
‘ಬಿಗ್ ಬಾಸ್’ (Bigg Boss) ರಿಯಾಲಿಟಿ ಶೋ ಹಿಂದಿ, ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ಯಶಸ್ಸು ಕಂಡಿದೆ. ಈಗ ತಮಿಳು ಬಿಗ್ ಬಾಸ್ನ ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಕಮಲ್ ಹಾಸನ್ (Kamal Haasan) ಅವರು ಸತತ ಆರನೇ ಬಾರಿಗೆ ಈ ಶೋಗೆ ನಿರೂಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ‘ಹೊಸ ಸೀಸನ್ಗೆ ರೆಡಿ ಆಗಿದ್ದೀರಾ’ ಎಂಬ ಪ್ರಶ್ನೆಯನ್ನು ವೀಕ್ಷಕರ ಬಳಿ ಕಮಲ್ ಹಾಸನ್ ಕೇಳಿದ್ದಾರೆ. ಹೊಸ ಪ್ರೋಮೋ ಸಖತ್ ವೈರಲ್ ಆಗುತ್ತಿದೆ.
ಕಮಲ್ ಹಾಸನ್ ಅವರು ನಟನೆಯಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಇದರ ಜತೆಗೆ ರಾಜಕೀಯದಲ್ಲೂ ಅವರು ಯಶಸ್ಸು ಗಳಿಸುವ ಹಂಬಲದಲ್ಲಿದ್ದರು. ತಮ್ಮದೇ ಪಕ್ಷ ಕೂಡ ಸ್ಥಾಪಿಸಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ, ಯಶಸ್ಸು ಸಿಗಲಿಲ್ಲ. ಇನ್ನು, ನಿರೂಪಣೆಯಲ್ಲಿ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ‘ತಮಿಳು ಬಿಗ್ ಬಾಸ್’ನ ಐದು ಸೀಸನ್ಗಳನ್ನು ಯಶಸ್ವಿಯಾಗಿ ನಿರೂಪಿಸಿದ್ದಾರೆ. ಈಗ ಆರನೇ ಸೀಸನ್ಗೆ ಅವರು ರೆಡಿ ಆಗಿದ್ದಾರೆ.
‘ತಮಿಳು ಬಿಗ್ ಬಾಸ್ 6’ನೇ ಸೀಸನ್ನ ಪ್ರೋಮೋ ಹೊರ ಬಂದಿದೆ. ಈ ಪ್ರೋಮೋದಲ್ಲಿ ಕಮಲ್ ಹಾಸನ್ ಲುಕ್ ಫ್ಯಾನ್ಸ್ಗೆ ಇಷ್ಟವಾಗಿದೆ. ಈ ಪ್ರೋಮೋ ನೋಡಿದವರಿಗೆ ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ ‘ವಿಕ್ರಮ್’ ಸಿನಿಮಾ ನೆನಪಿಗೆ ಬಂದಿದೆ. ಈ ಚಿತ್ರದ ಶೈಲಿಯಲ್ಲೇ ಪ್ರೋಮೋ ರಿಲೀಸ್ ಆಗಿದೆ ಅನ್ನೋದು ವಿಶೇಷ. ಈ ಬಾರಿ ಸೆಟ್ ಸಖತ್ ಅದ್ದೂರಿಯಾಗಿರಲಿದೆ ಎನ್ನಲಾಗುತ್ತಿದೆ.
ಸದ್ಯ ಹೊಸ ಸೀಸನ್ ಆರಂಭದ ದಿನಾಂಕವನ್ನು ಬಿಟ್ಟುಕೊಡಲಾಗಿಲ್ಲ. ಮೂಲಗಳ ಪ್ರಕಾರ ಅಕ್ಟೋಬರ್ ತಿಂಗಳಿಂದ ತಮಿಳು ಬಿಗ್ ಬಾಸ್ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ವೀಕ್ಷಕರು ಕಾಯುತ್ತಿದ್ದಾರೆ. ಸ್ಟಾರ್ ವಿಜಯ್ ವಾಹಿನಿಯಲ್ಲಿ ಈ ಶೋ ಪ್ರಸಾರ ಕಾಣಲಿದೆ.
ಇದನ್ನೂ ಓದಿ: ‘ವಿಕ್ರಮ್’ ಯಶಸ್ಸಿನ ಬೆನ್ನಲ್ಲೇ ‘ಇಂಡಿಯನ್ 2’ ಕೆಲಸಗಳಲ್ಲಿ ಕಮಲ್ ಹಾಸನ್ ಬ್ಯುಸಿ; ಇಲ್ಲಿದೆ ಹೊಸ ಪೋಸ್ಟರ್
ಕನ್ನಡದಲ್ಲಿ ಸದ್ಯ ‘ಬಿಗ್ ಬಾಸ್ ಒಟಿಟಿ’ ಸೀಸನ್ ನಡೆಯುತ್ತಿದೆ. ಶೀಘ್ರವೇ ಟಿವಿ ಸೀಸನ್ ಆರಂಭಗೊಳ್ಳಲಿದೆ. ಇದಕ್ಕಾಗಿ ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ. ಸೆಪ್ಟೆಂಬರ್ 18ಕ್ಕೆ ಒಟಿಟಿ ಸೀಸನ್ ಕೊನೆಗೊಳ್ಳಲಿದೆ.