ಖ್ಯಾತ ನಿರ್ದೇಶಕನ ಜೊತೆ ಭಿನ್ನಾಭಿಪ್ರಾಯ; ಸಿನಿಮಾದಿಂದ ಹೊರಬಂದ ಅನಿರುದ್ಧ್ ರವಿಚಂದರ್

ತಮಿಳು ನಿರ್ದೇಶಕ ವೆಟ್ರಿಮಾರನ್ ಹಾಗೂ ಸಿಂಬು ಕಾಂಬಿನೇಷನ್‌ನ 'ಅರಸನ್' ಸಿನಿಮಾದಿಂದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹೊರಬಂದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಕ್ರಿಯೇಟಿವ್ ಭಿನ್ನಾಭಿಪ್ರಾಯದ ಕಾರಣದಿಂದ ಅನಿರುದ್ಧ್ ಜಾಗಕ್ಕೆ ಯುವ ಪ್ರತಿಭೆ ಲಿಡಿಯನ್ ನಾದಸ್ವರಂ ಅವರನ್ನು ಕರೆತರಲು ಚಿತ್ರತಂಡ ಮುಂದಾಗಿದೆ ಎನ್ನಲಾಗಿದೆ.

ಖ್ಯಾತ ನಿರ್ದೇಶಕನ ಜೊತೆ ಭಿನ್ನಾಭಿಪ್ರಾಯ; ಸಿನಿಮಾದಿಂದ ಹೊರಬಂದ ಅನಿರುದ್ಧ್ ರವಿಚಂದರ್
ಅನಿರುದ್ಧ್ ಹಾಗೂ ಟೀಂ
Edited By:

Updated on: Nov 17, 2026 | 7:47 AM

ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ವೆಟ್ರಿಮಾರನ್ ಅವರ ಮುಂದಿನ ಸಿನಿಮಾ ‘ಅರಸನ್’ ಮೇಲೆ ಭಾರಿ ನಿರೀಕ್ಷೆ ಇದೆ. ಸಿಂಬು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಸಂಗೀತ ವಿಭಾಗದಲ್ಲಿ ದೊಡ್ಡ ಬದಲಾವಣೆಯಾಗಿದೆ ಎಂಬ ಸುದ್ದಿ ಈಗ ವೈರಲ್ ಆಗುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಅವರ ಜಾಗಕ್ಕೆ ಯುವ ಪ್ರತಿಭೆ ಲಿಡಿಯನ್ ನಾದಸ್ವರಂ ಎಂಟ್ರಿ ಕೊಡಲಿದ್ದಾರೆ ಎಂಬ ಗುಸುಗುಸು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.

ವೆಟ್ರಿಮಾರನ್ ಮತ್ತು ಅನಿರುದ್ಧ್ ಮೊದಲ ಬಾರಿಗೆ ‘ಅರಸನ್’ ಚಿತ್ರಕ್ಕಾಗಿ ಒಂದಾಗಿದ್ದರು. ಆರಂಭದಲ್ಲಿ ಬಿಡುಗಡೆಯಾಗಿದ್ದ ಟೀಸರ್‌ಗೆ ಅನಿರುದ್ಧ್ ನೀಡಿದ್ದ ಹಿನ್ನೆಲೆ ಸಂಗೀತ ಎಲ್ಲರ ಮೆಚ್ಚುಗೆ ಗಳಿಸಿತ್ತು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಕ್ರಿಯೇಟಿವ್ ಭಿನ್ನಾಭಿಪ್ರಾಯಗಳು ಮೂಡಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರೂ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಟೀಸರ್‌ನಲ್ಲೂ ಬೇರೆಯವರ ಸಂಗೀತ ಬಳಸಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ.

Loading...

ಅನಿರುದ್ಧ್ ಚಿತ್ರದಿಂದ ಹೊರಬಂದ ಬೆನ್ನಲ್ಲೇ ವೆಟ್ರಿಮಾರನ್ ಅವರು ಲಿಡಿಯನ್ ನಾದಸ್ವರಂ ಅವರನ್ನು ಕರೆತರಲು ಮುಂದಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ಲಿಡಿಯನ್ ಅವರನ್ನು ಒಬ್ಬ ಅದ್ಭುತ ಸಂಗೀತ ನಿರ್ದೇಶಕನನ್ನಾಗಿ ಬೆಳೆಸುವ ಯೋಜನೆ ವೆಟ್ರಿಮಾರನ್ ಅವರಿಗಿದೆ. ಈಗಾಗಲೇ ನಿರ್ದೇಶಕ ಬಾಲಾ ಅವರ ಮುಂದಿನ ಸಿನಿಮಾಗೆ ವೆಟ್ರಿಮಾರನ್ ಬಂಡವಾಳ ಹೂಡುತ್ತಿದ್ದಾರೆ. ಆ ಚಿತ್ರಕ್ಕೂ ಲಿಡಿಯನ್ ಅವರೇ ಸಂಗೀತ ನೀಡುತ್ತಿದ್ದು, ಈಗ ‘ಅರಸನ್’ ಜವಾಬ್ದಾರಿಯನ್ನೂ ಅವರಿಗೇ ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ವಿವಾಹದ ಬಳಿಕ ಚೆನ್ನೈಗೆ ಮರಳಿದ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್; ನ.21ಕ್ಕೆ ಆರತಕ್ಷತೆ

ಸಾಮಾನ್ಯವಾಗಿ ಅನಿರುದ್ಧ್ ತಮ್ಮ ಬ್ಯುಸಿ ಶೆಡ್ಯೂಲ್ ಕಾರಣದಿಂದ ಕೆಲವು ಪ್ರಾಜೆಕ್ಟ್‌ಗಳನ್ನು ಕೈಬಿಡುವುದುಂಟು. ಆದರೆ ವೆಟ್ರಿಮಾರನ್ ಅಂತಹ ದಿಗ್ಗಜ ನಿರ್ದೇಶಕರ ಜೊತೆ ಭಿನ್ನಾಭಿಪ್ರಾಯ ಮಾಡಿಕೊಂಡು ಹೊರಬಂದಿರುವುದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಸದ್ಯ ‘ಅರಸನ್’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಂಗೀತ ನಿರ್ದೇಶಕರ ಬದಲಾವಣೆ ಕುರಿತು ಚಿತ್ರತಂಡದಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಅನಿರುದ್ಧ್ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾವ್ಯಾ ಮಾರನ್ ಜೊತೆ ಅವರ ಮದುವೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us