AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rachita Ram

Rachita Ram

ರಚಿತಾ ರಾಮ್ ನಿಜವಾದ ಹೆಸರು ಬಿಂಧಿಯಾ ರಾಮ್. ಇವರು ಜನಿಸಿದ್ದು 1993ರ ಅಕ್ಟೋಬರ್ 3ರಂದು. ಸ್ಯಾಂಡಲ್‌ವುಡ್‌ನ ‘ಡಿಂಪಲ್ ಕ್ವೀನ್’ ಎಂದು ಕರೆಯಲ್ಪಡುವ ಪ್ರಮುಖ ಕನ್ನಡ ನಟಿ. ಅವರು ಬೆಂಗಳೂರಿನವರು. ಅವರ ತಂದೆ ಕೆ.ಎಸ್. ರಾಮ್ ಭರತನಾಟ್ಯ ಕಲಾವಿದ.  ರಚಿತಾ ಸ್ವತಃ ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ. ಅವರು 50 ಕ್ಕೂ ಹೆಚ್ಚು ಬಾರಿ ಪ್ರದರ್ಶನ ನೀಡಿದ್ದಾರೆ.  ತಮ್ಮ ವೈಯಕ್ತಿಕ ಜೀವನದಲ್ಲಿ, ರಚಿತಾ ಅವರು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಅವರಿಗೆ ನಿತ್ಯಾ ರಾಮ್ ಎಂಬ ಸಹೋದರಿಯೂ ಇದ್ದಾರೆ. ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ.  ರಚಿತಾ ಅವರು ‘ಅರಸಿ’ (2012) ಧಾರಾವಾಹಿಯೊಂದಿಗೆ ನಟನೆ ಆರಂಭಿಸಿದರು. ದರ್ಶನ್ ಅಭಿನಯದ ‘ಬುಲ್‌ಬುಲ್’ ಸಿನಿಮಾ ಅವರ ಬದುಕು ಬದಲಿಸಿತು. ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಸಿನಿಮಾ ಮಾಡಿದ್ದಾರೆ.  ರನ್ನ, ಚಕ್ರವ್ಯೂಹ, ಪುಷ್ಪಕ ವಿಮಾನ, ಭರ್ಜರಿ, ಅಯೋಗ್ಯ, ಸೀತಾರಾಮ ಕಲ್ಯಾಣ, ನಟಸಾರ್ವಭೌಮ ಮೊದಲಾದವು ಸೇರಿವೆ. 2025ರಲ್ಲಿ ಸೂಪರ್​ ಸ್ಟಾರ್​ ರಜಿನಿಕಾಂತ್​ ಜೊತೆ ‘ಕೂಲಿ’ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು.
ಇನ್ನೂ ಹೆಚ್ಚು ಓದಿ

ಮಾಸ್ಕ್ ಧರಿಸಿ ಬಸವನಗುಡಿ ಕಡಲೆ ಕಾಯಿ ಪರಿಷೆ ಸುತ್ತಾಡಿದ ಕನ್ನಡದ ಖ್ಯಾತ ನಟಿ

ನಟಿ ರಚಿತಾ ರಾಮ್ ಬಸವನಗುಡಿ ಕಡಲೆಕಾಯಿ ಪರಿಷೆಗೆ ಮಾಸ್ಕ್ ಧರಿಸಿ ಭೇಟಿ ನೀಡಿದರು. ಅಭಿಮಾನಿಗಳಿಂದ ಗುರುತಿಸಲ್ಪಡದೆ ಸಾರ್ವಜನಿಕರಂತೆ ಸುತ್ತಾಡಿ ಖುಷಿ ಪಟ್ಟರು. 18 ವರ್ಷಗಳ ನಂತರ ಪರಿಷೆಗೆ ಬಂದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅವರ ಹೊಸ ಸಿನಿಮಾ 'ಕ್ರಿಮಿನಲ್' ಟೈಟಲ್ ಲಾಂಚ್ ಕೂಡ ಇಲ್ಲೇ ನಡೆದಿತ್ತು. ಅವರನ್ನು ಗುರುತಿಸಲಾಗದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಅದೃಷ್ಟ ಬದಲಿಸಿದ ‘ಕೂಲಿ’; ಕಲ್ಯಾಣಿ ಪಾತ್ರ ಮಾಡಿದ ರಚಿತಾ ಹೇಳೋದಿಷ್ಟು

Rachita Ram New Movie ರಚಿತಾ ರಾಮ್ ಹಾಗೂ ಧ್ರುವ ಸರ್ಜಾ ಅವರು ಎಂಟು ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಇವರು ‘ಕ್ರಿಮಿನಲ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಆ ಸಿನಿಮಾ ಬಗ್ಗೆ ಇಲ್ಲಿದೆ ವಿವರ.

ಧ್ರುವ ಚಿತ್ರಕ್ಕೆ ‘ಕ್ರಿಮಿನಲ್’ ಟೈಟಲ್; ಉತ್ತರ ಕರ್ನಾಟಕ ಸೊಗಡಿನ ಸಿನಿಮಾಗೆ ರಚಿತಾ ನಾಯಕಿ

ಧ್ರುವ ಸರ್ಜಾ ಅವರ 7ನೇ ಸಿನಿಮಾ 'ಕ್ರಿಮಿನಲ್' ಟೈಟಲ್ ಅನಾವರಣಗೊಂಡಿದೆ. ರಚಿತಾ ರಾಮ್ ನಾಯಕಿಯಾಗಿ ಧ್ರುವ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ನೈಜ ಘಟನೆ ಆಧರಿಸಿದೆ ಅನ್ನೋದು ವಿಶೇಷ. ಧ್ರುವ 'ಹೋರಿ ಶಿವ' ಪಾತ್ರದಲ್ಲಿ ನಟಿಸಲಿದ್ದಾರೆ.

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ