ನಕಲಿ ವಸಂತ್ ಮಾಸ್ಟರ್​​ನ ಗೋಳು ಹೋಯ್ದುಕೊಂಡ ರಚಿತಾ ರಾಮ್-ನಯನಾ

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2025 'ಮಹಾಸಂಗಮ' ವೇದಿಕೆಯಲ್ಲಿ ನಕಲಿ ವಸಂತ್ ಮಾಸ್ಟರ್‌ಗೆ ರಚಿತಾ ರಾಮ್ ಮತ್ತು ನಯನಾ ಅವರ ಗೋಳುಹೊಯ್ದುಕೊಂಡಿದ್ದು ವೈರಲ್ ಆಗಿದೆ. ವಸಂತ್ ವಸಂತ್ ಹಾಡು ಹೇಳಿ ನಕಲಿ ಮಾಸ್ಟರ್ ನಾಚುವಂತೆ ಮಾಡಿದ ರಚಿತಾ, ಬಳಿಕ ನಯನಾ ಕೂಡ ತಮ್ಮ ಮಾತಿನಿಂದ ನಕ್ಕು ಸುಸ್ತಾಗಿಸಿದರು. ಶಿವಣ್ಣ ಕೂಡ ಜಡ್ಜ್ ಆಗಿದ್ದ ಈ ಕಾರ್ಯಕ್ರಮದ ಈ ಫನ್ ವಿಡಿಯೋ ಎಲ್ಲರ ಗಮನ ಸೆಳೆದಿದೆ.

ನಕಲಿ ವಸಂತ್ ಮಾಸ್ಟರ್​​ನ ಗೋಳು ಹೋಯ್ದುಕೊಂಡ ರಚಿತಾ ರಾಮ್-ನಯನಾ
ರಚಿತಾ-ನಯನಾ
Edited By:

Updated on: Feb 03, 2026 | 7:53 AM

ಜೀ ಕನ್ನಡದ (Zee Kannada) ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೂಲಕ ಹಲವು ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ. ಅದೇ ರೀತಿ ಅನೇಕ ಡ್ಯಾನ್ಸ್ ಮಾಸ್ಟರ್​​​ಗಳಿಗೂ ತಮ್ಮ ಕಲೆಯನ್ನು ತೋರಿಸಲು ಒಂದು ವೇದಿಕೆ ಸಿಕ್ಕಂತೆ ಆಗಿದೆ. ಈಗ ವಸಂತ್ ಮಾಸ್ಟರ್ಸ್​ ಅವರ ಬಗ್ಗೆ ಚರ್ಚೆ ನಡೆದಿದೆ. ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ವಸಂತ್ ಅವರಿಗೆ ಬೇಡಿಕೆ ಇದೆ. ಈ ವೇದಿಕೆ ಮೇಲೆ ನಕಲಿ ವಸಂತ್ ಮಾಸ್ಟರ್ಸ್​​ನ ರಚಿತಾ ರಾಮ್ ಹಾಗೂ ನಯನಾ ಗೋಳುಹೊಯ್ದುಕೊಂಡಿದ್ದು, ವಿಡಿಯೋ ಗಮನ ಸೆಳೆಯೋ ರೀತಿಯಲ್ಲಿ ಇದೆ.

ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-2025 ಹಾಗೂ ಕಿಲಾಡಿ ಜೂನಿಯರ್ಸ್ ‘ಮಹಾಸಂಗಮ’ ರಾತ್ರಿ 7:30ಕ್ಕೆ ಪ್ರಸಾರ ಕಂಡಿದೆ. ಈ ವೇದಿಕೆ ಮೇಲೆ ವಸಂತ್ ಅವರ ಗೆಟಪ್​​ನಲ್ಲಿ ಬಂದರು ಸ್ಪರ್ಧಿಯೊಬ್ಬರು. ಆಗ ರಚಿತಾ ರಾಮ್ ಅವರು, ‘ವಸಂತ ವಸಂತ’ ಹಾಡನ್ನು ಹಾಡಿದರು. ಈ ಹಾಡನ್ನು ಕೇಳಿ ನಕಲಿ ವಸಂತ್ ಮಾಸ್ಟರ್ಸ್ ನಾಚಿ ನೀರಾದರು ಎಂದರೂ ತಪ್ಪಾಗಲಾರದರು. ಈ ವೇಳೆ ರಚಿತಾ ರಾಮ್ ಕೂಡ ನಕ್ಕರು.

ಆ ಬಳಿಕ ಫೀಲ್ಡ್​​ಗೆ ಇಳಿದಿದ್ದು ನಯನಾ ಅವರು. ಅವರು ನಕಲಿನ ವಸಂತ್ ಮಾಸ್ಟರ್ಸ್​​​ನ ಗೋಳು ಹೊಯ್ದುಕೊಂಡರು. ಅದೆಷ್ಟರ ಮಟ್ಟಿಗೆ ಇತ್ತು ಆ ಗೋಳು ಹೊಯ್ದುಕೊಂಡಿದ್ದು ಎಂದರೆ ಆ ಪಾತ್ರ ಮಾಡಿದವರು ನಕ್ಕು ಸುಸ್ತಾದರು. ‘ವಸಂತ್ ಏನೇ ಮಾಡಿದ್ರೂ ಚೆಂದ, ವಸಂತ್ ಕೊರಿಯೋಗ್ರಫಿನೇ ಚೆಂದ’ ಎಂದರು ನಯನಾ. ಆ ಬಳಿಕ ವಸಂತ್ ಏನೇ ಮಾಡಿದ್ರೂ ಚೆಂದ ಎಂದರು. ಈ ಫನ್ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಜೀ5 ಒಟಿಟಿಯಲ್ಲಿ ಪ್ರಸಾರ ಆಗಲಿದೆ ಕನ್ನಡ, ತುಳು ಭಾಷೆಯ ‘ಜೈ’ ಸಿನಿಮಾ

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-2025 ಹಾಗೂ ಕಿಲಾಡಿ ಜೂನಿಯರ್ಸ್ ‘ಮಹಾಸಂಗಮ’ ಗಮನ ಸೆಳೆದಿದೆ. ಎಲ್ಲಾ ಸ್ಪರ್ಧಿಗಳು ಒಂದೇ ಕಡೆ ಸೇರಿದ್ದು ಬಹಳ ವಿಶೇವಾಗಿತ್ತು. ಶಿವಣ್ಣ ಅವರು ಡಿಕೆಡಿಯ ಜಡ್ಜ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us