Raayan Raj Sarja: ರಾಷ್ಟ್ರ ಧ್ವಜ ಹಿಡಿದು ಸಂಭ್ರಮಿಸಿದ ಮೇಘನಾ ರಾಜ್​ ಪುತ್ರ ರಾಯನ್​ ರಾಜ್​ ಸರ್ಜಾ; ಇಲ್ಲಿದೆ ವಿಡಿಯೋ

75th Independence Day: ಚಂದನವನದ ತಾರೆಯರ ಮನೆಯಲ್ಲಿ ಸ್ವಾತಂತ್ರೋತ್ಸವದ ರಂಗು ಪಸರಿಸಿದೆ. ಮೇಘನಾ ರಾಜ್​ ಪುತ್ರ ರಾಯನ್​ ರಾಜ್​ ಸರ್ಜಾ ತ್ರಿವರ್ಣ ಧ್ವಜ ಹಿಡಿದು ನಲಿದಾಡಿದ್ದಾನೆ.

Raayan Raj Sarja: ರಾಷ್ಟ್ರ ಧ್ವಜ ಹಿಡಿದು ಸಂಭ್ರಮಿಸಿದ ಮೇಘನಾ ರಾಜ್​ ಪುತ್ರ ರಾಯನ್​ ರಾಜ್​ ಸರ್ಜಾ; ಇಲ್ಲಿದೆ ವಿಡಿಯೋ
| Updated By: ಮದನ್​ ಕುಮಾರ್​

Updated on:Aug 15, 2022 | 3:13 PM

ನಟಿ ಮೇಘನಾ ರಾಜ್​ (Meghana Raj) ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅನೇಕ ಫೋಟೋ ಹಾಗೂ ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಪುತ್ರ ರಾಯನ್​ ರಾಜ್​ ಸರ್ಜಾನ (Raayan Raj Sarja) ದಿನಚರಿ ಬಗ್ಗೆ ಅಪ್​ಡೇಟ್​ ನೀಡುತ್ತಾರೆ. ಈಗ ಪುತ್ರನಿಗೆ ಅವರು ರಾಷ್ಟ್ರ ಧ್ವಜ (National Flag) ನೀಡಿದ್ದಾರೆ. 75ನೇ ವರ್ಷದ ಸ್ವಾತಂತ್ರೋತ್ಸವದ ಪ್ರಯುಕ್ತ ಈ ವಿಶೇಷ ವಿಡಿಯೋವನ್ನು ಮೇಘನಾ ರಾಜ್​ ಪೋಸ್ಟ್​​ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭರ್ಜರಿ ಲೈಕ್ಸ್​ ಸಿಗುತ್ತಿದೆ. ಪುತ್ರನ ಆರೈಕೆಯ ಜೊತೆಜೊತೆಗೆ ಹಲವು ಸಿನಿಮಾ ಕೆಲಸಗಳಲ್ಲೂ ಮೇಘನಾ ರಾಜ್​ ಬ್ಯುಸಿ ಆಗಿದ್ದಾರೆ.

 

Published On - 3:13 pm, Mon, 15 August 22

Follow us