಆಗಲಿದೆ.
Published On - 2:46 pm, Thu, 15 September 22