ಬಿಗ್ ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್; ಪ್ಲೇ ಆಗಿತ್ತು ಕಿಚ್ಚನ ವಿಟಿ

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಶೋನ ನಡೆಸಿಕೊಡುತ್ತಿದ್ದಾರೆ. ಈ ಶೋ  ಯಶಸ್ವಿಯಾಗಿ ಸಾಗುತ್ತಿದೆ. ಈ ಮೊದಲು ಅವರು 10 ಟಿವಿ ಶೋಗಳು, ಒಂದು ಒಟಿಟಿ ಶೋ ಹಾಗೂ ಒಂದು ಮಿನಿ ಸೀಸನ್​ನ ನಡೆಸಿಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟ ಬಗ್ಗೆ ಅನೇಕರಿಗೆ ಖುಷಿ ಇದೆ.

ಬಿಗ್ ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್; ಪ್ಲೇ ಆಗಿತ್ತು ಕಿಚ್ಚನ ವಿಟಿ
ಸುದೀಪ್ ಕುಟುಂಬ
Edited By:

Updated on: Nov 28, 2024 | 6:30 AM

ಸ್ಪರ್ಧಿಗಳ ಬಿಗ್ ಬಾಸ್ ಜರ್ನಿ ಪೂರ್ಣಗೊಂಡ ಬಳಿಕ ವಿಟಿ ಒಂದನ್ನು ಪ್ಲೇ ಮಾಡಲಾಗುತ್ತದೆ. ಈ ವಿಡಿಯೋದಲ್ಲಿ ಸ್ಪರ್ಧಿಗಳ ಜರ್ನಿ ಬಗ್ಗೆ, ಸ್ಪರ್ಧಿಗಳ ಅಳು ಹಾಗೂ ದುಃಖದ ಬಗ್ಗೆ ಇರುತ್ತದೆ. ಇದೇ ರೀತಿ ಕಿಚ್ಚ ಸುದೀಪ್ ಅವರ ವಿಟಿ ಒಂದು ಪ್ಲೇ ಮಾಡಲಾಗಿತ್ತು. ಇದನ್ನು ನೋಡಿ ಸುದೀಪ್ ಅವರ ಖುಷಿಪಟ್ಟಿದ್ದರು. ಈ ವೇದಿಕೆ ಮೇಲೆ ಸುದೀಪ್ ಜೊತೆ ಅವರ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಕೂಡ ಇದ್ದರು ಎಂಬುದು ಖುಷಿಯ ವಿಚಾರ ಆಗಿತ್ತು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಶೋನ ನಡೆಸಿಕೊಡುತ್ತಿದ್ದಾರೆ. ಈ ಶೋ  ಯಶಸ್ವಿಯಾಗಿ ಸಾಗುತ್ತಿದೆ. ಈ ಮೊದಲು ಅವರು 10 ಟಿವಿ ಶೋಗಳು, ಒಂದು ಒಟಿಟಿ ಶೋ ಹಾಗೂ ಒಂದು ಮಿನಿ ಸೀಸನ್​ನ ನಡೆಸಿಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟ ಬಗ್ಗೆ ಅನೇಕರಿಗೆ ಖುಷಿ ಇದೆ.

ಈ ಮೊದಲು ಬಿಗ್ ಬಾಸ್ ವೇದಿಕೆ ಮೇಲೆ ಪ್ರಿಯಾ ಹಾಗೂ ಸಾನ್ವಿ ಒಟ್ಟಾಗಿ ಆಗಮಿಸಿದ್ದರು. ಈ ವೇಳೆ ಸಾನ್ವಿ ಅವರು ಚಿಕ್ಕದಾಗಿದ್ದರು. ವಿಟಿ ಪ್ಲೇ ಮಾಡುವಾಗ, ‘ನಾನು ಅಳೋ ಮೂಡ್​ನಲ್ಲಿ ಇಲ್ಲ’ ಎಂದು ಹೇಳಿದ್ದರು ಪ್ರಿಯಾ. ಹೀಗಾಗಿ, ಫನ್ ಆಗಿರೋ ವಿಡಿಯೋ ಹಂಚಿಕೊಂಡಿದ್ದರು. ಸುದೀಪ್ ಅವರು ಸಾಕಷ್ಟು ಬಾರಿ ರೀ ಟೇಕ್​ಗಳನ್ನು ತೆಗೆದುಕೊಳ್ಳೋ ಪರಿಸ್ಥಿತಿ ಬರುತ್ತದೆ. ಅದನ್ನು ತೋರಿಸಲಾಗಿದೆ.

ಆ ಬಳಿಕ ಮೊದಲ ಸೀಸನ್​ನಿಂದ ಇಲ್ಲಿಯವರೆಗೆ ಏನಾಯ್ತು ಎನ್ನುವ ಪ್ರೋಮೋನ ಹಂಚಿಕೊಳ್ಳಲಾಗಿತ್ತು. ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಈ ಬಾರಿ ಸುದೀಪ್ ಅವರದ್ದು ಕೊನೆಯ ಸೀಸನ್ ಎನ್ನಲಾಗುತ್ತಿದೆ. ಹೀಗಾಗಿ, ಈ ಬಾರಿ ವಿಶೇಷ ವಿಡಿಯೋ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಧ್ಯೆಯೇ ಶೋ ತೊರೆಯುವ ಘೋಷಣೆ ಮಾಡಿದ್ದಾರೆ. ಇದು ಅವರ ಕೊನೆಯ ಸೀಸನ್ ಆಗಲಿದೆ. ಮುಂದೆ ಯಾರು ಈ ಶೋನ ನಿರೂಪಣೆ ಮಾಡುತ್ತರೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us