ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬ ಆಚರಿಸಲಾಗುತ್ತದೆ. ಹೋಳಿ ಹಬ್ಬವು ಸಂಭ್ರಮ ಸಂತಸ ಸಂತೋಷದಿಂದ ತುಂಬಿತುಳುಕುತ್ತದೆ. ಇದು ಪ್ರತಿ ವರ್ಷ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಬರುತ್ತದೆ (Holi 2024 -March 24 Sunday). ಹೋಳಿ ಕಾ ಪೂಜೆ ಮತ್ತು ಹೋಲಿ ಕಾ ದಹನ್ ನಂತರ ಹೋಳಿ ವರ್ಣರಂಜಿತ ಹಬ್ಬ ಬರುತ್ತದೆ. ಎಲ್ಲರೂ ವರ್ಷವಿಡೀ ಈ ಹಬ್ಬಕ್ಕಾಗಿ ಕಾಯುತ್ತಾರೆ. ಮಕ್ಕಳು ಮತ್ತು ಹಿರಿಯರು ಸಂತೋಷದಿಂದ ಹೋಳಿ ಆಚರಿಸುತ್ತಾರೆ.
ಬಿದಿರಿನ ಪುಟ್ಟಪುಟ್ಟ ಗಿಡ ಮನೆಗೆ ತನ್ನಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಲಿಯನ್ನು ಸುಡುವ ದಿನ ನೀವು ಬಿದಿರಿನ ಗಿಡವನ್ನು ಮನೆಗೆ ತರಬೇಕು. ಹೋಳಿಯಲ್ಲಿ ಬಿದಿರಿನ ಗಿಡವನ್ನು ಮನೆಗೆ ತರುವುದು ಮಂಗಳಕರವಾಗಿದೆ, ಇದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುತ್ತದೆ ಎಂಬುದು ನಂಬಿಕೆ.
ಮನೆಗೆ ಬೆಳ್ಳಿ ನಾಣ್ಯಗಳನ್ನು ತನ್ನಿ: ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ದೀಪಾವಳಿಯಂದು ಬೆಳ್ಳಿ ನಾಣ್ಯವನ್ನು ಮನೆಗೆ ತಂದಂತೆ.. ಹೋಳಿಯಲ್ಲಿ ಬೆಳ್ಳಿಯ ನಾಣ್ಯವನ್ನು ಮನೆಗೆ ತಂದರೆ ಹಣ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ ಎಂದು ಪರಿಗಣಿಸಲಾಗುತ್ತದೆ. ನಾಣ್ಯವನ್ನು ಕೆಲವು ಅಕ್ಕಿ ಕಾಳುಗಳೊಂದಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ಮನೆಯಲ್ಲಿ ಸುರಕ್ಷಿತವಾಗಿ ಇರಿಸಿ. ಹೀಗೆ ಮಾಡುವುದರಿಂದ ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಲೋಹದ ಆಮೆಯನ್ನು ಖರೀದಿಸಿ: ಹಿಂದೂ ನಂಬಿಕೆಯ ಪ್ರಕಾರ ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹೋಳಿಯಲ್ಲಿ ಕುಬೇರ ಯಂತ್ರ ಅಥವಾ ಶ್ರೀ ಯಂತ್ರದೊಂದಿಗೆ ಲೋಹದ ಆಮೆಯನ್ನು ಮನೆಗೆ ತನ್ನಿ. ಇದನ್ನು ಮನೆಗೆ ತಂದರೆ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ. ಇದರಿಂದ ಜೀವನದಲ್ಲಿ ಸುಖ, ಸಂಪತ್ತು ಸಿಗುತ್ತದೆ ಎಂಬ ನಂಬಿಕೆ ಇದೆ.
ಮಾವಿನ ಎಲೆ ತೋರಣ ಕಟ್ಟುವುದು: ನಂಬಿಕೆಯ ಪ್ರಕಾರ ಹೋಳಿ ಕಾ ಸಮಯದಲ್ಲಿ ಸುಟ್ಟ ಮರದ ಬೂದಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಆ ಬೂದಿಯನ್ನು ಮನೆಯಲ್ಲಿ ಚಿಮುಕಿಸುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಹೋಳಿ ಹಬ್ಬದಂದು ಮನೆಯ ಮುಖ್ಯ ಬಾಗಿಲಲ್ಲಿ ಮಾವಿನ ಎಲೆಗಳ ತೋರಣ ಕಟ್ಟುವುದರಿಂದ ಲಕ್ಷ್ಮಿ ದೇವಿಯನ್ನು ಸಮಾಧಾನಪಡಿಸಬಹುದು. ಇದರಿಂದ ಜೀವನದಲ್ಲಿ ಸುಖ, ಶಾಂತಿ, ಐಶ್ವರ್ಯ ಸಿಗುತ್ತದೆ ಎಂಬುದು ನಂಬಿಕೆ.
ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..