ಆತನಿಗೆ ಅನೈತಿಕ ಸಂಬಂಧವಿದೆ, ನನಗೆ ಕಿರುಕುಳ ನೀಡುತ್ತಿದ್ದಾನೆ; ಕಿರುತೆರೆ ನಟನ ವಿರುದ್ಧ ಪತ್ನಿ ದೂರು

|

Updated on: May 03, 2021 | 6:09 PM

ಮದುವೆ ಆಗುವ ಸಂದರ್ಭದಲ್ಲಿ ಅರುಣಾ ಅವರಿಂದ ವರದಕ್ಷಿಣೆಯಾಗಿ ರಾಜೇಶ್​ 15 ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಗಟ್ಟಿ ತೆಗೆದುಕೊಂಡಿದ್ದರಂತೆ. ಮೂರು ತಿಂಗಳ ಕಾಲ ಹೈದರಾಬಾದ್​ನಲ್ಲಿ ಇಬ್ಬರೂ ಸಂಸಾರ ನಡೆಸಿದ್ದರು.

ಆತನಿಗೆ ಅನೈತಿಕ ಸಂಬಂಧವಿದೆ, ನನಗೆ ಕಿರುಕುಳ ನೀಡುತ್ತಿದ್ದಾನೆ; ಕಿರುತೆರೆ ನಟನ ವಿರುದ್ಧ ಪತ್ನಿ ದೂರು
ರಾಜೇಶ್​ ಹಾಗೂ ಅವರ ಪತ್ನಿ
Follow us on

ಟಾಲಿವುಡ್​ನ ಖ್ಯಾಟ ನಟ ರಾಜೇಶ್​ ದತ್ತ ವಿರುದ್ಧ ಅವರ ಪತ್ನಿಯೇ ದೂರು ದಾಖಲಿಸಿದ್ದಾರೆ. ಪತಿ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಆತನಿಗೆ ಬೇರೆಯವರ ಜತೆ ಅನೈತಿಕ ಸಂಬಂಧ ಇದೆ ಎಂದು ರಾಜೇಶ್​ ದತ್ತ ಹೆಂಡತಿ ದೂರು ನೀಡಿದ್ದಾರೆ.

ಅರುಣಾ ಅಲಿಯಾಸ್​ ಸಾಧನಾ 2015ರ ಜೂನ್​ 6ರಂದು ಮದುವೆ ಆಗಿದ್ದರು. ವಿಜಯವಾಡದಲ್ಲಿ ದೊಡ್ಡದಾಗಿ ಮದುವೆ ಸಮಾರಂಭ ನಡೆದಿತ್ತು. ಇದಕ್ಕೆ ಅನೇಕ ಧಾರಾವಾಹಿ ನಟ-ನಟಿಯರು ಪಾಲ್ಗೊಂಡಿದ್ದರು. ಮದುವೆ ಆದ ನಂತರ ರಾಜೇಶ್​ ಅಕ್ರಮ ಸಂಬಂಧದ ವಿಚಾರ ಗೊತ್ತಾಗಿದೆ ಎಂದು ಅರುಣಾ ಆರೋಪಿಸಿದ್ದಾರೆ.

ಮದುವೆ ಆಗುವ ಸಂದರ್ಭದಲ್ಲಿ ಅರುಣಾ ಅವರಿಂದ ವರದಕ್ಷಿಣೆಯಾಗಿ ರಾಜೇಶ್​ 15 ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಗಟ್ಟಿ ತೆಗೆದುಕೊಂಡಿದ್ದರಂತೆ. ಮೂರು ತಿಂಗಳ ಕಾಲ ಹೈದರಾಬಾದ್​ನಲ್ಲಿ ಇಬ್ಬರೂ ಸಂಸಾರ ನಡೆಸಿದ್ದರು. ನಂತರ ಚೆನ್ನೈಗೆ ತೆರಳಿದ್ದರು. ಆದರೆ, ಶೂಟಿಂಗ್​ ನೆಪ ಹೇಳಿಕೊಂಡು ರಾಜೇಶ್​ ಹೈದರಾಬಾದ್​ಗೆ ಬರುತ್ತಿದ್ದರು ಎಂಬುದು ಅರುಣಾ ಆರೋಪ.

ನನ್ನ ಪತಿ ಅನೇಕ ಮಹಿಳೆಯರ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ. ನಾನಿಲ್ಲದಾಗ ಕೆಲವರನ್ನು ಆತ ಮನೆಗೂ ಕರೆದುಕೊಂಡು ಬರುತ್ತಿದ್ದ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಆತ  ನನಗೆ ಕಿರುಕುಳ ನೀಡಿದ್ದಾನೆ. ನನಗೆ ನ್ಯಾಯ ಬೇಕು ಎಂದು ಅರುಣಾ ಪೊಲೀಸರ ಬಳಿ ಪಟ್ಟು ಹಿಡಿದಿದ್ದಾರೆ.

ಚಂದ್ರಲೇಖಾ ಸೇರಿ ಸಾಕಷ್ಟು ತೆಲುಗು ಧಾರಾವಾಹಿಗಳಲ್ಲಿ ರಾಜೇಶ್​ ನಟಿಸುತ್ತಿದ್ದಾರೆ. ಈ ವರೆಗೆ ಅವರು ಸುಮಾರು 28ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ, ಅವರ ಪತ್ನಿಯೇ ರಾಜೇಶ್​ ವಿರುದ್ಧ ದೂರು ನೀಡಿರುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: 

ಮೈಸೂರಿನ 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 50 ಸಾವಿರ ದಂಡ