ಜೀವಕ್ರಿಯೆಗಳಿಗೆ ಅತಿ ಮುಖ್ಯವಾದ ಗ್ರಂಥಿ ಥೈರಾಯಿಡ್ ಗ್ರಂಥಿ (Thyroid). ಹೀಗಾಗಿ ಥೈರಾಯಿಡ್ ಸಮಸ್ಯೆ ಕಾಣಿಸಕೊಂಡರೆ ನಿರ್ಲಕ್ಷಿಸುವುದು ಒಳಿತಲ್ಲ. ಥೈರಾಯ್ಡ್ ಗ್ರಂಥಿಯು ಚಿಟ್ಟೆ-ಆಕಾರದ ಗ್ರಂಥಿಯಾಗಿದ್ದು ಅದು ಕತ್ತಿನ ಕೆಳಗಿನ ಮುಂಭಾಗದಲ್ಲಿದೆ. ಇದು ಚಯಾಪಚಯ, ಬೆಳವಣಿಗೆ ಮತ್ತು ಬೆಳವಣಿಗೆ ಮತ್ತು ದೇಹದ ಉಷ್ಣತೆಯ ಮೇಲೆ ಪ್ರಭಾವ ಬೀರುತ್ತದೆ. ಆರಂಭದ ಹಂತದಲ್ಲಿ ಥೈರಾಯಿಡ್ ಸಮಸ್ಯೆ ಇರುವುದು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಆರೋಗ್ಯದಲ್ಲಿ ಚೂರು ಏರು ಪೇರಾದರೂ ಗಮನಹರಿಸುವುದು ಅಗತ್ಯವಾಗಿದೆ. ಥೈರಾಯ್ಡ್ ಅಸಮತೋಲನಗೊಂಡರೆ, ನಿಮ್ಮ ದೇಹದ ಎಲ್ಲಾ ಕಾರ್ಯಗಳು ಪರಿಣಾಮ ಬೀರುತ್ತವೆ. ಚಯಾಪಚಯಕ್ರಿಯೆ, ದೇಹದ ಉಷ್ಣತೆ, ತೂಕ ಹೆಚ್ಚಾಗುವುದು ಅಥವಾ ನಷ್ಟವಾಗುವುದು, ಮುಟ್ಟಿನ ದಿನಗಳಲ್ಲಿ ಏರಪೇರು, ಕೂದಲಿನ ಆರೋಗ್ಯ, ಮನಸ್ಥಿತಿ ಸೇರಿದಂತೆ ಹೃದಯ ಬಡಿತದಲ್ಲಿಯೂ ವ್ಯತ್ಯಾಸ ಕಂಡುಬರುತ್ತದೆ.
ಆಯುರ್ವೇದದಲ್ಲಿ(Ayurveda)ಥೈರಾಯಿಡ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುತ್ತಾರೆ ಡಾ ದೀಕ್ಷಾ ಭಾವಸರ್. ಈ ಕುರಿತು ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ. ಸರಳವಾಗಿ ಜೀವನಶೈಲಿಯ ಕೆಲವು ಅಬ್ಯಾಸಗಳಿಂದ ಥೈರಾಯಿಡ್ ಅನ್ನು ನಿಯಂತ್ರಿಸಬಹುದಾಗಿದೆ ಇಲ್ಲಿದೆ ನೋಡಿ ಮೂರು ಸರಳ ಸೂತ್ರ
ಥೈರಾಯಿಡ್ ಗ್ರಂಥಿ ದೇಹದ ವಿವಿಧ ಭಾಗಗಳ ಮೇಲೆ, ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿದೆ ಆ ಬಗ್ಗೆ ಮಾಹಿತಿ
ಚಯಾಪಚಯ ಕ್ರಿಯೆ:
ಥೈರಾಯಿಡ್ ಗ್ರಂಥಿಯು ಚಯಾಪಚಯ ಕ್ರಿಯೆಯ ಮೇಲೆ ನೇರವಾಗಿ ಪರಿಣಾಮ ಬಿರುತ್ತದೆ. ಥೈರಾಯಿಡ್ ಗ್ರಂಥಿಯು ನೀವು ತಿನ್ನುವ ಆಹಾರ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಪೋಷಕಾಂಶಗಳನ್ನು ದೇಹ ಹೋರಿಕೊಂಡು ಶಕ್ತಿಯ ಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ.
ಕೂದಲಿನ ಬೆಳವಣಿಗೆ:
ಕೂದಲಿನ ಬೆಳವಣಿಗೆಗೆ ನೆರವಾಘುವ ಕಬ್ಬಿಣ, ಕ್ಯಾಲ್ಸಿಯಂ, ಮುಂತಾದ ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳು ಥೈರಾಯಿಡ್ ಸಹಾಯ ಮಅಡುತ್ತದೆ.
ದೇಹದ ತೂಕ:
ಥೈರಾಯಿಡ್ ದೇಹದ ತೂಕವನ್ನು ಸಮತೂಲನದಲ್ಲಿಡಲು ಸಹಾಯ ಮಾಡುತ್ತದೆ. ನಿಮಗೆ ಥೈರಾಯಿಡ್ ಸಮಸ್ಯೆ ಎದುರಾಗಿದ್ದರೆ ದೇಹದಲ್ಲಿ ತೂಕ ನಷ್ಟ ಅಥವಾ ಅತಿಯಾದ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಋತುಚಕ್ರ:
ಅನಿಯಮಿತ ಮುಟ್ಟಿನ ದಿನಗಳನ್ನು ನೀವು ಅನುಭವಿಸುತ್ತಿದ್ದರೆ ಅದಕ್ಕೆ ಥೈರಾಯಿಡ್ ಅಸಮತೋಲನವೂ ಕಾರಣವಾಗುತ್ತದೆ. ಹೀಗಾಗಿ ಥೈರಾಯುಡ್ಅನ್ನು ಆರೋಗ್ಯವಾಗಿರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ.
ದೇಹದ ಉಷ್ಣತೆ ಮತ್ತು ಮಾನಸಿಕ ಆರೋಗ್ಯ:
ಅಸಮತೋಲಿತ ಥೈರಾಯಿಡ್ ನಿಂದ ದೇಹದ ಉಷ್ಟಣತೆಯಲ್ಲಿ ಏರುಪೇರಾಗಬಹದು. ದೇಹದ ಉಷ್ಟಣತೆಯನ್ನು ಕಡಿಮೆ ಮಾಡಿ ಚಳಿಯ ಅನುಭವ ನೀಡಬಹುದು. ಅಲ್ಲದೆ ಥೈರಾಯಿಡ್ ಹಾರ್ಮ್ನಗಳನ್ನು ನಿಯಂತ್ರಿಸುವುದರಿಂದ ನಿಮ್ಮ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹದು. ಆದ್ದರಿಂದ ಥೈರಾಯಿಡ್ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಬೇಡ.
ಗರ್ಭಧಾರಣೆ:
ಕೆಲವೊಮ್ಮೆ ಥೈರಾಯಿಡ್ ಸಮಸ್ಯೆ ಗರ್ಭಧಾರಣೆಯ ಮೇಲೆಯೂ ಪರಿಣಾಮ ಬೀರುತ್ತದೆ. ಥೈರಾಯಿಡ್ ಸರಿಯಾಗಿದ್ದರೆ ಗರ್ಭಧಾರಣಗೆ ಸಮಸ್ಯೆಯಾಗದು. ಹೀಗಾಗಿ ಥೈರಾಯಿಡ್ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.
ಇದನ್ನೂ ಓದಿ:
PCOS ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗಿದ್ಯಾ? ಈ ಕ್ರಮಗಳನ್ನು ಅನುಸರಿಸಿ ದೇಹದ ತೂಕ ಇಳಿಸಿಕೊಳ್ಳಿ
Published On - 1:12 pm, Sun, 27 February 22