AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿಷಾ ರಾಜಕೀಯ ಪ್ರವೇಶ ಫಿಕ್ಸ್? ಕೊಯಮತ್ತೂರು ಭೇಟಿ ವೇಳೆ ಜನಸಾಗರ

ಖ್ಯಾತ ನಟಿ ತ್ರಿಷಾ ಅವರ ಕೊಯಮತ್ತೂರು ಭೇಟಿ ತಮಿಳುನಾಡಿನಲ್ಲಿ ರಾಜಕೀಯ ಕುತೂಹಲ ಮೂಡಿಸಿದೆ. ಮೊಬೈಲ್ ಶೋರೂಮ್ ಉದ್ಘಾಟನೆಗೆ ಬಂದಿದ್ದ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಟಿವಿಕೆ ಬೆಂಬಲಿಗರು ನಟಿಯ ರಾಜಕೀಯ ಪ್ರವೇಶವನ್ನು ಬಯಸುತ್ತಿದ್ದಾರೆ. ರಾಜಕೀಯ ಪ್ರಶ್ನೆಗೆ ತ್ರಿಷಾ ಮುಗುಳುನಕ್ಕಿದ್ದು, ಅವರ ಮುಂದಿನ ಹೆಜ್ಜೆಯ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ.

ತ್ರಿಷಾ ರಾಜಕೀಯ ಪ್ರವೇಶ ಫಿಕ್ಸ್? ಕೊಯಮತ್ತೂರು ಭೇಟಿ ವೇಳೆ ಜನಸಾಗರ
ತ್ರಿಷಾ
ರಾಜೇಶ್ ದುಗ್ಗುಮನೆ
|

Updated on:Oct 26, 2026 | 12:54 PM

Share

ಮುಖ್ಯಾಂಶಗಳು

  • ಜನಸಾಗರದ ನಡುವೆ ತ್ರಿಷಾ ರೋಡ್ ಶೋ
  • ರಾಜಕೀಯ ಪ್ರಶ್ನೆಗೆ ನಟಿಯ ಮೌನ ಮುಗುಳುನಗು
  • ಟಿವಿಕೆ ಬೆಂಬಲಿಗರ ಆಸೆ ಈಡೇರುತ್ತಾ?

ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ಕೊಯಮತ್ತೂರು ಭೇಟಿ ಈಗ ತಮಿಳುನಾಡಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮೊಬೈಲ್ ಶೋರೂಮ್ ಉದ್ಘಾಟನೆಗೆ ಬಂದಿದ್ದ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಈ ಜನಸ್ತೋಮ ನಟಿಯ ಜನಪ್ರಿಯತೆಗೆ ಸಾಕ್ಷಿಯಾಯಿತು. ಈ ಘಟನೆಯು ಅವರ ರಾಜಕೀಯ ಪ್ರವೇಶದ ವದಂತಿಗೆ ಮತ್ತೆ ರೆಕ್ಕೆಪುಕ್ಕ ನೀಡಿದೆ.

ಕಾರ್ಯಕ್ರಮಕ್ಕೆ ಆಗಮಿಸಿದ ತ್ರಿಷಾ ತೆರೆದ ವಾಹನದಲ್ಲಿ ನಿಂತು ಜನರಿಗೆ ಕೈಬೀಸಿದರು. ಅವರನ್ನು ನೋಡಲು ಹರಿದುಬಂದ ಜನಸಾಗರ ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಈ ರೋಡ್ ಶೋ ಸಿನಿಮಾ ರಂಗವನ್ನು ಮೀರಿ ರಾಜಕೀಯ ವಲಯದಲ್ಲೂ ಸದ್ದು ಮಾಡುತ್ತಿದೆ. ದಳಪತಿ ವಿಜಯ್ ಹಾಗೂ ‘ಟಿವಿಕೆ’ ಪಕ್ಷದ ಅಭಿಮಾನಿಗಳು ತ್ರಿಷಾ ರಾಜಕೀಯಕ್ಕೆ ಬರಲಿ ಎಂದು ಬಹಿರಂಗವಾಗಿ ಬಯಸುತ್ತಿದ್ದಾರೆ.

ಕಾರ್ಯಕ್ರಮ ಮುಗಿದ ನಂತರ ಸುದ್ದಿಗಾರರು ತ್ರಿಷಾ ಅವರನ್ನು ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ತ್ರಿಷಾ ಯಾವುದೇ ನೇರ ಉತ್ತರ ನೀಡಲಿಲ್ಲ. ಕೇವಲ ಮುಗುಳುನಗುತ್ತಾ ಅಲ್ಲಿಂದ ಮುಂದೆ ಸಾಗಿದರು.

ಈ ಭೇಟಿಯು ಯಾವುದೇ ಅಧಿಕೃತ ರಾಜಕೀಯ ಕಾರ್ಯಕ್ರಮವಾಗಿರಲಿಲ್ಲ. ನಟಿ ಕೂಡ ಯಾವುದೇ ರಾಜಕೀಯ ನಿರ್ಧಾರವನ್ನು ಇದುವರೆಗೆ ಪ್ರಕಟಿಸಿಲ್ಲ. ಆದಾಗ್ಯೂ ಕೊಯಮತ್ತೂರಿನಲ್ಲಿ ನೆರೆದಿದ್ದ ಬೃಹತ್ ಜನಸ್ತೋಮ ಅವರ ಅಭಿಮಾನಿಗಳಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ. ತ್ರಿಷಾ ಶೀಘ್ರದಲ್ಲೇ ಬೆಳ್ಳಿಪರದೆಯಿಂದ ರಾಜಕೀಯ ರಂಗಕ್ಕೆ ಕಾಲಿಡಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಆದರೆ ಜನಸ್ತೋಮ ನೋಡಿದ ಬಳಿಕ ತ್ರಿಷಾಗೆ ಸಿಗುತ್ತಿರುವ ಬೆಂಬಲ ಎಂಥದ್ದು ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ‘ಧೈರ್ಯವಿದ್ದರೆ ವಿಜಯ್ ಆಡಳಿತದ ಬಗ್ಗೆ ಮಾತನಾಡಿ; ತ್ರಿಷಾ ಟ್ರೋಲ್‌ಗೆ ಸಂಜನಾ ಗಲ್ರಾನಿ ರಿಯಾಕ್ಷನ್

ತ್ರಿಷಾ ಅವರ ಮುಂದಿನ ಹೆಜ್ಜೆ ಏನಿರಲಿದೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ. ಚಿತ್ರರಂಗದ ಯಶಸ್ಸಿನ ಬಳಿಕ ಅವರು ರಾಜಕೀಯಕ್ಕೆ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಅಭಿಮಾನಿಗಳ ಬೆಂಬಲ ಮತ್ತು ವದಂತಿಗಳು ಸದ್ಯಕ್ಕೆ ಶಮನವಾಗುವಂತೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:51 pm, Mon, 26 October 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ