AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಕ್ರಮ್​’ ಯಶಸ್ಸಿನ ಬೆನ್ನಲ್ಲೇ ‘ಇಂಡಿಯನ್​ 2’ ಕೆಲಸಗಳಲ್ಲಿ ಕಮಲ್ ಹಾಸನ್ ಬ್ಯುಸಿ; ಇಲ್ಲಿದೆ ಹೊಸ ಪೋಸ್ಟರ್

‘ಇಂಡಿಯನ್ 2’ ಶೂಟಿಂಗ್ ಮತ್ತೆ ಆರಂಭ ಆಗುತ್ತಿರುವ ಬಗ್ಗೆ ಕಮಲ್ ಹಾಸನ್, ಶಂಕರ್ ಮೊದಲಾದವರು ಅಪ್​ಡೇಟ್ ​ನೀಡಿದ್ದಾರೆ. 2020ರ ಸಂಕ್ರಾಂತಿ ಸಂದರ್ಭದಲ್ಲಿ ಮೊದಲ ಪೋಸ್ಟರ್ ರಿಲೀಸ್ ಆಗಿತ್ತು.

‘ವಿಕ್ರಮ್​’ ಯಶಸ್ಸಿನ ಬೆನ್ನಲ್ಲೇ ‘ಇಂಡಿಯನ್​ 2’ ಕೆಲಸಗಳಲ್ಲಿ ಕಮಲ್ ಹಾಸನ್ ಬ್ಯುಸಿ; ಇಲ್ಲಿದೆ ಹೊಸ ಪೋಸ್ಟರ್
ಕಮಲ್
TV9 Web
| Edited By: |

Updated on: Aug 24, 2022 | 4:26 PM

Share

ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಚಿತ್ರದಿಂದ ನಿರ್ಮಾಪಕನಾಗಿಯೂ ಕಮಲ್ ಹಾಸನ್ ಯಶಸ್ಸು ಕಂಡಿದ್ದಾರೆ. ಈಗ ಕಮಲ್ ಹಾಸನ್ ನಟನೆಯ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್ ಸಿಕ್ಕಿದೆ. ಕಮಲ್ ಅವರು ಮತ್ತೆ ‘ಇಂಡಿಯನ್ 2’ ಸಿನಿಮಾ (Indian 2 Movie) ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ಇಂದು (ಆಗಸ್ಟ್​ 24) ಈ ಬಗ್ಗೆ ತಂಡ ಅಪ್​ಡೇಟ್ ನೀಡಿದೆ. ಈ ವಿಚಾರ ಕೇಳಿ ಕಮಲ್ ಹಾಸನ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

1996ರಲ್ಲಿ ತೆರೆಗೆ ಬಂದ ‘ಇಂಡಿಯನ್’ ಸಿನಿಮಾ ಯಶಸ್ಸು ಕಂಡಿತ್ತು. ಆ ಚಿತ್ರಕ್ಕೆ ಎಸ್​.ಶಂಕರ್ ಅವರು ನಿರ್ದೇಶನ ಮಾಡಿದ್ದರು. ‘ಇಂಡಿಯನ್’ ರಿಲೀಸ್ ಆಗಿ ಸುಮಾರು 24 ವರ್ಷಗಳ ಬಳಿಕ ಸೀಕ್ವೆಲ್ ಘೋಷಣೆ ಮಾಡಲಾಗಿತ್ತು. 2020ರ ಆರಂಭದಲ್ಲೇ ‘ಇಂಡಿಯನ್ 2’ ಚಿತ್ರೀಕರಣ ಆರಂಭ ಆಗಿತ್ತು. ಆದರೆ, ಸೆಟ್​ನಲ್ಲಿ ಸಂಭವಿಸಿದ ಕ್ರೇನ್ ದುರಂತದಿಂದ ಮೂವರು ಮೃತಪಟ್ಟು ಹಲವರು ಗಾಯಗೊಂಡರು. ಈ ಕಾರಣದಿಂದ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿತು. ಇದೇ ಸಂದರ್ಭದಲ್ಲಿ ಭಾರತಕ್ಕೆ ಕೊವಿಡ್ ಕಾಲಿಟ್ಟಿದ್ದರಿಂದ ‘ಇಂಡಿಯನ್ 2’ ಶೂಟಿಂಗ್ ಆರಂಭ ಆಗಲೇ ಇಲ್ಲ. ಈಗ ಎರಡು ವರ್ಷಗಳ ಗ್ಯಾಪ್​ನ ಬಳಿಕ ಸಿನಿಮಾ ಕೆಲಸ ಮತ್ತೆ ಆರಂಭ ಆಗಿದೆ.

ಇದನ್ನೂ ಓದಿ
Image
‘ಮೊದಲು ನನ್ನ ಸಾಲ ತೀರಿಸುತ್ತೇನೆ’; ‘ವಿಕ್ರಮ್​’ ಯಶಸ್ಸಿನ ಬಗ್ಗೆ ನಟ ಕಮಲ್ ಹಾಸನ್ ಮಾತು
Image
Kamal Haasan: ವಿಶ್ವಾದ್ಯಂತ 200 ಕೋಟಿ ರೂ. ಬಾಚಿಕೊಂಡ ‘ವಿಕ್ರಮ್​’ ಸಿನಿಮಾ; ಗೆಲುವಿನ ಖುಷಿಯಲ್ಲಿ ಕಮಲ್​ ಹಾಸನ್​
Image
‘ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ’ ಎಂದ ಕಮಲ್​ ಹಾಸನ್​; ಏನದು?
Image
ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ

‘ಇಂಡಿಯನ್ 2’ ತಂಡ ಹೊಸ ಪೋಸ್ಟರ್ ಅನಾವರಣ ಮಾಡಿದೆ. ಕಮಲ್ ಹಾಸನ್ ಅವರು ಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ. ಇದಲ್ಲದೆ, ಸಿದ್ದಾರ್ಥ್​, ಕಾಜಲ್​ ಅಗರ್​ವಾಲ್​, ರಾಕುಲ್ ಪ್ರೀತ್ ಸಿಂಗ್, ಬಾಬಿ ಸಿಂಹ, ಪ್ರಿಯಾ ಭವಾನಿ ಶಂಕರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

‘ಇಂಡಿಯನ್ 2’ ಶೂಟಿಂಗ್ ಮತ್ತೆ ಆರಂಭ ಆಗುತ್ತಿರುವ ಬಗ್ಗೆ ಕಮಲ್ ಹಾಸನ್, ಶಂಕರ್ ಮೊದಲಾದವರು ಅಪ್​ಡೇಟ್ ​ನೀಡಿದ್ದಾರೆ. 2020ರ ಸಂಕ್ರಾಂತಿ ಸಂದರ್ಭದಲ್ಲಿ ಮೊದಲ ಪೋಸ್ಟರ್ ರಿಲೀಸ್ ಆಗಿತ್ತು. ಈಗ ಹೊಸ ಪೋಸ್ಟರ್ ಮೂಲಕ ಹೆಚ್ಚು ಕುತೂಹಲ ಮೂಡಿದೆ.

ಇದನ್ನೂ ಓದಿ: ‘ಮೊದಲು ನನ್ನ ಸಾಲ ತೀರಿಸುತ್ತೇನೆ’; ‘ವಿಕ್ರಮ್​’ ಯಶಸ್ಸಿನ ಬಗ್ಗೆ ನಟ ಕಮಲ್ ಹಾಸನ್ ಮಾತು

‘ವಿಕ್ರಮ್’ ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಚಿತ್ರದ ಸೀಕ್ವೆಲ್​ನಲ್ಲೂ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಆ ಸಿನಿಮಾ ಇನ್ನಷ್ಟೇ ಸೆಟ್ಟೇರಬೇಕಿದೆ.