‘ನನಗೆ ತುಂಬಾ ಕೆಲಸಗಳಿವೆ, ಬಿಗ್ ಬಾಸ್​ಗೆ ಹೋಗಲ್ಲ: TV9ಗೆ ಅನಿರುದ್ಧ ಜತ್ಕರ್ ಸ್ಪಷ್ಟನೆ

ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆಗುವುದಕ್ಕೂ ಮೊದಲು ಸಂಭಾವ್ಯ ಪಟ್ಟಿ ಹರಿದಾಡುತ್ತದೆ. ಇದರಲ್ಲಿ ಅರ್ಧ ನಿಜ ಆಗಿದ್ದರೆ ಇನ್ನರ್ಧ ಸುಳ್ಳು. ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ತಾವೇ ಸ್ಪಷ್ಟನೆ ನೀಡಿದ್ದಿದೆ.

‘ನನಗೆ ತುಂಬಾ ಕೆಲಸಗಳಿವೆ, ಬಿಗ್ ಬಾಸ್​ಗೆ ಹೋಗಲ್ಲ: TV9ಗೆ ಅನಿರುದ್ಧ ಜತ್ಕರ್ ಸ್ಪಷ್ಟನೆ
ಅನಿರುದ್ಧ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 13, 2022 | 6:11 PM

‘ಬಿಗ್ ಬಾಸ್’ ಟಿವಿ ಸೀಸನ್​ಗೆ ಕ್ಷಣಗಣನೆ ಆರಂಭ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡದ ಸೀಸನ್ 9’ (Bigg Boss Kannada) ಆರಂಭ ಆಗಲಿದೆ. ಈಗಾಗಲೇ ಈ ಶೋಗೆ ಯಾರೆಲ್ಲ ಹೋಗುತ್ತಾರೆ ಎಂಬ ಕುರಿತು ಸಾಕಷ್ಟು ಗಾಸಿಪ್​ಗಳು ಹರಿದಾಡುತ್ತಿವೆ. ನಟ, ವಿಷ್ಣುವರ್ಧನ್ ಅಳಿಯ ಅನಿರುದ್ಧ ಜತ್ಕರ್ (Aniruddha Jatkar) ಕೂಡ ‘ಬಿಗ್ ಬಾಸ್​’ ಟಿವಿ ಸೀಸನ್​ಗೆ ಹೋಗುತ್ತಾರೆ ಎಂಬ ಮಾಹಿತಿ ಹರಿದಾಡಿದೆ. ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಆಗಿದೆ. ಈ ಕುರಿತು ಅನಿರುದ್ಧ ಅವರು ಟಿವಿ9 ಕನ್ನಡ ಡಿಜಿಟಲ್​ಗೆ ಸ್ಪಷ್ಟನೆ ನೀಡಿದ್ದಾರೆ. ‘ಬಿಗ್ ಬಾಸ್​ನಿಂದ ಯಾರೂ ಅಪ್ರೋಚ್ ಮಾಡಿಲ್ಲ. ಮಾಡಿದರೂ ನಾನು ಹೋಗಲ್ಲ’ ಎಂದಿದ್ದಾರೆ.

ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆಗುವುದಕ್ಕೂ ಮೊದಲು ಸಂಭಾವ್ಯ ಪಟ್ಟಿ ಹರಿದಾಡುತ್ತದೆ. ಇದರಲ್ಲಿ ಅರ್ಧ ನಿಜ ಆಗಿದ್ದರೆ ಇನ್ನರ್ಧ ಸುಳ್ಳು. ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ತಾವೇ ಸ್ಪಷ್ಟನೆ ನೀಡಿದ್ದಿದೆ. ಆದರೆ, ಇನ್ನೂ ಕೆಲವರು ಈ ಬಗ್ಗೆ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ. ಅನಿರುದ್ಧ ಅವರು ಬಿಗ್ ಬಾಸ್​ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬಿಗ್ ಬಾಸ್​ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ವಾಹಿನಿಯವರು ತಮ್ಮದೇ ಮಾನದಂಡ ಇಟ್ಟುಕೊಂಡಿರುತ್ತಾರೆ. ಕಿರುತೆರೆ, ಹಿರಿತೆರೆ, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಖ್ಯಾತಿ ಪಡೆದ ಸ್ಪರ್ಧಿಗಳಿಗೆ ಮಣೆ ಹಾಕಲಾಗುತ್ತದೆ. ಈ ಕಾರಣದಿಂದ ಅನಿರುದ್ಧ ಅವರಿಗೆ ಆಫರ್ ನೀಡಲಾಗಿದೆ ಹಾಗೂ ಅವರು ಬಿಗ್ ಬಾಸ್​ಗೆ ತೆರಳುತ್ತಾರೆ ಎಂದು ವರದಿ ಆಗಿತ್ತು. ಆದರೆ, ಇದನ್ನು ಅನಿರುದ್ಧ ಅಲ್ಲಗಳೆದ್ದಿದ್ದಾರೆ.

ಇದನ್ನೂ ಓದಿ
Image
‘ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’; ಫ್ಯಾನ್ಸ್​ಗೋಸ್ಕರ ಅನಿರುದ್ಧ್​ ಭಾವನಾತ್ಮಕ ಪೋಸ್ಟ್
Image
Anirudh Jatkar: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಸಿಕ್ಕ ಸಂಬಳದ ಬಗ್ಗೆ ನೇರವಾಗಿ ಮಾತನಾಡಿದ ಅನಿರುದ್ಧ್​
Image
‘ಜೊತೆ ಜೊತೆಯಲಿ’ ತಂಡ ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಅನಿರುದ್ಧ್​ ತಿರುಗೇಟು
Image
‘ಜೊತೆ ಜೊತೆಯಲಿ ಧಾರಾವಾಹಿ 2-3 ತಿಂಗಳಲ್ಲಿ ಮುಗಿಯಲಿದೆ’: ಅನಿರುದ್ಧ್​

ಅನಿರುದ್ಧ್ ಅವರು ನಟನೆ ಮಾತ್ರವಲ್ಲದೆ ಹಲವು ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಕಾರಣದಿಂದಲೂ ಅವರು ಬಿಗ್ ಬಾಸ್ ಆಫರ್ ಸಿಕ್ಕರೆ ತಿರಸ್ಕರಿಸುತ್ತಾರಂತೆ. ‘ನನಗೆ ಬಿಗ್ ಬಾಸ್​ ಕಡೆಯಿಂದ ಆಫರ್ ಸಿಕ್ಕಿಲ್ಲ. ಆಫರ್ ಕೊಟ್ಟರೂ ನಾನು ಬಿಗ್ ಬಾಸ್​ಗೆ ಹೋಗಲ್ಲ. ನನಗೆ ಇಲ್ಲಿ ಹಲವು ಕೆಲಸಗಳಿವೆ. ನಾನು ಬಿಗ್​ ಬಾಸ್ ಮನೆಗೆ ತೆರಳಿದರೆ ಮೂರು ತಿಂಗಳ ಕಾಲ ನಾನು ಮಾಡಬೇಕಿರುವ  ಸಾಮಾಜಿಕ ಕೆಲಸಗಳು ನಿಂತು ಹೋಗುತ್ತವೆ’ ಎಂದಿದ್ದಾರೆ ಅನಿರುದ್ಧ.

ಇದನ್ನೂ ಓದಿ: ‘ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’; ಫ್ಯಾನ್ಸ್​ಗೋಸ್ಕರ ಅನಿರುದ್ಧ್​ ಭಾವನಾತ್ಮಕ ಪೋಸ್ಟ್

ವಿಷ್ಣು ಸ್ಮಾರಕದ ಕೆಲಸಗಳು ನಡೆಯುತ್ತಿವೆ. ಕೆಲಸದ ಪ್ರಗತಿಯನ್ನು ಅನಿರುದ್ಧ ನೋಡಿಕೊಳ್ಳುತ್ತಿದ್ದಾರೆ. ಅವರು ಬಿಗ್ ಬಾಸ್​ಗೆ ತೆರಳಿದರೆ ಈ ಕೆಲಸದ ಬಗ್ಗೆ ಗಮನ ನೀಡಲು ಸಾಧ್ಯವಿಲ್ಲ. ಈ ಕಾರಣವನ್ನೂ ಅವರು ನೀಡುತ್ತಾರೆ.  ಮನೆಯ ಗೃಹಪ್ರವೇಶ ತಯಾರಿಯಲ್ಲೂ ಅನಿರುದ್ಧ ಬ್ಯುಸಿ ಇದ್ದಾರೆ.

Published On - 5:45 pm, Tue, 13 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ