Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡನೇ ಮದುವೆ ಆಗಬೇಕೇ ಎಂಬ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡಿಲ್ಲ ಎಂದ ಮೇಘನಾ ರಾಜ್

ಸಂದರ್ಶನ ಒಂದರಲ್ಲಿ ಮೇಘನಾ ರಾಜ್​ಗೆ ಎರಡನೇ ಮದುವೆ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ.

ಎರಡನೇ ಮದುವೆ ಆಗಬೇಕೇ ಎಂಬ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡಿಲ್ಲ ಎಂದ ಮೇಘನಾ ರಾಜ್
ಮೇಘನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 24, 2022 | 5:26 PM

ನಟಿ ಮೇಘನಾ ರಾಜ್ (Meghana Raj) ಅವರ ಬಾಳಲ್ಲಿ ಕಹಿ ಘಟನೆ ನಡೆದಿತ್ತು. 2020ರ ಜೂನ್ 7ರಂದು ಅವರ ಪತಿ, ನಟ ಚಿರಂಜೀವಿ ಸರ್ಜಾ ನಿಧನ ಹೊಂದಿದರು. ಇದಾದ ಕೆಲವೇ ತಿಂಗಳಲ್ಲಿ ಅವರಿಗೆ ಮಗು ಜನಿಸಿತು. ಮೇಘನಾ ರಾಜ್ ಅವರು ಮಗುವಿಗೆ ರಾಯನ್ ಎಂದು ಹೆಸರು ಇಟ್ಟಿದ್ದಾರೆ. ಈ ಮಧ್ಯೆ ಮೇಘನಾ ರಾಜ್​ ಎರಡನೇ ಮದವೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ವೀವ್ಸ್​ ಪಡೆಯುವ ಉದ್ದೇಶದಿಂದ ಕೆಲ ಯೂಟ್ಯೂಬ್ ಚಾನೆಲ್​ಗಳು ನಕಲಿ ಸುದ್ದಿ ಹಬ್ಬಿಸಿದ್ದರು. ಈಗ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್ ಬಬಲ್​ ವೆಬ್​​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜ್​ಗೆ ಎರಡನೇ ಮದುವೆ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ. ‘ಒಂದು ವರ್ಗದ ಜನರು ನನ್ನ ಬಳಿ ಎರಡನೇ ಮದುವೆ ಆಗು ಎಂದು ಸಲಹೆ ನೀಡಿದ್ದಾರೆ. ಇನ್ನೂ ಒಂದು ವರ್ಗದ ಜನ ನಿಮ್ಮ ಮಗುವಿನ ಜತೆ ಖುಷಿಯಿಂದ ಇರಿ ಎಂದಿದ್ದಾರೆ. ನಾನು ಯಾರ ಮಾತನ್ನು ಕೇಳಬೇಕು?’ ಎಂದು ಮೇಘನಾ ರಾಜ್ ಪ್ರಶ್ನೆ ಮಾಡಿದ್ದಾರೆ.

‘ಜಗತ್ತು ಏನನ್ನು ಬೇಕಾದರೂ ಹೇಳಲಿ, ನೀನು ಮನಸ್ಸಿನ ಮಾತನ್ನು ಕೇಳು ಎಂದು ಚಿರು ಯಾವಾಗಲೂ ನನಗೆ ಹೇಳುತ್ತಿದ್ದರು. ಎಂದಿಗೂ ಮತ್ತೊಂದು ಮದುವೆಯ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡಿಲ್ಲ. ನಾಳೆ ಏನಾಗುತ್ತದೆ ಎಂಬ ಬಗ್ಗೆ ಯೋಚಿಸಲ್ಲ. ಮುಂದಿನ ದಿನಗಳಲ್ಲಿ ನನ್ನ ಜೀವನ ಹೇಗಿರಬಹುದು ಎಂಬ ಬಗ್ಗೆ ನಾನು ಚಿಂತಿಸಲ್ಲ’ ಎಂದಿದ್ದಾರೆ ಮೇಘನಾ ರಾಜ್.

ಇದನ್ನೂ ಓದಿ
Image
Har Ghar Tiranga: ಚಿತ್ರಮಂದಿರದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ‘ಗೋಲ್ಡನ್​ ಸ್ಟಾರ್​’ ಗಣೇಶ್​
Image
Aamir Khan: ಆಮಿ​ರ್​ ಖಾನ್​ ಮನೆ ಮೇಲೆ ಹಾರಾಡಿದ ರಾಷ್ಟ್ರ ಧ್ವಜ; ಫೋಟೋ ವೈರಲ್​
Image
ಸುದೀಪ್​, ಉಪ್ಪಿ, ತಾರಾ, ರಮೇಶ್​ ಮನೆ ಮೇಲೆ ತ್ರಿವರ್ಣ ಧ್ವಜ; ಇಲ್ಲಿದೆ ಫೋಟೋ ಗ್ಯಾಲರಿ
Image
‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಯಶ್ ಸಾಥ್​; ಫ್ಯಾನ್ಸ್ ಬಳಿ ರಾಕಿಂಗ್ ಸ್ಟಾರ್ ಹೊಸ ಕೋರಿಕೆ

ಇದನ್ನೂ ಓದಿ: Raayan Raj Sarja: ರಾಷ್ಟ್ರ ಧ್ವಜ ಹಿಡಿದು ಸಂಭ್ರಮಿಸಿದ ಮೇಘನಾ ರಾಜ್​ ಪುತ್ರ ರಾಯನ್​ ರಾಜ್​ ಸರ್ಜಾ; ಇಲ್ಲಿದೆ ವಿಡಿಯೋ

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ 2018ರ ಮೇ 2ರಂದು ವಿವಾಹ ಆದರು. ಹಲವು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಇಬ್ಬರೂ, ಎಲ್ಲರ ಸಮ್ಮುಖದಲ್ಲಿ ಮದುವೆ ಆದರು. ಮೇಘನಾ ರಾಜ್ ಐದು ತಿಂಗಳ ಪ್ರೆಗ್ನೆಂಟ್ ಆಗಿದ್ದಾಗ ಚಿರು ನಿಧನ ಹೊಂದಿದರು. ರಾಯನ್ ರಾಜ್​ ಕೆಲವೇ ತಿಂಗಳಲ್ಲಿ 2ನೇ ವರ್ಷಕ್ಕೆ ಕಾಲಿಡಲಿದ್ದಾನೆ. ಕೆಲ ಸಮಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಮೇಘನಾ ರಾಜ್ ಈಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ರಿಯಾಲಿಟಿ ಶೋಗೆ ಜಡ್ಜ್​ ಆಗಿ, ಕೆಲ ಸಿನಿಮಾಗಳನ್ನು ಒಪ್ಪಿಕೊಂಡು ಬಣ್ಣದ ಲೋಕದಲ್ಲಿ ಬ್ಯುಸಿ ಆಗಿದ್ದಾರೆ.

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ