ಅನೇಕರು ಬೀಟ್ರೂಟ್ನ್ನು ಅತ್ಯಂತ ಪೋಷಕಾಂಶ ಆಹಾರ ಪದಾರ್ಥಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಕೆಲವರಿಗೆ ಬೀಟ್ರೂಟ್ ಇಷ್ಟವಾಗುವುದಿಲ್ಲ. ಆದರೆ ಬೀಟ್ ರೂಟ್ನ (Beatroot) ಉಪಯೋಗಗಳು ತಿಳಿದವರು ಅದನ್ನು ಮಾರುಕಟ್ಟೆಯಿಂದ ತರಲಾರದೆ ಇರರು. ಬೀಟ್ರೂಟ್ನ್ನು ಪಲ್ಯ ಹೊರತುಪಡಿಸಿ, ಜ್ಯೂಸ್ ಆಗಿ ಕೂಡ ಸೇವಿಸಬಹುದಾಗಿದೆ. ಬೀಟ್ರೂಟ್ನಲ್ಲಿ ವಿಟಮಿನ್ ಬಿ6, ಫೋಲೇಟ್, ಪೊಟ್ಯಾಶಿಯಂ, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಆದರೆ ಬೀಟ್ರೂಟ್ನ ಹಲವಾರು ಆರೋಗ್ಯ ಪ್ರಯೋಜನಗಳ ಹೊರತಾಗಿಯೂ ಕೆಲವು ಅನಾನುಕೂಲತೆಗಳೂ ಇವೆ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೀಟ್ರೂಟ್ ತಿನ್ನಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಯಾರೆಲ್ಲ ಬೀಟ್ರೂಟ್ ತಿನ್ನಬಾರದು ಎಂದು ತಿಳಿಯೋಣ.
ಅಲರ್ಜಿ:
ಬೀಟ್ರೂಟ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಕೆಲವರು ಇದನ್ನು ಸೇವಿಸಿದ ನಂತರ ಕೆಲವು ಅಡ್ಡ ಪರಿಣಾಮಗಳಾಗಬಹುದು. ಅಲರ್ಜಿ ಇರುವವರು ಬೀಟ್ರೂಟ್ನ್ನು ಸೇವಿಸುವುದರಿಂದ ಚರ್ಮದ ದದ್ದುಗಳು ಮತ್ತು ಅಲರ್ಜಿಗಳು ಉಲ್ಬಣಗೊಳ್ಳಬಹುದು. ಅಲರ್ಜಿ ಪೀಡಿತರು ಬೀಟ್ರೂಟ್ನ್ನು ಸೇವಿಸಬಾರದು.
ಮೂತ್ರಪಿಂಡದಲ್ಲಿ ಕಲ್ಲು:
ಆಕ್ಸಲೇಟ್ ಹೊಂದಿರುವ ಜನರು ಮೂತ್ರಪಿಂಡದ ಕಲ್ಲುಗಳಿಗೆ ಗುರಿಯಾಗುತ್ತಾರೆ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಬೀಟ್ ರೂಟ್ ತಿನ್ನುವುದು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಬೀಟ್ರೂಟ್ ವಾಸ್ತವವಾಗಿ ಹೆಚ್ಚಿನ ಆಕ್ಸಲೇಟ್ನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯು ಹೆಚ್ಚು ಗಂಭೀರವಾಗುತ್ತದೆ. ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದರೆ ಬೀಟ್ರೂಟ್ ತಿನ್ನುವುದನ್ನು ತಪ್ಪಿಸಬಹುದು. ಇಲ್ಲವಾದರೆ ಸೀಮಿತವಾಗಿ ಸೇವಿಸುವುದು ಉತ್ತಮ.
ಸಕ್ಕರೆ ಕಾಯಿಲೆ:
ಬೀಟ್ರೂಟ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಬೀಟ್ರೂಟ್ನ್ನು ಈಗಾಗಲೇ ಅಧಿಕ ರಕ್ತದ ಸಕ್ಕರೆ ಹೊಂದಿರುವವರು ತಿನ್ನಬಾರದು. ಬೀಟ್ರೂಟ್ ಹೆಚ್ಚಿನ ಗ್ಲೈಸೆಮಿಕ್ ಹೊಂದಿದೆ. ಈ ಕಾರಣಕ್ಕಾಗಿ, ಅಧಿಕ ರಕ್ತದ ಸಕ್ಕರೆ ಹೊಂದಿರುವ ಜನರು ಬೀಟ್ರೂಟ್ ಸೇವಿಸಬಾರದು.
ಯಕೃತ್ತಿನ ಸಮಸ್ಯೆ:
ಬೀಟ್ರೂಟ್ನ ಅತಿಯಾದ ಸೇವನೆಯು ಯಕೃತ್ತಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಬೀಟ್ರೂಟ್ ತಾಮ್ರ, ಕಬ್ಬಿಣ, ರಂಜಕ, ಮೆಗ್ನೀಸಿಯಮ್ನ್ನು ಹೊಂದಿರುತ್ತದೆ. ಯಕೃತ್ತಿನಲ್ಲಿ ಈ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವುದರಿಂದ ಅವು ತೀವ್ರವಾಗಿ ಹಾನಿಗೊಳಗಾಗಿಸುತ್ತವೆ. ಅತಿಯಾಗಿ ಬೀಟ್ರೂಟ್ ತಿನ್ನುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ. ಇದು ಮೂಳೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಮತ್ತಷ್ಟು ಆರೋಗ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.