ಕ್ಯಾಲ್ಸಿಯಂ ಕೊರತೆಯು ವಿಶೇಷವಾಗಿ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ಕೀಲು ಮತ್ತು ಬೆನ್ನುನೋವಿನ ಸಮಸ್ಯೆ ಉಂಟಾಗುತ್ತದೆ. ಅಂತಹ ಪರಿಸ್ಥಿತಿ ಉಂಟಾದಾಗ ಅನೇಕ ಜನರು ಕ್ಯಾಲ್ಸಿಯಂ ಪುಡಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ಕೆಲವು ಮನೆಮದ್ದುಗಳ ಸಹಾಯದಿಂದ ಕ್ಯಾಲ್ಸಿಯಂ ಕೊರತೆಯನ್ನು ಸರಳವಾಗಿ ನಿವಾರಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ನಮ್ಮ ದೈನಂದಿನ ಆಹಾರದಲ್ಲಿ ಕ್ಯಾಲ್ಸಿಯಂ ಅನ್ನು ಸೇರಿಸುವ ಮೂಲಕ ಕೊರತೆಯನ್ನು ನೀಗಿಸಬಹುದು. ನಮ್ಮ ದೇಹಕ್ಕೆ ದಿನಕ್ಕೆ 1 ಸಾವಿರ ಮಿಗ್ರಾಂ ಕ್ಯಾಲ್ಸಿಯಂ ಅಗತ್ಯವಿದೆ. ದೈನಂದಿನ ಆಹಾರದಿಂದ ಇದನ್ನು ಪೂರೈಸಲಾಗುವುದಿಲ್ಲ. ಕೆಲವು ರೀತಿಯ ಹಣ್ಣುಗಳು ಮತ್ತು ತರಕಾರಿಗಳ ಸಹಾಯದಿಂದ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸಬಹುದು. ಮೂಳೆಗಳ ಆರೋಗ್ಯಕ್ಕೆ ಉಪಯುಕ್ತವಾಗುವ ಈ ಧಾನ್ಯಗಳನ್ನು ಸೇವಿಸಿ.
ಗಸಗಸೆ ಬೀಜಗಳು: ಗಸಗಸೆ ಬೀಜಗಳು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಪ್ರತಿದಿನ ಒಂದು ಚಮಚ ಗಸಗಸೆ ತಿಂದರೆ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು. ನೀವು ಗಸಗಸೆಯನ್ನು ನೇರವಾಗಿ ತಿನ್ನಲು ಸಾಧ್ಯವಾಗದಿದ್ದರೆ ಅದರ ಪಾಯಸ ಅಥವಾ ಲಡ್ಡೂಗಳ ಮೂಲಕ ಸೇರಿಸಬಹುದು.
ಚಿಯಾ ಬೀಜಗಳು: ಚಿಯಾ ಬೀಜಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಕ್ಯಾಲ್ಸಿಯಂ ಕೊರತೆಯಿದ್ದರೆ ಪ್ರತಿದಿನ 1-2 ಚಮಚ ಚಿಯಾ ಬೀಜಗಳನ್ನು ತಿನ್ನುವ ಮೂಲಕ ಅದನ್ನು ನಿವಾರಿಸಬಹುದು. ಚಿಯಾ ಬೀಜಗಳಲ್ಲಿ ಸಾಕಷ್ಟು ಪೋಷಕಾಂಶಗಳು ಅಡಗಿವೆ. ಕ್ಯಾಲ್ಸಿಯಂ ಹೊರತುಪಡಿಸಿ ಇದು ಮೆಗ್ನೀಸಿಯಮ್ ಮತ್ತು ರಂಜಕದ ಉತ್ತಮ ಮೂಲವಾಗಿದೆ.
ಸೂರ್ಯಕಾಂತಿ ಬೀಜಗಳು: ಸೂರ್ಯಕಾಂತಿ ಬೀಜಗಳಲ್ಲಿ ಕ್ಯಾಲ್ಸಿಯಂ ಗಮನಾರ್ಹ ಪ್ರಮಾಣದಲ್ಲಿ ಕಂಡುಬರುತ್ತದೆ. ನಿಮ್ಮಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ ನಿಮ್ಮ ದೈನಂದಿನ ಆಹಾರದಲ್ಲಿ ಒಂದು ಕಪ್ ಸೂರ್ಯಕಾಂತಿ ಬೀಜಗಳನ್ನು ಸೇರಿಸಿ. ಪೌಷ್ಟಿಕಾಂಶ ಭರಿತ ಸೂರ್ಯಕಾಂತಿ ಬೀಜಗಳು ಬಲವಾದ ಮೂಳೆಗಳನ್ನು ಮತ್ತು ಸ್ನಾಯುಗಳ ಆರೋಗ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಅಗಸೆ ಬೀಜಗಳು: ಅಗಸೆಬೀಜಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಪ್ರತಿದಿನ 1-2 ಚಮಚ ಅಗಸೆ ಬೀಜಗಳನ್ನು ತಿನ್ನುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಗಸೆಬೀಜವನ್ನು ನೆನೆಸಿ ಅಥವಾ ಹುರಿದು ತಿನ್ನಬಹುದು.
ಎಳ್ಳು ಬೀಜಗಳು: ಎಳ್ಳು ಬೀಜಗಳಲ್ಲಿ ಆರೋಗ್ಯಕ್ಕೆ ಉತ್ತಮವಾದ ಅನೇಕ ಪೋಷಕಾಂಶಗಳಿವೆ. ಎಳ್ಳು ಬೀಜಗಳು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಎಳ್ಳನ್ನು ಲಡ್ಡು ಅಥವಾ ಇನ್ನಾವುದೇ ಆಹಾರಕ್ಕೆ ಸೇರಿಸಿ ಸೇವನೆ ಮಾಡಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ಸುಲಭವಾಗಿ ನಿವಾರಿಸಬಹುದು.
ಅಮರಂತ್ ಬೀಜಗಳು: ಅಮರಂತ್ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಬೀಜಗಳನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ತಡೆಯಬಹುದು. ಪ್ರತಿದಿನ ಒಂದು ಕಪ್ ಅಮರಂತ್ ಬೀಜಗಳನ್ನು ತಿನ್ನುವುದರಿಂದ ದುರ್ಬಲ ಮೂಳೆಗಳನ್ನು ಗುಣಪಡಿಸಬಹುದು. ಅಲ್ಲದೆ ಇದರಲ್ಲಿರುವ ಪೋಷಕಾಂಶಗಳು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಬೀಜಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ