AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chitradurga Tradition: ಕೋಟೆನಾಡು ದುರ್ಗದಲ್ಲಿ ಆ ಅಕ್ಕ-ತಂಗಿಯರಿಬ್ಬರೂ ವರ್ಷಕ್ಕೊಮ್ಮೆ ಮಾತ್ರ ಭೇಟಿ ಆಗುತ್ತಾರೆ! ಏನು ಅದರ ವಿಶೇಷ? ಇದನ್ನು ಓದಿ

Akka-Tangi Bheti: ಅಕ್ಕ-ತಂಗಿ ಭೇಟಿ ಉತ್ಸವ ದುರ್ಗದ ಪರಂಪರೆಯ ಉತ್ಸವವಾಗಿದೆ. ದುರ್ಗದ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ತವರಿಗೆ ಬಂದು ಅಕ್ಕ-ತಂಗಿ ಭೇಟಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುವುದು ವಿಶೇಷ.

Chitradurga Tradition: ಕೋಟೆನಾಡು ದುರ್ಗದಲ್ಲಿ ಆ ಅಕ್ಕ-ತಂಗಿಯರಿಬ್ಬರೂ ವರ್ಷಕ್ಕೊಮ್ಮೆ ಮಾತ್ರ ಭೇಟಿ ಆಗುತ್ತಾರೆ! ಏನು ಅದರ ವಿಶೇಷ? ಇದನ್ನು ಓದಿ
ಕೋಟೆನಾಡು ದುರ್ಗದಲ್ಲಿ ಅಕ್ಕ-ತಂಗಿಯರ ಸಮಾಗಮ, ಸಂಮಭ್ರಮಿಸಿದ ಜನತೆ
ಸಾಧು ಶ್ರೀನಾಥ್​
|

Updated on:Apr 12, 2023 | 2:13 PM

Share

ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು ಮುಖ ತಿರುಗಿಸುವ ಅಕ್ಕ-ತಂಗಿಯರು ವರ್ಷಕ್ಕೊಮ್ಮೆ ಮಾತ್ರ ಭೇಟಿ ಆಗುವ ಸಂಪ್ರದಾಯವಿದೆ (Akka-Tangi Bheti). ಆ ಸಹೋದರಿಯರ (Sisters) ಭೇಟಿಗೆ ಸಾವಿರಾರು ಜನ ಸಾಕ್ಷಿಆಗುತ್ತಾರೆ ಎಂಬುದು ಮತ್ತೊಂದು ಸೋಜಿಗ. ಹಾಗಾದ್ರೆ, ಸಾಂಪ್ರದಾಯಿಕ ಅಕ್ಕ-ತಂಗಿ ಭೇಟಿಯ ಉತ್ಸವ ಹೇಗಿರುತ್ತೆ ಗೊತ್ತಾ. ತಿಳಿಯೋಣ ಬನ್ನಿ. ಸಿಂಗಾರಗೊಂಡ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ. ಜನ ಜಾತ್ರೆಯ ನಡುವೆ ರಾಜಬೀದಿಯಲ್ಲಿ ಅಕ್ಕ-ತಂಗಿಯರ ದಿವ್ಯ ಸಮಾಗಮ (Homecoming). ಸಾಂಪ್ರದಾಯಿಕ ಅಪೂರ್ವ ಸಂಗಮ ಕಣ್ತುಂಬಿಕೊಂಡ ಭಕ್ತರಲ್ಲಿ ಪುನೀತ ಭಾವ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ರಾಜಬೀದಿಯಲ್ಲಿ. ಹೌದು, ರಂಗಯ್ಯನ ಬಾಗಿಲು ಕಡೆಯಿಂದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿ ವಯ್ಯಾರದಿ ಆಗಮಿಸಿದರೆ, ಇತ್ತ ಉಚ್ಚಂಗಿ ಎಲ್ಲಮ್ಮ ದೇಗುಲದ ಕಡೆಯಿಂದ ಬಂಗಾರಿ ಬರಗೇರಮ್ಮ ದೇವಿ ಬಿಂಕದಿ ಆಗಮಿಸಿದಳು! (According janapada tale two sisters in chitradurga meet only annually)

ನಗರ ದೇವತೆಗಳ ಭಕ್ತರ ಭಕ್ತಿಯ ಘೋಷಣೆಗಳ ನಡುವೆ ಅಕ್ಕ-ತಂಗಿಯರ ಅಪೂರ್ವ ಸಂಗಮ ಜನಮನ ಸೂರೆಗೊಂಡಿತು. ಇನ್ನು ಈ ಅಕ್ಕ-ತಂಗಿ ಭೇಟಿ ಉತ್ಸವದ ಹಿನ್ನೆಲೆಯೇ ವಿಶೇಷವಾಗಿದೆ. ತಂಗಿ ತಿಪ್ಪಿನಘಟ್ಟಮ್ಮಗೆ 7 ಜನ ಮಕ್ಕಳಿರುತ್ತಾರೆ. ಆದ್ರೆ, ಅಕ್ಕ ಬರಗೇರಮ್ಮಗೆ ಮಕ್ಕಳಿಲ್ಲದ ಕಾರಣ ತಂಗಿಯ ಮಕ್ಕಳ ಮೇಲೆ ಅಪಾರ ಪ್ರೀತಿ ಇರುತ್ತದೆ. ಆದ್ರೆ, ಹೇಳಿಕೆಯ ಮಾತು ಕೇಳಿದ ತಿಪ್ಪಿನಘಟ್ಟಮ್ಮ ತನ್ನ ಮಕ್ಕಳು ಅಕ್ಕ ಬರಗೇರಮ್ಮಗೆ ಸಿಗದಂತೆ ಬಚ್ಚಿಡುತ್ತಾಳೆ. ಪ್ರೀತಿಯಿಂದ ಮಕ್ಕಳು ನೋಡಲು ಬಂದ ಬರಗೇರಮ್ಮ ಬಚ್ಚಿಟ್ಟಿದ್ದು ತಿಳಿದು ಕೆಂಡವಾಗುತ್ತಾಳೆ. ಕೋಪದಿಂದ ಮಕ್ಕಳೆಲ್ಲಾ ಕಲ್ಲಾಗಲಿ ಎಂದು ಶಾಪ ಹಾಕುತ್ತಾಳೆ. ಬಳಿಕ ದುರ್ಗದ ನವದುರ್ಗಿಯರು ಸೇರಿ ರಾಜಿ, ಸಂಧಾನ ಮಾಡಿದಾಗ ವರ್ಷಕ್ಕೊಮ್ಮೆ ಮಾತ್ರ ಅಕ್ಕ-ತಂಗಿ ಭೇಟಿ ಆಗಲು ಒಪ್ಪಿಕೊಳ್ಳುತ್ತಾರೆ. ಪರಿಣಾಮ ಈ ಭೇಟಿ ಉತ್ಸವ ಆಚರಣೆಗೆ ಬಂದಿದೆ ಎಂಬ ಪ್ರತೀತಿ ಇದೆ.

ಇನ್ನು ಈ ವಿಶೇಷ ಉತ್ಸವಕ್ಕೆ ಜಿಲ್ಲಾಡಳಿತ, ನಗರಸಭೆ, ಪೊಲೀಸ್ ಇಲಾಖೆ ಹಾಗೂ ದೇಗುಲ ಸಮಿತಿಗಳು ಈ ವರ್ಷ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದ್ದವು. ರಾಜಬೀದಿ ಉದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಸಾವಿರಾರು ಜನ ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು. ಅಕ್ಕ-ತಂಗಿ ಭೇಟಿ ಉತ್ಸವಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದರು. ಅಕ್ಕ-ತಂಗಿ ಭೇಟಿ ಉತ್ಸವ ದುರ್ಗದ ಪರಂಪರೆಯ ಉತ್ಸವವಾಗಿದೆ. ದುರ್ಗದ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ತವರಿಗೆ ಬಂದು ಅಕ್ಕ-ತಂಗಿ ಭೇಟಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುವುದು ವಿಶೇಷ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಅಕ್ಕ-ತಂಗಿಯರ ಅಪರೂಪದ ಸಂಗಮ ವೈಭವದಿಂದಲೇ ನಡೆಯಿತು. ಸಾವಿರಾರು ಜನ ಭಕ್ತರು ಅಪೂರ್ವ ಸಂಗಮ ಕಣ್ಣು ತುಂಬಿಕೊಂಡು ಪುನೀತ ಭಾವ ಅನುಭವಿಸಿದರು. ಸಾಂಪ್ರದಾಯಿಕ ಉತ್ಸವ ಮಾನವೀಯ ಸಂಬಂಧಗಳ ಬಗ್ಗೆ ವಿಶೇಷ ಸಂದೇಶ ರವಾನಿಸುವ ಮೂಲಕ ಜನರ ಮನ ಶುದ್ಧಗೊಳಿಸುವ ಮೂಲಕ ಸಾರ್ಥಕತೆ ಪಡೆಯಿತು.

ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:04 pm, Wed, 12 April 23

171 ರನ್​ ಗಳಿಸಿದ ಪಾಕಿಸ್ತಾನ್: 184 ರನ್​ ಚೇಸ್ ಮಾಡಿ ಗೆದ್ದ ವಿಂಡೀಸ್
171 ರನ್​ ಗಳಿಸಿದ ಪಾಕಿಸ್ತಾನ್: 184 ರನ್​ ಚೇಸ್ ಮಾಡಿ ಗೆದ್ದ ವಿಂಡೀಸ್
Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ