Health Tips: ತುಂಬ ಒತ್ತಡದಿಂದ ಬಳಲುತ್ತಿದ್ದೀರಾ.. ನಿದ್ದೆಯೂ ಬರುತ್ತಿಲ್ಲವಾ?- ಅಶ್ವಗಂಧ ಬಳಕೆ ಮಾಡಿ ನೋಡಿ..

|

Updated on: Mar 24, 2021 | 5:46 PM

ಅತಿಯಾದ ಒತ್ತಡದಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್​ ಮಟ್ಟ ಕಡಿಮೆ ಇರುತ್ತದೆ. ಇದರಿಂದ ಅವರಲ್ಲಿ ವೀರ್ಯದ ಸಂಖ್ಯೆ ಕಡಿಮೆ ಆಗಿ, ಫಲವತ್ತತೆ ಕುಂದುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆ ಮಾಡಿದರೆ ತುಂಬ ಒಳ್ಳೆಯದು.

Health Tips: ತುಂಬ ಒತ್ತಡದಿಂದ ಬಳಲುತ್ತಿದ್ದೀರಾ.. ನಿದ್ದೆಯೂ ಬರುತ್ತಿಲ್ಲವಾ?- ಅಶ್ವಗಂಧ ಬಳಕೆ ಮಾಡಿ ನೋಡಿ..
ಅಶ್ವಗಂಧ
Follow us on

ಒಂದು ರಾಶಿ ಒತ್ತಡಗಳನ್ನು ತಲೆಗೆ ಕಟ್ಟಿಕೊಂಡು, ಯಾಂತ್ರಿಕವಾಗಿ ಓಡುತ್ತಿರುವ ಬದುಕು ನಮ್ಮದು. ನಮ್ಮೊಳಗೆ ಅದೆಷ್ಟೋ ಕಾಯಿಲೆಗಳು ಒತ್ತಡ, ಟೆನ್ಷನ್​ಗಳಿಂದಲೇ ಹುಟ್ಟುತ್ತಿವೆ. ಬರೀ ದೈಹಿಕವಾಗಿಯಲ್ಲದೆ, ಮಾನಸಿಕವಾಗಿಯೂ ನಮ್ಮನ್ನು ಜಜ್ಜರಿತಗೊಳಿಸುತ್ತಿದೆ. ಒತ್ತಡ, ಉದ್ವೇಗಗಳಿಂದ ಅಪಾಯ ತಪ್ಪಿದ್ದಲ್ಲ ಎಂಬುದು ಅರ್ಥವಾದರೂ ಅದರಿಂದ ಪಾರಾಗುವ ಮಾರ್ಗಗಳೇ ತಿಳಿಯುವುದಿಲ್ಲ. ಹಾಗೊಮ್ಮೆ ನೀವೇನಾದರೂ ಅತಿಯಾದ ಒತ್ತಡದಿಂದ ಬಳಲುತ್ತ, ಅದರ ನಿವಾರಣೆಗಾಗಿ ಪಡಿಪಾಟಲು ಪಡುತ್ತಿದ್ದರೆ, ಅಶ್ವಗಂಧ ಬಳಕೆ ಮಾಡಿ ನೋಡಿ.

ಅಶ್ವಗಂಧ ಒಂದು ಪುರಾತನ ಔಷಧೀಯ ಸಸ್ಯ. ದೇಹದ ಬಾಹ್ಯ ಮತ್ತು ಆಂತರಿಕ ಎರಡೂ ವಿಧದ ಒತ್ತಡ ನಿವಾರಕ ಗುಣ ಇದರಲ್ಲಿ ಇರುತ್ತದೆ. ಅಶ್ವಗಂಧದಲ್ಲಿ ಹಲವು ವಿಧದ ವಿಟಮಿನ್​ಗಳು, ಖನಿಜಾಂಶಗಳು, ಪೋಷಕಾಂಶಗಳು ಇರುತ್ತವೆ. ಹಾಗಾಗಿ ದೇಹದ ಸದೃಢ ಬೆಳವಣಿಗೆಯಲ್ಲೂ ಇದು ಸಹಕಾರಿ. ಅಶ್ವಗಂಧ ಹಲವು ಕಾಯಿಲೆಗಳಿಗೆ ಮದ್ದು.. ಹಾಗೇ ಶಕ್ತಿಯನ್ನೂ ನೀಡುತ್ತದೆ. ಅಷ್ಟೇ ಅಲ್ಲ, ಖಿನ್ನತೆ, ಒತ್ತಡ ನಿವಾರಿಸುವ ಸಾಮರ್ಥ್ಯವೂ ಇದಕ್ಕಿದೆ. ಅಶ್ವಗಂಧದ ನಿಯಮಿತ ಸೇವನೆಯಿಂದ ದೇಹದಲ್ಲಿ ಎಂಡೋರ್ಫಿನ್​​ಗಳ ಬಿಡುಗಡೆ ಮಟ್ಟ ಹೆಚ್ಚಿ, ಈ ಮೂಲಕ ಖಿನ್ನತೆ, ಒತ್ತಡ, ಮಾನಸಿಕ ನೋವನ್ನು ನಿವಾರಣೆ ಮಾಡುತ್ತದೆ.

ಅಶ್ವಗಂಧದ ಅನುಕೂಲಗಳು ಹೀಗಿವೆ
ಒತ್ತಡ ನಿವಾರಣೆ: ದೇಹದಲ್ಲಿ ಒತ್ತಡಕ್ಕೆ ಕಾರಣವಾಗುವ Cortisol ಮೇಲೆ ಅಶ್ವಗಂಧ ಪರಿಣಾಮ ಬೀರುತ್ತದೆ. ಅಶ್ವಗಂಧ ಸೇವನೆಯಿಂದ Cortisol ಹಾರ್ಮೋನ್​ ಪ್ರಮಾಣ ಕಡಿಮೆಯಾಗಿ, ಒತ್ತಡದಿಂದ ನಿಮ್ಮನ್ನು ದೂರ ಇಡುತ್ತದೆ.

ಎಲುಬು-ಮಾಂಸಖಂಡಗಳ ಸದೃಢತೆ: ದೇಹದಲ್ಲಿ ಎಲುಬು ಮತ್ತು ಮಾಂಸಖಂಡಗಳ ಆರೋಗ್ಯಕ್ಕೆ ಅಶ್ವಗಂಧ ಸಹಕಾರಿ. ವಯಸ್ಸಾದಂತೆ ಎಲುಬು, ಮಾಂಸಖಂಡಗಳೆಲ್ಲ ಸಹಜವಾಗಿಯೇ ದುರ್ಬಲವಾಗುತ್ತವೆ. ಹೀಗಾದಾಗ ಅಶ್ವಗಂಧ ಸೇವಿಸಬೇಕು. ಇದರೊಂದಿಗೆ ದೇಹದಲ್ಲಿನ ಬೊಜ್ಜನ್ನು ಕಡಿಮೆ ಮಾಡಿ, ತೂಕ ಇಳಿಯಲು ಸಹಾಯ ಮಾಡುತ್ತದೆ.

ರೋಗ-ನಿರೋಧಕ ಶಕ್ತಿ ಹೆಚ್ಚಳ: ಅಶ್ವಗಂಧದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ.

ಸಕ್ಕರೆ ಅಂಶದ ಮಟ್ಟವನ್ನು ನಿಯಂತ್ರಿಸುತ್ತದೆ: ದೇಹದ ಇನ್ಸುಲಿನ್​ ಮಟ್ಟವನ್ನು ಹೆಚ್ಚಿಸುವಲ್ಲಿ ಅಶ್ವಗಂಧ ಪ್ರಮುಖಪಾತ್ರ ವಹಿಸುತ್ತದೆ. ಇದರಿಂದ ಡಯಾಬಿಟಿಸ್ ಕಾಯಿಲೆಯಿಂದ ದೂರ ಇರಬಹುದು. ಅದಾಗಲೇ ಡಯಾಬಿಟಿಸ್​​ಗೆ ಒಳಗಾದವರಿಗೂ ಅಶ್ವಗಂಧ ಸೇವನೆ ಪರಿಣಾಮಕಾರಿ.

ನೆನಪಿನ ಶಕ್ತಿ ವೃದ್ಧಿ: ಇನ್ನು ಅಶ್ವಗಂಧ ಸೇವನೆಯಿಂದ ನಿಮ್ಮ ನೆನಪಿನ ಶಕ್ತಿ ವೃದ್ಧಿಸುತ್ತದೆ. ಮಿದುಳನ್ನು ಉತ್ತೇಜನಗೊಳಿಸಿ, ಸದೃಢವಾಗಿಡುತ್ತದೆ. ಹಾಗೇ, ಮಿದುಳಿನ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸುತ್ತದೆ.

ಪುರುಷರಲ್ಲಿ ವೀರ್ಯ ವೃದ್ಧಿ: ಅತಿಯಾದ ಒತ್ತಡದಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್​ ಮಟ್ಟ ಕಡಿಮೆ ಇರುತ್ತದೆ. ಇದರಿಂದ ಅವರಲ್ಲಿ ವೀರ್ಯದ ಸಂಖ್ಯೆ ಕಡಿಮೆ ಆಗಿ, ಫಲವತ್ತತೆ ಕುಂದುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆ ಮಾಡಿದರೆ ತುಂಬ ಒಳ್ಳೆಯದು. ಇದರಿಂದ ಒತ್ತಡ ಕಡಿಮೆಯಾಗಿ, ನೈಸರ್ಗಿಕವಾಗಿಯೇ ಅವರಲ್ಲಿ ವೀರ್ಯ ಸಂಖ್ಯೆ ವೃದ್ಧಿಯಾಗುತ್ತದೆ.

ನಿದ್ರಾಹೀನತೆಯಯಿಂದ ಪಾರಾಗಬಹುದು: ತುಂಬ ಒತ್ತಡದಿಂದ ನಿದ್ದೆ ಸರಿಯಾಗಿ ಬರುತ್ತಿಲ್ಲವೆಂದರೆ, ಒಂದು ಗ್ಲಾಸ್​ ಹಾಲಿಗೆ ಸ್ವಲ್ಪ ಅಶ್ವಗಂಧ ಪುಡಿ ಹಾಕಿ, ಚೆನ್ನಾಗಿ ಕುಲುಕಿ ಕುಡಿಯಬೇಕು. ಇದರಿಂದ ನಿದ್ರಾಹೀನತೆ ದೂರವಾಗುತ್ತದೆ.

ಅಶ್ವಗಂಧ ಬೇರುಗಳು ನೈಸರ್ಗಿಕವಾಗಿಯೇ ದೊರೆಯುತ್ತವೆ. ಅದರಿಂದ ತಯಾರಿಸಲಾದ ಪುಡಿ, ಲೇಹಗಳೂ ಆಯುರ್ವೇದ ಮಳಿಗೆಗಳಲ್ಲಿ ಲಭ್ಯವಿರುತ್ತವೆ. ಯಾವುದನ್ನೇ ಬಳಸುವುದಾದರೂ ನಿಯಮಿತವಾಗಿ ಬಳಕೆ ಮಾಡಬೇಕು.

ಇದನ್ನೂ ಓದಿ: Health Tips: ಹೊತ್ತುಗೊತ್ತು ಇಲ್ಲದೆ ತಿನ್ಬೇಡಿ- ರಾತ್ರಿ ಹೊಟ್ಟೆ ತುಂಬ ಊಟ ಮಾಡಿ ತಕ್ಷಣ ನಿದ್ದೆಗೆ ಜಾರುವ ಅಭ್ಯಾಸವಿದ್ದರೆ ಇಂದೇ ಬಿಟ್ಬಿಡಿ

Health Tips: ಡಯಟ್ ಮಾಡೋಕೆ ಆಗ್ತಿಲ್ಲ ಎಂದು ಚಿಂತೆ ಬೇಡ; ಫಿಟ್​ ಆಗಿ, ಆರೋಗ್ಯಕರವಾಗಿರಲು ಇಷ್ಟೆಲ್ಲ ದಾರಿಗಳಿವೆ ನೋಡಿ..

Published On - 5:44 pm, Wed, 24 March 21