ಬದಲಾಯಿತು ವಿಜಯ್​ ದೇವರಕೊಂಡ ಹೇರ್​ಸ್ಟೈಲ್​; ವೈರಲ್​ ಆಗುತ್ತಿದೆ ಹೊಸ ಲುಕ್

| Updated By: ರಾಜೇಶ್ ದುಗ್ಗುಮನೆ

Updated on: Feb 28, 2022 | 3:00 PM

‘ಲೈಗರ್​’ನಲ್ಲಿ ಬಾಕ್ಸರ್​ ಆಗಿ ವಿಜಯ್​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್​ಗಾಗಿ ವಿಜಯ್​ ಅವರು ಮುಂಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಉದ್ದ ಕೂದಲು ಎಲ್ಲರ ಗಮನ ಸೆಳೆದಿತ್ತು.

ಬದಲಾಯಿತು ವಿಜಯ್​ ದೇವರಕೊಂಡ ಹೇರ್​ಸ್ಟೈಲ್​; ವೈರಲ್​ ಆಗುತ್ತಿದೆ ಹೊಸ ಲುಕ್
ವಿಜಯ್ ದೇವರಕೊಂಡ
Follow us on

ನಟ ವಿಜಯ್ ದೇವರಕೊಂಡ (Vijay Devarakonda) ಟಾಲಿವುಡ್​ನ ಹ್ಯಾಂಡ್ಸಮ್​ ಹೀರೋಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರು ತಮ್ಮ ಲುಕ್​ನಿಂದ ಹಲವರಿಗೆ ಇಷ್ಟವಾಗಿದ್ದಾರೆ. ವಿಜಯ್​ ಅವರನ್ನು ಯುವತಿಯರು ಹೆಚ್ಚಾಗಿ ಫಾಲೋ ಮಾಡುತ್ತಾರೆ. ‘ಅರ್ಜುನ್​ ರೆಡ್ಡಿ’ ಸಿನಿಮಾದಲ್ಲಿ (Arjun Reddy) ವಿಜಯ್​ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದರು. ಅವರ ಗಡ್ಡ ಬಿಟ್ಟು ಕಾಣಿಸಿಕೊಂಡಿದ್ದ ಲುಕ್​ ಎಲ್ಲರಿಗೂ ಇಷ್ಟವಾಗಿತ್ತು. ಅದಾದ ಬಳಿಕ ಸಿನಿಮಾಗಳಿಗೆ ತಕ್ಕಂತೆ ಕೇಶ ವಿನ್ಯಾಸ ಮಾಡಿಕೊಂಡಿದ್ದರು ವಿಜಯ್​. ಇತ್ತೀಚೆಗೆ ಅವರು ಉದ್ದ ಕೂದಲ ಬಿಟ್ಟು ಗಮನ ಸೆಳೆದಿದ್ದರು. ಆದರೆ, ಇದಕ್ಕೆ ಈಗ ದೇವರಕೊಂಡ ಕತ್ತರಿ ಹಾಕಿದ್ದಾರೆ. ಅವರ ಹೊಸ ಲುಕ್​ ವೈರಲ್​ ಆಗುತ್ತಿದೆ.

ವಿಜಯ್ ಅವರು ‘ಲೈಗರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ಲೈಗರ್​’ನಲ್ಲಿ ಬಾಕ್ಸರ್​ ಆಗಿ ವಿಜಯ್​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್​ಗಾಗಿ ವಿಜಯ್​ ಅವರು ಮುಂಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಉದ್ದ ಕೂದಲು ಎಲ್ಲರ ಗಮನ ಸೆಳೆದಿತ್ತು. ಆದರೆ, ಈಗ ಅವರು ಇದಕ್ಕೆ ಕತ್ತರಿ ಹಾಕಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ವಾಲಿಬಾಲ್​ ಕಾರ್ಯಕ್ರಮಕ್ಕೆ ವಿಜಯ್​ ಅವರು ಆಗಮಿಸಿದ್ದರು. ಈ ವೇಳೆ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಅವರ ಶಾರ್ಟ್​ ಹೇರ್​ ಗಮನ ಸೆಳೆದಿದೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅವರ ಹೊಸ ಲುಕ್​ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

ನಟ ವಿಜಯ್​ ದೇವರಕೊಂಡ ‘ಅರ್ಜುನ್​ ರೆಡ್ಡಿ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು. ಅವರ ನಟನೆಯ ‘ಗೀತ ಗೋವಿಂದಂ’ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ಆ ಬಳಿಕ ಅವರ ಹಲವು ಸಿನಿಮಾಗಳು ತೆರೆಗೆ ಬಂದವು. ಈಗ ಅವರು ‘ಲೈಗರ್​’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ರೆಡಿ ಆಗಿದ್ದಾರೆ. ಈ ಚಿತ್ರದ ಮೂಲಕ ಅವರು ಬಾಲಿವುಡ್​ಗೂ ಕಾಲಿಡುತ್ತಿದ್ದಾರೆ. ವಿಜಯ್​ ಹಿಂದಿ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲೇ ಅದ್ಭುತ ಸ್ವಾಗತ ಸಿಕ್ಕಿತ್ತು. ಇತ್ತೀಚೆಗೆ ರಿಲೀಸ್​ ಆದ ‘ಲೈಗರ್​’ ಚಿತ್ರದ ಗ್ಲಿಂಪ್ಸ್​ ವಿಡಿಯೋ ಭಾರೀ ಮೆಚ್ಚುಗೆ ಗಳಿಸಿಕೊಂಡಿತ್ತು. ಈ ಸಿನಿಮಾವನ್ನು ಪುರಿ ಜಗನ್ನಾಥ್​, ಕರಣ್​ ಜೋಹರ್​, ಚಾರ್ಮಿ ಕೌರ್​, ಅಪೂರ್ವ ಮೆಹ್ತಾ, ಹೀರೂ ಯಶ್​ ಜೋಹರ್​ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಈ ಸಿನಿಮಾದ ಬಜೆಟ್​ 125 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕನ್ನಡದಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ.

 ಇದನ್ನೂ ಓದಿ: ರಶ್ಮಿಕಾ ಜತೆಗಿನ ಮದುವೆಯ ಗಾಸಿಪ್​ಗೆ ಕೊನೆಗೂ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ; ನಟ ಹೇಳಿದ್ದೇನು? 

ರಶ್ಮಿಕಾ ಜತೆಗಿನ ಮದುವೆಯ ಗಾಸಿಪ್​ಗೆ ಕೊನೆಗೂ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ; ನಟ ಹೇಳಿದ್ದೇನು?