ಕಾಲಿವುಡ್ನಲ್ಲಿ ದಳಪತಿ ವಿಜಯ್ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋಗಳಲ್ಲಿ ಒಬ್ಬರು. ಅವರು ಈ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಕೊಡುವುದಕ್ಕೂ ಒಂದು ಕಾರಣವಿದೆ. ಏಕೆಂದರೆ ಅವರು ಇಷ್ಟು ದೊಡ್ಡ ಮೊತ್ತ ಸಂಭಾವನೆ ಪಡೆದರೂ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡುತ್ತದೆ ಎನ್ನುವ ನಂಬಿಕೆ ನಿರ್ಮಾಪಕರದ್ದು. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ‘Thalapathy 69’ ಚಿತ್ರ ಈಗಲೇ ಬಿಸ್ನೆಸ್ ಆರಂಭಿಸಿದೆ.
ದಳಪತಿ ವಿಜಯ್ ನಟನೆಯ 69ನೇ ಚಿತ್ರವನ್ನು ಕನ್ನಡದ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕಾಗಿ ಅವರು 275 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಬಜೆಟ್ ಕೂಡ ಹೆಚ್ಚಿದೆ. ಸಿನಿಮಾ ಶೂಟಿಂಗ್ಗೂ ಮೊದಲೇ ಚಿತ್ರ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ.
ಎಚ್. ವಿನೋದ್ ಅವರು ದಳಪತಿ ವಿಜಯ್ ಅವರ ಕೊನೆಯ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಬಾಲಕೃಷ್ಣ ಅವರ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಚಿತ್ರದ ವಿದೇಶಿ ಹಂಚಿಕೆ ಹಕ್ಕು ಬರೋಬ್ಬರಿ 78 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎನ್ನಲಾಗಿದೆ. ‘ಬಿಗ್ ಟಿಕೆಟ್ ಎಂಟರ್ಟೇನರ್’ ಚಿತ್ರದ ಹಂಚಿಕೆ ಹಕ್ಕನ್ನು ಖರೀದಿ ಮಾಡಿದೆಯಂತೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಎಚ್. ವಿನೋದ್ ನಿರ್ದೇಶನದ, ವಿಜಯ್ ನಟನೆಯ ಈ ಸಿನಿಮಾ 2025ರ ಅಕ್ಟೋಬರ್ನಲ್ಲಿ ರಿಲೀಸ್ ಆಗಲಿದೆ. ಬಾಬಿ ಡಿಯೋಲ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಕಾಶ್ ರಾಜ್, ಪ್ರಿಯಾಮಣಿ, ನರೇನ್, ಗೌತಮ್ ವಾಸುದೇವ್ ಮೆನನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಮಿತಾ ಬೈಜು ಅವರು ವಿಜಯ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಹೆಗ್ಡೆ ಚಿತ್ರದಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದಾರೆ. ಅನಿರುದ್ಧ್ ರಿಚಂದರ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಇದು ರಾಕಿಯ ಕೆಜಿಎಫ್’; ದಳಪತಿ ವಿಜಯ್ ರ್ಯಾಲಿಯನ್ನು ಯಶ್ ಚಿತ್ರಕ್ಕೆ ಹೋಲಿಸಿದ ಫ್ಯಾನ್ಸ್
‘Thalapathy69’ ಚಿತ್ರದ ಬಳಿಕ ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಇತ್ತೀಚೆಗೆ ರಾಜಕೀಯ ರ್ಯಾಲಿ ಕೂಡ ನಡೆಸಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.