ಕೃತಕ ಸಿಹಿಕಾರಕಗಳು ವ್ಯಕ್ತಿಗಳ ಅಚ್ಚುಮೆಚ್ಚಿನದೇನಲ್ಲ. ಅವುಗಳನ್ನು ಮೊದಲು ಸಿಹಿತಿಂಡಿಗಳಿಗೆ ಬೆರೆಸಲು ಸಕ್ಕರೆಯ ಬದಲಿಯಾಗಿ ಜನಪ್ರಿಯಗೊಳಿಸಲಾಯಿತು ಏಕೆಂದರೆ ಅವು ನಿಮ್ಮ ತೂಕವನ್ನು ಹೆಚ್ಚಿಸದೆಯೇ ಸಿಹಿ ತಿನಿಸುಗಳನ್ನು ಆನಂದಿಸಲು ಸಹಾಯ ಮಾಡುತ್ತಿತ್ತು. ಮೊದಲಿಗೆ, ಅವು ಅತ್ಯುತ್ತಮವೆಂದು ತೋರಿದವು, ಬಳಿಕ ಅದೇ ಕೃತಕ ಸಿಹಿಕಾರಕಗಳು ಅನಾರೋಗ್ಯಕರವೆಂದು ಹೇಳುವ ಸಂಶೋಧನೆ ಹೊರಬಂದಿತು. ಇದೆಲ್ಲದರ ಜೊತೆಗೆ ಹಲವಾರು ಸಂಶೋಧನೆಯು ಅಂತಹ ಅನೇಕ ವಿಚಾರಗಳನ್ನು ತಿಳಿಸಿದೆ. ಕೃತಕ ಸಿಹಿಕಾರಕಗಳು ಕ್ಯಾನ್ಸರ್ ಗೆ ಕಾರಣವಾಗುತ್ತವೆ ಮತ್ತು ಇತರ ಆರೋಗ್ಯ ಅಪಾಯಗಳನ್ನು ಸಹ ತರುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಅಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಕಗಳಲ್ಲಿ ಒಂದನ್ನು ಅದರ ಸಂಭಾವ್ಯ ಅಡ್ಡಪರಿಣಾಮಗಳಿಗಾಗಿ ಪರಿಶೀಲಿಸಲಾಗುತ್ತಿದೆ.
ಅಸ್ಪರ್ಟೇಮ್ ಕಡಿಮೆ ಕ್ಯಾಲೊರಿ ಸಿಹಿಕಾರಕವಾಗಿದ್ದು, ಇದನ್ನು ಸಕ್ಕರೆ ಬದಲಿಯಾಗಿ ವ್ಯಾಪಕವಾಗಿ ಆಹಾರ ಮತ್ತು ಪಾನೀಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ಡಯಟ್ ಸೋಡಾಗಳು, ಸಕ್ಕರೆ ಮುಕ್ತ ಸಿಹಿ ತಿಂಡಿಗಳು, ಚೂಯಿಂಗ್ ಗಮ್ಗಳು ಮತ್ತು ಕೃತಕವಾಗಿ ಸಿಹಿಯಾಗಿಸಿದ ಅನೇಕ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಈ ಸಿಹಿಕಾರಕವು ಕ್ಯಾನ್ಸರ್ ಕಾರಕ ಎಂದು ಪ್ರಮುಖ ಜಾಗತಿಕ ಆರೋಗ್ಯ ಪ್ರಾಧಿಕಾರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಯ, ಕ್ಯಾನ್ಸರ್ ತಜ್ಞರ ಪರಿಶೀಲನೆಯಲ್ಲಿದೆ. ಈ ಕೃತಕ ಸಿಹಿಕಾರಕವು ಕ್ಯಾನ್ಸರ್ ಕಾರಕವಾಗಿದೆ ಎಂದು ಹೇಳುವ ವರದಿಯನ್ನು ಬಿಡುಗಡೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್ಸಿ) ತಯಾರಿ ನಡೆಸುತ್ತಿದೆ. ಈ ಮೊದಲು ಮಿಶ್ರ ಫಲಿತಾಂಶ ವ್ಯಕ್ತ ವಾಗಿರುವುದರಿಂದ ಸ್ಪಷ್ಟ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.
ಅಸ್ಪರ್ಟೇಮ್ ಎಂಬ ಸಿಹಿಕಾರಕ, ನಿಜವಾದ ಕ್ಯಾನ್ಸರ್ಕಾರಕ ಡೋಸ್ ಎಂದು ಇನ್ನೂ ಸಾಬೀತಾಗಿಲ್ಲ. ಆದರೆ ಹಿಂದಿನ ವರದಿಗಳ ಆಧಾರದ ಮೇಲೆ, ಕ್ಯಾನ್ಸರ್ಗಳ ಒಟ್ಟಾರೆ ಅಪಾಯವನ್ನು ಪ್ರತಿಬಿಂಬಿಸುತ್ತದೆ, ವಿಶೇಷವಾಗಿ, ಸ್ತನ ಕ್ಯಾನ್ಸರ್ ಮತ್ತು ಅಸ್ಪರ್ಟೇಮ್ ಸೇವನೆಗೆ ಸಂಬಂಧಿಸಿದ, ಬೊಜ್ಜಿನಿಂದ ಬರುವ ಕ್ಯಾನ್ಸರ್ಗಳ, ಸಾಧ್ಯತೆ ಇದೆ. ಆದ್ದರಿಂದ, ಅಸ್ಪರ್ಟೇಮ್ ಹೊಂದಿರುವ ಆಹಾರಗಳ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು. ಆದರೆ ಅಸ್ಪರ್ಟೇಮ್ ಅನ್ನು ಸಂಭಾವ್ಯ ಕ್ಯಾನ್ಸರ್ಕಾರಕ ಎಂದು ವರ್ಗೀಕರಿಸುವುದರಿಂದ ಅದು ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಖಚಿತವಾಗಿ ಸಾಬೀತಾಗಿದೆ ಎಂದು ಅರ್ಥವಲ್ಲ. ಅಸ್ಪರ್ಟೇಮ್ ಮೇಲೆ ನಡೆಸಿದ ಅಧ್ಯಯನಗಳು ಮಿಶ್ರ ಫಲಿತಾಂಶಗಳನ್ನು ತೋರಿಸಿವೆ, ಮತ್ತು ಕೆಲವು ತಜ್ಞರು ಅಸ್ಪರ್ಟೇಮ್ ಮತ್ತು ಕ್ಯಾನ್ಸರ್ ನಡುವೆ ಸಂಬಂಧ ಇದೆ ಎಂದು ಹೇಳುವುದಕ್ಕೆ ಸ್ಪಷ್ಟ ಪುರಾವೆಗಳು ಸಾಕಾಗುವುದಿಲ್ಲ ಎಂದು ವಾದಿಸುತ್ತಾರೆ.
ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಮತ್ತು ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ (ಇಎಫ್ಎಸ್ಎ) ಸೇರಿದಂತೆ ವಿಶ್ವದಾದ್ಯಂತದ ನಿಯಂತ್ರಕ ಪ್ರಾಧಿಕಾರಗಳು ಅಸ್ಪರ್ಟೇಮ್ನ ಸುರಕ್ಷತೆಯನ್ನು ವ್ಯಾಪಕವಾಗಿ ಪರಿಶೀಲಿಸಿವೆ ಮತ್ತು ಸ್ವೀಕಾರಾರ್ಹ ದೈನಂದಿನ ಸೇವನೆಗೆ ಸುರಕ್ಷಿತವಾಗಿದೆ ಎಂದು ತೀರ್ಮಾನಿಸಿವೆ. ಈ ಸಂಸ್ಥೆಗಳು ಒಟ್ಟಾರೆ ವೈಜ್ಞಾನಿಕ ಪುರಾವೆಗಳನ್ನು ಪರಿಗಣಿಸಿವೆ ಮತ್ತು ಪ್ರಸ್ತುತ ದತ್ತಾಂಶವು ಅಸ್ಪರ್ಟೇಮ್ ಗಮನಾರ್ಹ ಕ್ಯಾನ್ಸರ್ ಅಪಾಯವನ್ನುಂಟುಮಾಡುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಹೆಚ್ಚು ನಿದ್ದೆ ಮಾಡುವುದು ಕೂಡ ಆರೋಗ್ಯಕ್ಕೆ ಅಪಾಯಕಾರಿ
ಅಸ್ಪರ್ಟೇಮ್ ಸೇವನೆಗೆ ಸಂಬಂಧಿಸಿದ ಮಾರಣಾಂತಿಕ ಕಾಯಿಲೆಗಳು ವಿಶೇಷವಾಗಿ ಸ್ತನ ಕ್ಯಾನ್ಸರ್ ಮತ್ತು ಸ್ಥೂಲಕಾಯತೆಗೆ ಸಂಬಂಧಿಸಿದ ಕ್ಯಾನ್ಸರ್ಗಳ ಒಟ್ಟಾರೆ ಅಪಾಯವನ್ನು ಹೆಚ್ಚಿಸಬಹುದು ಎಂಬ ಫಲಿತಾಂಶಗಳ ಆಧಾರದ ಮೇಲೆ ಇದು ನಿಖರವಾಗಿದೆ. ಆದರೆ ಅಸ್ಪರ್ಟೇಮ್ನ ನಿಜವಾದ ಕ್ಯಾನ್ಸರ್ ಕಾರಕ ಎಂದು ಇನ್ನೂ ಗುರುತಿಸಲಾಗಿಲ್ಲ. ಆದ್ದರಿಂದ, ಅಸ್ಪರ್ಟೇಮ್ ಹೊಂದಿರುವ ಆಹಾರಗಳ ಸೇವನೆಯನ್ನು ತಪ್ಪಿಸುವುದು ಸೂಕ್ತ ಎಂದು ಏಷ್ಯನ್ ಆಸ್ಪತ್ರೆಯ ಕನ್ಸಲ್ಟೆಂಟ್ ಆಂಕೊಲಾಜಿಸ್ಟ್ ಡಾ. ಅರುಶಿ ಅಗರ್ವಾಲ್ ಹೇಳುತ್ತಾರೆ.
ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಇತರ ಕೃತಕ ಸಿಹಿಕಾರಕಗಳಲ್ಲಿ ಅಸೆಸಲ್ಫೇಮ್- ಕೆ, ಸ್ಯಾಕರಿನ್, ಸೈಕ್ಲಮೇಟ್ ಮತ್ತು ಸ್ಟೀವಿಯಾ ಸೇರಿವೆ.
ಕೃತಕ ಸಿಹಿಕಾರಕಗಳ ಸೇವನೆಯನ್ನು ಮಿತಿಗೊಳಿಸಲು ಶಿಫಾರಸು ಮಾಡಲಾಗಿದ್ದರೂ, ಅದಕ್ಕೆ ಬದಲಾಗಿ ಸಕ್ಕರೆ ಆಯ್ಕೆ ಉತ್ತಮವಲ್ಲ. ಸಕ್ಕರೆ ಸೇವನೆಯೂ ಕೂಡ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ಸಾಬೀತಾಗಿದೆ. ಸಮತೋಲಿತ ಆಹಾರ ಮತ್ತು ವ್ಯಾಯಾಮ ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರ ಜೊತೆಗೆ ಎಲ್ಲರೂ ಆರೋಗ್ಯಕರವಾಗಿರಿ ಎಂದು ಡಾ. ಅಗರ್ವಾಲ್ ಶಿಫಾರಸು ಮಾಡುತ್ತಾರೆ. ಅತಿಯಾದ ಸಕ್ಕರೆ ಬೊಜ್ಜಿಗೆ ಕಾರಣವಾಗಬಹುದು, ಇದು ನಿಮ್ಮ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಸಕ್ಕರೆಗಳು ಮತ್ತು ಕೃತಕ ಸಿಹಿಕಾರಕಗಳನ್ನು ಶಿಫಾರಸು ಮಾಡಿದ ಪ್ರಮಾಣದೊಳಗೆ ತೆಗೆದುಕೊಳ್ಳಲು ಸೂಚಿಸಲಾಗಿದೆ ಏಕೆಂದರೆ ಎಲ್ಲವನ್ನೂ ಅತಿಯಾಗಿ ಸೇವಿಸುವುದು ಹಾನಿಕಾರಕವೇ ಆಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: