ನಾವು ಸೇವಿಸುವ ಆಹಾರ ನಮ್ಮನ್ನು ಆರೋಗ್ಯಯುತವಾಗಿ ಇಡುವಂತೆ ಮಾಡಬೇಕು. ಆಗ ಮಾತ್ರ ಸ್ವಾಸ್ಥ್ಯ ಜೀವನವನ್ನು ನಡೆಸಲು ಸಾಧ್ಯ. ಹಿತಮಿತ ಆಹಾರ ಸೇವನೆ, ವ್ಯಾಯಾಮದಂತಹ ಅಭ್ಯಾಸಗಳಿಂದ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಕೆಲವೊಂದು ಪಾನೀಯಗಳನ್ನು ನಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅವುಗಳಲ್ಲಿ ಗ್ರೀನ್ ಟೀ ಕೂಡ ಒಂದು. ಗ್ರೀನ್ ಟೀಯಲ್ಲಿನ ಎಲೆಗಳನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಎನ್ನುವ ಸಸ್ಯದಿಂದ ಪಡೆಯಲಾಗುತ್ತದೆ. ಬಳಿಕ ಅದನ್ನು ಆಕ್ಸಿಡೀಕರಿಸಲಾಗುತ್ತದೆ. ಗ್ರೀನ್ ಟೀ ಕಡಿಮೆ ಸಂಸ್ಕರಣೆಗೆ ಒಳಗಾದ ಟೀ ಗಳಲ್ಲಿ ಒಂದಾಗಿದೆ. ಅಲ್ಲದೆ ಗ್ರೀನ್ಟೀಯಲ್ಲಿ ಹೆಚ್ಚು ರೋಗ ನಿರೊಧಕ ಶಕ್ತಿ ಇರುತ್ತದೆ. ಜತೆಗೆ ಪಲಿಫಿನಾಲ್ ಅಂಶಗಳು ಹೇರಳವಾಗಿರುತ್ತವೆ. ಗ್ರೀನ್ ಟೀ ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗಲು ಸಹಾಯ ಮಾಡುತ್ತದೆ. ಅಲ್ಲದೆ ಒಂದು ಅಧ್ಯಯನದ ಪ್ರಕಾರ ಗ್ರೀನ ಟಿ ಮಾನವನ ಜೀವಿತಾವಧಿಯನ್ನು ಕೂಡ ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿದಿನ ಗ್ರೀನ್ ಟೀ ಸೇವನೆ ಉತ್ತಮ ಅಭ್ಯಾಸವಾಗಿದೆ.
ರೋಗ ನಿರೋಧಕ ಶಕ್ತಿ
ಗ್ರೀನ್ ಟೀ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗ್ರೀನ್ ಟೀಯಲ್ಲಿರುವ ಉತ್ತಮ ಪೋಷಕಾಂಶಗಳು ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ನೆರವಾಗಿ,ದೇಹವನ್ನು ಶುದ್ಧವಾಗಿರಿಸುತ್ತದೆ.
ತ್ವಚೆಯ ರಕ್ಷಣೆ
ಗ್ರೀನ್ ಟೀ ತ್ವಚೆಯ ರಕ್ಷಣೆಯನ್ನು ಮಾಡುತ್ತದೆ. ಸುಕ್ಕಾದ ಹಾಗೂ ಕಳೆಗುಂದಿದ ಚರ್ಮಕ್ಕೆ ಹೊಸ ಕಾಂತಿಯನ್ನು ನೀಡುತ್ತದೆ. ಅತಿಯಾದ ತೂಕವನ್ನೂ ತೆಗೆದುಹಾಕಲು ಗ್ರೀನ್ ಟೀ ಉತ್ತಮ ಪಾನೀಯವಾಗಿದೆ.
ಹೃದಯದ ರಕ್ಷಣೆ
ಗ್ರೀನ್ ಟೀ ನಿಮ್ಮ ಹೃದಯದ ಆರೋಗ್ಯ ಕಾಪಾಡುತ್ತದೆ. ಹೃದಯದ ರಕ್ತನಾಳದಲ್ಲಿನ ಕಾಯಿಲೆಗಳನ್ನು ದೂರಮಾಡುತ್ತವೆ. ಹಾಗೂ ರಕ್ತದೊತ್ತಡವನ್ನು ಕಡಿಮೆಗೊಳಿಸಿ ರಕ್ತಸಂಚಾರವನ್ನು ಸರಾಗಗೊಳಿಸುತ್ತದೆ.
ಅಮೆರಿಕನ್ ಜರ್ನಲ್ ಆಫ್ ಕ್ಲಿನಕಲ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ವರದಿ ಕೂಡ ಗ್ರೀನ್ ಟೀ ಸೇವನೆ ಮಧ್ಯ ವಯಸ್ಕರಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ ಎಂದು ಸಾಬೀತುಪಡಿಸಿದೆ. ಹೀಗಾಗಿ ದಿನಕ್ಕೆ 2-3ಬಾರಿಯಾದರೂ ಗ್ರೀನ್ ಟೀ ಸೇವಿಸಿ ಇದು ನಿಮ್ಮ ಆರೋಗ್ಯ ಜೀವನಕ್ಕೆ ಕೀಲಿಕೈ ಆಗಲಿದೆ. ನೆನಪಿಡಿ ದಿನದಲ್ಲಿ 3 ಕ್ಕಿಂತ ಹೆಚ್ಚು ಬಾರಿ ಗ್ರೀನ್ ಟೀ ಸೇವನೆ ಒಳಿತಲ್ಲ. ಇದು ನಿಮ್ಮ ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು.