AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಡಯಟ್ ಮಾಡೋಕೆ ಆಗ್ತಿಲ್ಲ ಎಂದು ಚಿಂತೆ ಬೇಡ; ಫಿಟ್​ ಆಗಿ, ಆರೋಗ್ಯಕರವಾಗಿರಲು ಇಷ್ಟೆಲ್ಲ ದಾರಿಗಳಿವೆ ನೋಡಿ..

ಪ್ರತಿದಿನವೂ ಸರಿಯಾಗಿ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಇದು ತೂಕ ಕಡಿಮೆ ಮಾಡಿಕೊಳ್ಳಲೂ ಸಹಕಾರಿಯಾಗಿದೆ. ಬೇರೆ ಯಾವುದೇ ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಸೇವಿಸುವ ಬದಲು ಬೇಕೆಂದಾಗಲೆಲ್ಲ ನೀರನ್ನೇ ಕುಡಿಯಿರಿ.

Health Tips: ಡಯಟ್ ಮಾಡೋಕೆ ಆಗ್ತಿಲ್ಲ ಎಂದು ಚಿಂತೆ ಬೇಡ; ಫಿಟ್​ ಆಗಿ, ಆರೋಗ್ಯಕರವಾಗಿರಲು ಇಷ್ಟೆಲ್ಲ ದಾರಿಗಳಿವೆ ನೋಡಿ..
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Mar 17, 2021 | 7:22 PM

ನಾವು ಆರೋಗ್ಯವಾಗಿರಬೇಕು.. ಫಿಟ್​ ಆಗಿರಬೇಕು ಎಂಬುದು ಬಹುತೇಕ ಎಲ್ಲರ ಆಸೆ. ಹಾಗಾಗಿ ತಮ್ಮದೇ ಆದ ಪದ್ಧತಿಯಲ್ಲಿ ಡಯೆಟ್​ ರೂಢಿಸಿಕೊಂಡಿರುತ್ತಾರೆ. ಒಬ್ಬೊಬ್ಬರ ಡಯೆಟ್​ ವಿಧಾನ ಒಂದೊಂದು ತರ ಇರುತ್ತದೆ. ಮನೆಯಲ್ಲಿದ್ದಾಗ ಅದು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗಿರುತ್ತದೆ. ಆದರೆ ಕೆಲಸಕ್ಕೆಂದೋ.. ಬೇರೆ ಯಾವುದೋ ಕಾರಣಕ್ಕಾಗಿ ಮನೆಯಿಂದ ಹೊರಹೋಗಿ ಎಲ್ಲೆಲ್ಲೋ ಉಳಿಯಬೇಕಾಗಿ ಬಂದಾಗ ಡಯೆಟ್​ ಹಾಳಾಗುತ್ತದೆ. ಇಷ್ಟುದಿನ ಅನುಸರಿಸಿಕೊಂಡು ಬಂದ ಪದ್ಧತಿಯ ಚೈನ್ ಬ್ರೇಕ್ ಆಗುತ್ತದೆ. ಆದರೆ ನೀವು ಮನೆಯಿಂದ ದೂರ ಇದ್ದಾಗಲೂ, ಡಯಟ್ ಮಾಡಲು ಸಾಧ್ಯವಾಗದೆ ಇದ್ದರೂ ಆರೋಗ್ಯಕರವಾಗಿ ಇರಬಹುದು. ಅದಕ್ಕಾಗಿ ಒಂದಷ್ಟು ಟಿಪ್ಸ್​ಗಳಿವೆ ನೋಡಿ..

ದಿನಕ್ಕೆ 3-4ಬಾರಿ ಆಹಾರ ಸೇವಿಸಿ ನಮ್ಮ ದೇಹಕ್ಕೆ ಸಮತೋಲಿತ ಆಹಾರಗಳ ಅಗತ್ಯವಿದೆ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಆರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ದೇಹದ ಚಯಾಪಚಯ ಪ್ರಮಾಣ (BMR) ಹೆಚ್ಚುತ್ತದೆ. ಸ್ವಲ್ಪ ದಿನ ನಿಯಮಿತವಾಗಿ ಆಹಾರ ತೆಗೆದುಕೊಳ್ಳುವುದು.. ಆದರೆ ಮತ್ತೊಂದಷ್ಟು ದಿನ ಆಹಾರ ಸೇವನೆ ಪ್ರಮಾಣ ಕಡಿಮೆ ಮಾಡುವುದರಿಂದ ನಮ್ಮ ದೇಹದಲ್ಲಿನ ಕ್ಯಾಲರಿ ಬರ್ನ್​ ಆಗುತ್ತದೆ. ಇದರಿಂದ ಕೊಬ್ಬಿನ ಅಂಶ ಹೆಚ್ಚುತ್ತದೆ. ಹಾಗಾಗಿ ದಿನದಲ್ಲಿ 3-4 ಬಾರಿ ನಿಯಮಿತವಾಗಿ, ಸ್ವಲ್ಪ ಆಹಾರ ತೆಗೆದುಕೊಳ್ಳಿ.

ಸರಿಯಾಗಿ ನೀರು ಕುಡಿಯಿರಿ ಪ್ರತಿದಿನವೂ ಸರಿಯಾಗಿ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಇದು ತೂಕ ಕಡಿಮೆ ಮಾಡಿಕೊಳ್ಳಲೂ ಸಹಕಾರಿಯಾಗಿದೆ. ಬೇರೆ ಯಾವುದೇ ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಸೇವಿಸುವ ಬದಲು ಬೇಕೆಂದಾಗಲೆಲ್ಲ ನೀರನ್ನೇ ಕುಡಿಯಿರಿ. ದೇಹ ಡಿ ಹೈಡ್ರೇಟ್​ ಆಗುವುದನ್ನೂ ಇದು ತಪ್ಪಿಸುತ್ತದೆ. ದೇಹವನ್ನು ಫ್ರೆಶ್​ ಆಗಿ ಇಡುತ್ತದೆ.

ಬೆಳಗ್ಗಿನ ತಿಂಡಿಯನ್ನು ಮಿಸ್​ ಮಾಡ್ಬೇಡಿ ಇತ್ತೀಚಿನ ಜೀವನ ಶೈಲಿಯಲ್ಲಿ ಅನೇಕರು ಬೆಳಗ್ಗಿನ ತಿಂಡಿಯನ್ನು ತಿನ್ನುವುದಿಲ್ಲ. ಬೆಳಗ್ಗೆ ಎದ್ದ ತಕ್ಷಣ ಕೆಲಸಕ್ಕೆ ಹೋಗುವ ಅವಸರ, ಏಳುವುದಕ್ಕೇ ತಡ ಮಾಡಿಕೊಳ್ಳುವುದು.. ಇತ್ಯಾದಿ ಕಾರಣಗಳಿಂದ ಬ್ರೇಕ್​ಫಾಸ್ಟ್​ ಸ್ಕಿಪ್ ಮಾಡುತ್ತಾರೆ. ಆದರೆ ಏನೇ ಕಾರಣ ಹೇಳಿಯೂ ಬೆಳಗ್ಗಿನ ತಿಂಡಿಯನ್ನು ಮಾತ್ರ ತಪ್ಪಿಸಬೇಡಿ. ಬೆಳಗ್ಗೆ ತುಂಬ ಹೊತ್ತು ಹೊಟ್ಟೆಯನ್ನು ಖಾಲಿ ಬಿಟ್ಟು ನಂತರ ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆ ಅವ್ಯವಸ್ಥಿತಗೊಳ್ಳಬಹುದು. ದೇಹದ ಉಷ್ಣತೆಯೂ ಹೆಚ್ಚುತ್ತದೆ. ಸದಾ ನಿದ್ರೆಯ ಮೂಡ್​ನಲ್ಲೇ ಇರುವಂತೆ ಮಾಡುತ್ತದೆ. ಹಾಗಾಗಿ ಓಟ್ಸ್​, ಮುಸ್ಲಿಯಂಥ ಆಹಾರವನ್ನಾದರೂ ಬೆಳಗಿನ ಹೊತ್ತು ತೆಗೆದುಕೊಳ್ಳಿ.

ರಾತ್ರಿ ತುಂಬ ಆಹಾರ ಸೇವನೆ ಬೇಡ ಕೆಲವರಂತೂ ಕೆಲಸದ ಗಡಿಬಿಡಿ, ಟೆನ್ಷನ್​​ನಲ್ಲಿ ಬೆಳಗ್ಗೆಯಿಂದ ಸರಿಯಾಗಿ ಆಹಾರ ಸೇವನೆ ಮಾಡದೆ, ರಾತ್ರಿ ಸಮಯ ಸಿಕ್ಕಾಗ ಒಮ್ಮೆಲೇ ಭರ್ಜರಿ ಊಟ ಮಾಡಿಬಿಡುತ್ತಾರೆ. ಆದರೆ ಹೀಗೆ ಮಾಡಬೇಡಿ. ಅದರಲ್ಲೂ ಅನ್ನದಂತ ಕಾರ್ಬೋ-ಹೈಡ್ರೇಟ್​ ಯುಕ್ತ ಆಹಾರಗಳನ್ನು ಸೇವಿಸುವುದರಿಂದ ಒಮ್ಮೆಲೇ ತೂಕ ಹೆಚ್ಚಬಹುದು. ಹಾಗಾಗಿ ಕಡಿಮೆ ತಿನ್ನಬೇಕು.. ಅದರಲ್ಲೂ ನವಣೆಯನ್ನು ಆಯ್ಕೆ ಮಾಡಿಕೊಂಡರೆ ಒಳಿತು. ಇದರಲ್ಲಿರು ಅಮಿನೋ ಆ್ಯಸಿಡ್​ ಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ. ಹಾಗೇ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಸಕ್ಕರೆ, ಉಪ್ಪಿನಂಶಯುಕ್ತ ಪಾನೀಯಗಳನ್ನು ಸೇವಿಸಬೇಡಿ ಇಂಥ ಪಾನೀಯಗಳು ಚರ್ಮದ ಮೇಲೆ ಬಹುಬೇಗನೇ ಪರಿಣಾಮ ಬೀರುತ್ತವೆ. ಬಹುಬೇಗನೇ ನಿಮಗೆ ರಕ್ತದೊತ್ತಡ, ಮಧುಮೇಹದಂತ ಕಾಯಿಲೆಗಳು ಶುರುವಾಗಬಹುದು. ಹಾಗಾಗಿ ಇಂಥ ಪಾನೀಯಗಳ ಬದಲು ನೀರನ್ನೇ ಕುಡಿಯಿರಿ. ಹಾಗೇ, ಹಸಿವಾಯಿತು ಎಂದು ಜಂಕ್​ಫುಡ್​ಗಳು, ಕರಿದ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ. ಅದರ ಬದಲು ನೀವು ಎಳ್ಳು, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು, ಅಗಸೆಬೀಜಗಳನ್ನು ತಿನ್ನಬಹುದು. ಇವೆಲ್ಲ ಪೋಷಕಾಂಶವನ್ನು ಒದಗಿಸುತ್ತವೆ.

ವ್ಯಾಯಾಮ ಅಥವಾ ಯೋಗ ಮಾಡಿ ಒಂದು ವ್ಯವಸ್ಥಿತ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಜತೆಗೆ ಸಣ್ಣಪುಟ್ಟ ವ್ಯಾಯಾಮ, ಯೋಗವನ್ನೂ ನಿತ್ಯವೂ ಮಾಡುತ್ತ ಬಂದರೆ ಹಲವು ಅನಾರೋಗ್ಯಗಳು ದೂರ ಆಗುತ್ತವೆ. ಮಾನಸಿಕವಾಗಿಯೂ ಸದೃಢರಾಗಬಹುದು. ಮನೆಯಲ್ಲಿ ಇಲ್ಲ.. ನಿತ್ಯಚರಿ ಸರಿಯಿಲ್ಲ ಎಂದೆಲ್ಲ ಯೋಚಿಸದೆ, ಈ ಟಿಪ್ಸ್​ಗಳನ್ನು ಪಾಲಿಸಿ ಆರೋಗ್ಯವಾಗಿರಿ.

ಇದನ್ನೂ ಓದಿ: ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?

ಹೊಟ್ಟೆ ಕೆಟ್ಟರೆ ಎಷ್ಟು ಕಷ್ಟ! ಕರುಳಿನ ಆರೋಗ್ಯ ಚೆನ್ನಾಗಿರಲು ಈ ನಿಯಮಗಳನ್ನು ಪಾಲಿಸಿ..

Published On - 7:19 pm, Wed, 17 March 21