ಬದಲಾಗುತ್ತಿರುವ ಹವಾಮಾನ(Weather)ದಿಂದಾಗಿ ಬಹಳಷ್ಟು ಜನರಿಗೆ ಅನಾರೋಗ್ಯ ಸಮಸ್ಯೆ ಕಾಡುವುದು ಸಹಜ. ಶೀತ(Cold) ದಿಂದಾಗಿ ಬಹಳ ದಣಿದು ಬಿಡುತ್ತೇವೆ. ಈ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡಿ ಮಾತ್ರೆ ಸ್ವೀಕರಿಸುವುದು ಒಳ್ಳೆಯದೆ. ಆದರೆ ಶೀತದಿಂದ ಮುಕ್ತಿ ಪಡೆಯಲು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮನೆಯಲ್ಲಿಯೇ ತಯಾರಿಸಬಹುದಾದ ಮನೆ ಮದ್ದು(Home Remedies)ಗಳ ಕುರಿತು ಮಾಹಿತಿ ಇಲ್ಲಿದೆ. ಅರಿಶಿಣವನ್ನು ಹಾಲಿನೊಂದಿಗೆ ಬೆರೆಸಿ ನಿತ್ಯ ಸೇವಿಸುವುದರಿಂದ ಶೀತ ನೆಗಡಿಯಿಂದ ಮುಕ್ತಿ ಸಿಗುತ್ತದೆ. ಬೆಲ್ಲ ಕೂಡಾ ಶೀತ ನೆಗಡಿಗೆ ಉತ್ತಮ ರಾಮಬಾಣ. ಬಿಸಿ ನೀರಿಗೆ ಕರಿಮೆಣಸು ಜೀರಿಗೆ ಬೆಲ್ಲ ಸೇರಿಸಿ ಕುದಿಸಿ. ಅದನ್ನು ಕುಡಿಯುವುದರಿಂದ ನೆಗಡಿ ದೂರವಾಗುತ್ತದೆ.
ಚಹಾ ಮಾಡುವಾಗ ನೀರನ್ನು ಕುದಿಸಿ ಅದಕ್ಕೆ ಚಹಾ ಪುಡಿಯ ಜೊತೆ ಲವಂಗ, ದಾಲ್ಚಿನ್ನಿ, ಸುಂಠಿ, ಮತ್ತು ಕರಿಮೆಣಸು ಸೇರಿಸಿ ಕುದಿಸಿ ಕುಡಿಯುವುದರಿಂದಲೂ ಶೀತ ನಿವಾರಣೆಯಾಗುತ್ತದೆ. ಗಂಟಲು ನೋವಿನ ಸಮಸ್ಯೆಯು ವೈರಲ್ ಅಥವಾ ಬ್ಯಾಕ್ಟೀರಿಯಾದಿಂದ ಅಥವಾ ಇತರ ಹಲವು ಕಾರಣಗಳಿಂದ ಉದ್ಭವಿಸಬಹುದು. ತಜ್ಞರ ಪ್ರಕಾರ, ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಗಂಟಲಿನ ಸೋಂಕು ಅಪಾಯಕಾರಿಯಾಗಿದೆ. ಇದರಿಂದ ಅಧಿಕ ಜ್ವರವೂ ಬರಬಹುದು.
ಗಂಟಲು ನೋವು ಚಳಿಗಾಲದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಔಷಧಿಗಳ ಜೊತೆಗೆ ಕೆಲ ಮನೆಮದ್ದುಗಳನ್ನು ಕೂಡ ಟ್ರೈ ಮಾಡಬಹುದು. ಇದು ಗಂಟಲು ನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಶೀತ ಹಾಗೂ ಗಂಟಲು ನೋವು ದೂರ ಮಾಡುವುದು ಹೇಗೆ?
ತುಳಸಿ ಕಷಾಯ – ಗಂಟಲು ನೋವು ಅಥವಾ ಶೀತ ಸಮಸ್ಯೆಯಲ್ಲಿ ತುಳಸಿ ಚಹಾ ಅಥವಾ ಕಷಾಯ ಸೇವನೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಸೋಂಕನ್ನು ನಿವಾರಿಸುತ್ತದೆ.
ನಿಂಬೆ ಸಿರಪ್: ನಿಂಬೆ ಸಿರಪ್ ತಯಾರಿಸಲು ಪ್ಯಾನ್‌ನಲ್ಲಿ ಜೇನುತುಪ್ಪವನ್ನು ಹಾಕಿ ಅದರ ಸಾಂದ್ರತೆಯು ಕಡಿಮೆಯಾಗುವವರೆಗೆ ಬಿಸಿ ಮಾಡಿ. ಶೀತವನ್ನು ಕಡಿಮೆ ಮಾಡಲು ಸ್ವಲ್ಪ ನಿಂಬೆ ರಸ ಮತ್ತು ದಾಲ್ಚಿನ್ನಿ ಸೇರಿಸಿ ಕುಡಿಯಿರಿ. ಶೀತ ನಿವಾರಿಸಲು ಇದು ಉತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. ಸೂಚನೆ: ಮನೆಮದ್ದು ಮತ್ತು ಕೆಲವು ಸಾಮಾನ್ಯ ಸಲಹೆಗಳ ಆಧಾರದ ಮೇಲೆ ಇಲ್ಲಿ ನೀಡಿರುವ ಮಾಹಿತಿಯನ್ನು ನೀಡಲಾಗಿದೆ. ಇದನ್ನು ನುಸರಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ.
ಈರುಳ್ಳಿ ಹಾಗೂ ಜೇನುತುಪ್ಪ – ಗಂಟಲು ನೋವಿನ ಸಮಸ್ಯೆಯಲ್ಲಿ ಜೇನುತುಪ್ಪದ ಸೇವನೆಯು ತುಂಬಾ ಪ್ರಯೋಜನ ನೀಡುತ್ತದೆ. ಚಹಾಗೆ ಜೇನುತುಪ್ಪ ಬೆರೆಸಿ ಅದನ್ನು ನೀವು ಸೇವಿಸಬಹುದು. ಜೇನುತುಪ್ಪದಲ್ಲಿರುವ ಪೋಷಕಾಂಶಗಳು ವೈರಲ್ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರಿಂದ ಗಂಟಲು ನೋವು ಕೂಡ ನಿವಾರಣೆಯಾಗುತ್ತದೆ.
ಒಂದು ಈರುಳ್ಳಿಯನ್ನು ತೆಗೆದುಕೊಳ್ಳಿ ಅದನ್ನು ಕತ್ತರಿಸಿಟ್ಟುಕೊಳ್ಳಿ, ಬಳಿಕ ಅರ್ಧ ಕಪ್ ಜೇನು ತುಪ್ಪ ಅಥವಾ ಅರ್ಧ ಲೋಟ ಸಕ್ಕರೆಯನ್ನು ತೆಗೆದುಕೊಳ್ಳಿ ಒಂದು ಪದರ ಜೇನುತುಪ್ಪ, ಒಂದು ಪದರ ಈರುಳ್ಳಿ ಹೀಗೆ ಕಪ್ ತುಂಬುವರೆಗೂ ಹಾಕಿ ಬಳಿಕ ಸುಮಾರು 12 ತಾಸುಗಳ ಕಾಲ ಹಾಗೆಯೇ ಮುಚ್ಚಿಡಿ. ಬಳಿಕ ಅದನ್ನು ಸೇವಿಸಿ.
ಅರಿಶಿಣ ಚಹಾ – ನೋಯುತ್ತಿರುವ ಗಂಟಲಿನ ಸಮಸ್ಯೆಯಿಂದ ನೀವು ಕೂಡ ತೊಂದರೆಗೊಳಗಾಗಿದ್ದರೆ, ಅರಿಶಿನ ಚಹಾವನ್ನು ನೀವು ಟ್ರೈ ಮಾಡಬಹುದು. ಅರಿಶಿಣವನ್ನು ಸೇವಿಸುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ನೋಯುತ್ತಿರುವ ಗಂಟಲು, ಶೀತದಿಂದ ನೀವು ಪರಿಹಾರ ಪಡೆಯಬಹುದು.
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು: ಚಳಿಗಾಲದಲ್ಲಿ ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದು ಒಳ್ಳೆಯದು. ಇದು ಗಂಟಲಿನ ಊತವನ್ನು ಕಡಿಮೆ ಮಾಡುತ್ತದೆ, ಗಂಟಲಿನ ಕಿರಿಕಿರಿಯನ್ನು ನಿವಾರಿಸುತ್ತದೆ ಮತ್ತು ಲೋಳೆಯನ್ನು ಕಡಿಮೆ ಮಾಡುತ್ತದೆ.
ಶುಂಠಿ: ಶುಂಠಿ ಒಣ ಕೆಮ್ಮನ್ನು ಕಡಿಮೆ ಮಾಡುತ್ತದೆ. ಉಪ್ಪು ಹಾಕಿದ ಶುಂಠಿಯನ್ನು ಕೆಲವು ನಿಮಿಷಗಳ ಕಾಲ ಚೆನ್ನಾಗಿ ಹಿಂಡಿ. ಚೆನ್ನಾಗಿ ಗಾಗಲ್ ಮಾಡಿ. ಈ ರೀತಿ ಮಾಡುವುದರಿಂದ ಶೀತ ಮತ್ತು ಕೆಮ್ಮುಗಳಿಗೆ ಒಳ್ಳೆಯದು.
ಶೀತವಾದಾಗ ಗಂಟಲು ಮೂಗು ಕಟ್ಟಿದಂತಾಗುತ್ತದೆ ಆ ಸಮಯದಲ್ಲಿ ಶುಂಠಿ ಮತ್ತು ಜೇನು ಬಹಳ ಉತ್ತಮವಾದದ್ದು. ಶುಂಠಿಯನ್ನು ಸಣ್ಣಗೆ ಪುಡಿ ಮಾಡಿಕೊಂಡು ಅದಕ್ಕೆ ಸಮಪ್ರಮಾಣದ ಜೇನು ಬೆರೆಸಿ ಸೇವಿಸಿ. ಇದನ್ನು ಹಾಲಿನ ಜೊತೆ ಮಿಶ್ರಮಾಡಿ ಬೇಕಾದರೂ ಸೇವಿಸಬಹುದು. ಇದರಿಂದ ಮೂಗು ಕಟ್ಟುವಿಕೆ ದೂರಾಗುತ್ತದೆ ಮತ್ತು ಗಂಟಲು ಒಣಗುವುದು ಕಡಿಮೆಯಾಗುತ್ತದೆ.
ನಿಮಗೆ ದೀರ್ಘಕಾಲದವರೆಗೆ ಈ ಸಮಸ್ಯೆಗಳು ಕಂಡುಬಂದರೆ ತುರ್ತು ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಹಾಗೂ ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ