AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇನ್‌ಸೈಡ್.. ಔಟ್‌ಸೈಡ್..’ ಕಾರಣಕ್ಕೆ ‘ಆರ್ಯಭಟ’ ವಿನಯ್ ಗೌಡ ಫುಲ್ ಟ್ರೋಲ್; ಖಡಕ್ ತಿರುಗೇಟು

Vinay Gowda: ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ವೃತ್ತಕ್ಕೆ 'ಇನ್‌ಸೈಡ್-ಔಟ್‌ಸೈಡ್' ಎಂದಿದ್ದ ನಟ ವಿನಯ್ ಗೌಡ ತಮ್ಮನ್ನು 'ಆರ್ಯಭಟ' ಎಂದು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ನೆಗೆಟಿವ್ ಕಾಮೆಂಟ್‌ಗಳಿಂದಲೇ ನನ್ನ ಪ್ರೊಫೈಲ್ ವೈರಲ್ ಆಗುತ್ತಿದ್ದು ಪುಕ್ಕಟೆ ಮಾರ್ಕೆಟಿಂಗ್ ಮಾಡುತ್ತಿದ್ದೀರಿ ಎಂದು ತಿರುಗೇಟು ಕೊಟ್ಟಿದ್ದಾರೆ.

'ಇನ್‌ಸೈಡ್.. ಔಟ್‌ಸೈಡ್..’ ಕಾರಣಕ್ಕೆ 'ಆರ್ಯಭಟ' ವಿನಯ್ ಗೌಡ ಫುಲ್ ಟ್ರೋಲ್; ಖಡಕ್ ತಿರುಗೇಟು
ವಿನಯ್ ಗೌಡ
ರಾಜೇಶ್ ಹೆಗಡೆ ದುಗ್ಗುಮನೆ
|

Updated on:Aug 20, 2026 | 7:43 AM

Share

ಮುಖ್ಯಾಂಶಗಳು

  • ಇನ್‌ಸೈಡ್-ಔಟ್‌ಸೈಡ್' ಟ್ರೋಲ್
  • ಉಚಿತ ಮಾರ್ಕೆಟಿಂಗ್ ಎಂದ ನಟ ವಿನಯ್ ಗೌಡ
  • ಟ್ರೋಲರ್ಸ್‌ಗೆ ವಿನಯ್ ಲೇವಡಿ

ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟ ವಿನಯ್ ಗೌಡ (Vinay Gowda) ತಮ್ಮನ್ನು ಟ್ರೋಲ್ ಮಾಡುತ್ತಿರುವವರಿಗೆ ಸಾಮಾಜಿಕ ಜಾಲತಾಣದಲ್ಲಿ ತಕ್ಕ ಉತ್ತರ ನೀಡಿದ್ದಾರೆ. ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ವೃತ್ತಕ್ಕೆ ಎಷ್ಟು ಸೈಡ್ ಇರುತ್ತದೆ ಎಂದು ಕೇಳಿದಾಗ ಅವರು ನೀಡಿದ್ದ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನೆಟ್ಟಿಗರು ಅವರನ್ನು ‘ಆರ್ಯಭಟ’ ಎಂದು ಕರೆದು ತಮಾಷೆ ಮಾಡಿದ್ದರು. ಇದೀಗ ಅದೇ ವಿಚಾರವಾಗಿ ವಿನಯ್ ಪೋಸ್ಟ್ ಹಂಚಿಕೊಂಡಿದ್ದಾರೆ.

ವಿನಯ್ ಗೌಡ ಈ ಹಿಂದೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಭಾಗವಹಿಸಿದ್ದಾಗ ಸ್ಪರ್ಧಿಗೆ ಪ್ರಶ್ನೆ ಕೇಳಿದ್ದರು. ‘ವೃತ್ತಕ್ಕೆ ಎಷ್ಟು ಸೈಡ್ ಇರುತ್ತದೆ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸ್ಪರ್ಧಿ, ‘ಯಾವುದೇ ಸೈಡ್ ಇರೋದಿಲ್ಲ’ ಎಂದಿದ್ದರು. ವಿನಯ್ ಇದಕ್ಕೆ ಉತ್ತರ ನೀಡಿದ್ದರು. ವೃತ್ತಕ್ಕೆ ‘ಇನ್‌ಸೈಡ್’ ಮತ್ತು ‘ಔಟ್‌ಸೈಡ್’ ಎಂಬ ಎರಡು ಸೈಡ್ ಇರುತ್ತದೆ ಎಂದು ಉತ್ತರಿಸಿದ್ದರು. ಈ ವಿಚಿತ್ರ ಉತ್ತರ ಭಾರಿ ಟ್ರೋಲ್‌ಗೆ ಕಾರಣವಾಗಿತ್ತು.

ಈ ಟ್ರೋಲ್‌ಗಳ ಬಗ್ಗೆ ಈಗ ಪೋಸ್ಟ್ ಮಾಡಿರುವ ವಿನಯ್, ‘ಇನ್‌ಸೈಡ್ ಮತ್ತು ಔಟ್‌ಸೈಡ್.. ಯಾರಿಗೆ ಬೇಕು ಬಿಡಿ. ನನ್ನ ಸೋಶಿಯಲ್ ಮೀಡಿಯಾ ಎಂಗೇಜ್‌ಮೆಂಟ್ ಅನ್ನು ಆಕಾಶಕ್ಕೆ ಏರಿಸಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು’ ಎಂದು ಲೇವಡಿ ಮಾಡಿದ್ದಾರೆ.

‘ನೀವು ಪ್ರೀತಿ ತೋರಿಸುತ್ತಿದ್ದೀರಾ ಅಥವಾ ನನ್ನನ್ನು ಎಷ್ಟು ದ್ವೇಷಿಸುತ್ತೀರಿ ಎಂದು ದೊಡ್ಡ ಪ್ರಬಂಧ ಬರೆಯುತ್ತಿದ್ದೀರಾ ಎಂಬುದು ಇಂಟರ್‌ನೆಟ್ ಅಲ್ಗಾರಿದಂಗೆ ಮುಖ್ಯವಲ್ಲ. ಅದಕ್ಕೆ ಕೇವಲ ಹೈ ಟ್ರಾಫಿಕ್ ಮಾತ್ರ ಕಾಣುತ್ತದೆ. ನಿಮ್ಮ ಪ್ರತಿಯೊಂದು ಕೋಪದ ಕಾಮೆಂಟ್ ಹಾಗೂ ವೈರಲ್ ಎಡಿಟ್ ನನ್ನ ಪ್ರೊಫೈಲ್ ಅನ್ನು ಎಲ್ಲರ ಫೀಡ್‌ನಲ್ಲೂ ಟಾಪ್‌ಗೆ ಕೊಂಡೊಯ್ಯುತ್ತಿದೆ. ನೀವೆಲ್ಲರೂ ಪುಕ್ಕಟೆಯಾಗಿ ನನಗೆ ಮಾರ್ಕೆಟಿಂಗ್ ಮಾಡಿಕೊಡುತ್ತಿದ್ದೀರಿ’ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಅಗ್ನಿಪರೀಕ್ಷೆಯಲ್ಲಿ ಗಲಾಟೆ: ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕಿಲ್ಲ’ ಎಂದ ಸ್ಪರ್ಧಿ

ಅಷ್ಟೇ ಅಲ್ಲದೆ, ಪೋಸ್ಟ್‌ನ ಕೊನೆಯಲ್ಲಿ ‘ಪ್ರೀತಿಯಿಂದ ನಿಮ್ಮ ಆರ್ಯಭಟ’ ಎಂದು ಬರೆದು ತಮಗೆ ಇಟ್ಟಿದ್ದ ಹೆಸರಿನಲ್ಲೇ ಟ್ರೋಲರ್ಸ್‌ಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:42 am, Thu, 20 August 26

Follow Us
ರಾಜೇಶ್ ಹೆಗಡೆ ದುಗ್ಗುಮನೆ
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?