AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ರಾಜ್ಯಗಳಲ್ಲಿ ‘ಟಾಕ್ಸಿಕ್’ ಬುಕಿಂಗ್ ಜೋರು, ಭರ್ಜರಿ ಓಪನಿಂಗ್ ಖಾತ್ರಿ

Toxic movie advance booking: ಪ್ರಭಾಸ್ ಅಂಥ ಪ್ರಭಾಸ್ ಅವರ ಸಿನಿಮಾಗಳೇ ಹಿಂದಿ ರಾಜ್ಯಗಳಲ್ಲಿ ಇತ್ತೀಚೆಗೆ ಮಕಾಡೆ ಮಲಗಿವೆ. ಇದೀಗ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸಹ ಅದ್ಧೂರಿಯಾಗಿ ಹಿಂದಿ ರಾಜ್ಯಗಳಲ್ಲಿ ಬಿಡುಗಡೆ ಆಗಲಿಕ್ಕಿದೆ. ಸಿನಿಮಾದ ಮುಂಗಡ ಬುಕಿಂಗ್ ಆರಂಭಿಸಿದಾಗ ಮೊದಲ ದಿನ ತುಸು ನೀರಸ ಪ್ರತಿಕ್ರಿಯೆ ಇತ್ತು. ಆದರೆ ಈಗ ಟಿಕೆಟ್ ಬುಕಿಂಗ್ ಚುರುಕು ಪಡೆದಿದ್ದು, ದೊಡ್ಡ ಓಪನಿಂಗ್​​ನ ನಿರೀಕ್ಷೆ ಹುಟ್ಟಿಸಿದೆ.

ಹಿಂದಿ ರಾಜ್ಯಗಳಲ್ಲಿ ‘ಟಾಕ್ಸಿಕ್’ ಬುಕಿಂಗ್ ಜೋರು, ಭರ್ಜರಿ ಓಪನಿಂಗ್ ಖಾತ್ರಿ
Yash Movie
ಮಂಜುನಾಥ ಸಿ.
|

Updated on: Aug 25, 2026 | 11:12 AM

Share

ದಕ್ಷಿಣ ಭಾರತದ ಸಿನಿಮಾಗಳು (Cinema) ಹಿಂದಿ ಭಾಷಿಕ ರಾಜ್ಯಗಳಲ್ಲಿ ಇತ್ತೀಚೆಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಹಾಗೆಂದು ದಕ್ಷಿಣದಲ್ಲಿ ಬಿಡುಗಡೆ ಆದ ಎಲ್ಲ ಪ್ಯಾನ್ ಇಂಡಿಯಾ ಸಿನಿಮಾಗಳು ಅಲ್ಲಿ ಹಿಟ್ ಆಗುವುದಿಲ್ಲ. ಪ್ರಭಾಸ್ ಅಂಥ ಪ್ರಭಾಸ್ ಅವರ ಸಿನಿಮಾಗಳೇ ಹಿಂದಿ ರಾಜ್ಯಗಳಲ್ಲಿ ಇತ್ತೀಚೆಗೆ ಮಕಾಡೆ ಮಲಗಿವೆ. ಇದೀಗ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸಹ ಅದ್ಧೂರಿಯಾಗಿ ಹಿಂದಿ ರಾಜ್ಯಗಳಲ್ಲಿ ಬಿಡುಗಡೆ ಆಗಲಿಕ್ಕಿದೆ. ಸಿನಿಮಾದ ಮುಂಗಡ ಬುಕಿಂಗ್ ಆರಂಭಿಸಿದಾಗ ಮೊದಲ ದಿನ ತುಸು ನೀರಸ ಪ್ರತಿಕ್ರಿಯೆ ಇತ್ತು. ಆದರೆ ಈಗ ಟಿಕೆಟ್ ಬುಕಿಂಗ್ ಚುರುಕು ಪಡೆದಿದ್ದು, ದೊಡ್ಡ ಓಪನಿಂಗ್​​ನ ನಿರೀಕ್ಷೆ ಹುಟ್ಟಿಸಿದೆ.

ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲಿ ಅಥವಾ ಸಿನಿಮಾದ ಹಿಂದಿ ಆವೃತ್ತಿ ಮಾತ್ರಕ್ಕೆ ದೊಡ್ಡ ಸಂಖ್ಯೆಯ ಮುಂಗಡ ಬುಕಿಂಗ್ ಆಗಿದೆ. ಕೇವಲ ನ್ಯಾಷನಲ್ ಮಲ್ಟಿಪ್ಲೆಕ್ಸ್ ಚೈನ್ (ಪಿವಿಆರ್, ಐನಾಕ್ಸ್ ಮತ್ತು ಸಿನೆಪೊಲೀಸ್) ಗಳ ಲೆಕ್ಕಾಚಾರದ ಪ್ರಕಾರ ಸಿನಿಮಾ ಬಿಡುಗಡೆಗೆ ಇನ್ನೂ ಒಂದೂವರೆ ದಿನ ಇದ್ದಾಗಲೇ 1.37 ಲಕ್ಷ ಟಿಕೆಟ್​​ಗಳು ಮುಂಗಡವಾಗಿ ಮಾರಾಟವಾಗಿವೆ. ದಿನದಾಂತ್ಯಕ್ಕೆ, ಅಂದರೆ ಆಗಸ್ಟ್ 25ರ ಅಂತ್ಯದ ವೇಳೆಗೆ ಈ ಸಂಖ್ಯೆ 2 ಲಕ್ಷ ದಾಟಲಿದೆ. ನೆನಪಿರಲಿ ಇದು ಕೇವಲ ನ್ಯಾಷನಲ್ ಮಲ್ಟಿಪ್ಲೆಕ್ಸ್​ ಚೈನ್​​ನ ಲೆಕ್ಕಾಚಾರ. ಸಿಂಗಲ್ ಸ್ಕ್ರೀನ್, ಖಾಸಗಿ ಮಲ್ಟಿಪ್ಲೆಕ್ಸ್​​ಗಳ ಸಂಖ್ಯೆ ಇದರಲ್ಲಿ ಸೇರಿಲ್ಲ.

ಕೆಲ ದಿನಗಳ ಹಿಂದೆ ಸಿನಿಮಾದ ಮುಂಗಡ ಬುಕಿಂಗ್ ಓಪನ್ ಆದಾಗ, ಮುಂಬೈ, ಪುಣೆಗಳಲ್ಲಿ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ ಆದರೆ ದಿನಗಳೆದಂತೆ ಪ್ರೇಕ್ಷಕರು ‘ಟಾಕ್ಸಿಕ್’ ಸಿನಿಮಾ ಬಗ್ಗೆ ಆಸಕ್ತಿ ತೋರುತ್ತಿದ್ದು, ಇದೀಗ ಟಿಕೆಟ್ ಬುಕಿಂಗ್ ವೇಗ ಪಡೆದುಕೊಂಡಿದೆ. ದಕ್ಷಿಣ ಭಾರತದಲ್ಲಂತೂ ‘ಟಾಕ್ಸಿಕ್’ ಸಿನಿಮಾದ ಮುಂಗಡ ಬುಕಿಂಗ್ ಬಲು ಜೋರಾಗಿ ನಡೆಯುತ್ತಿದ್ದು, ಹಲವು ಚಿತ್ರಮಂದಿರಗಳಲ್ಲಿ ಬುಧವಾರದಿಂದ (ಆಗಸ್ಟ್ 26) ಮುಂದಿನ ಸೋಮವಾರದ ವರೆಗೆ ಮುಂಗಡ ಬುಕಿಂಗ್ ಆಗಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್

ಯಶ್ ಅಭಿನಯದ ಈ ಚಿತ್ರವು ವ್ಯಾಪಾರ ವಲಯದ ನಿರೀಕ್ಷೆಗಳನ್ನು ಮೀರಿ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಆರಂಭಿಕ ಗಳಿಕೆಯನ್ನು ದಾಖಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಬಿಡುಗಡೆಯ ದಿನದಂದು ಸ್ಪಾಟ್ ಬುಕಿಂಗ್ (ನೇರ ಟಿಕೆಟ್ ಖರೀದಿ) ಹೇಗಿರಲಿದೆ ಎಂಬುದರ ಮೇಲೆ ಹೆಚ್ಚಿನ ವಿಷಯಗಳು ಅವಲಂಬಿತವಾಗಿವೆ. ಚಿತ್ರವು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಅದರ ಟಿಕೆಟ್ ಮಾರಾಟದಲ್ಲಿ ತಕ್ಷಣವೇ ಭಾರಿ ಏರಿಕೆ ಕಂಡುಬರಲಿದೆ.

ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಯಶ್ ಅವರ ಮಾನ್ಸ್‌ಟರ್ ಮೈಂಡ್ ಕ್ರೀಯೇಷನ್ಸ್ ಲಾಂಛನದಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಿದೆ. ಗೀತೂ ಮೋಹನ್​​ದಾಸ್ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು
ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು