Health Tips: ನಿಮ್ಮ ಮಕ್ಕಳು ಹಾಲು ಕುಡಿಯಲು ನಿರಾಕರಿಸುತ್ತಿದ್ದಾರಾ? ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ
ಹಾಲನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಹಾಲು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳಿಗೆ ಹಾಲು ಕುಡಿಸಲಾಗುತ್ತದೆ.
ಹಾಲನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಹಾಲು (Milk) ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳಿಗೆ ಹಾಲು ಕುಡಿಸಲಾಗುತ್ತದೆ. ಆದರೆ ಅನೇಕ ಮಕ್ಕಳು ಹಾಲು ಕುಡಿಯಲು ಇಷ್ಟಪಡುವುದಿಲ್ಲ. ಪಾಲಕರು ತಮ್ಮ ಮಕ್ಕಳಿಗೆ ಹಾಲು ಕುಡಿಸಲು ಸಾಕಷ್ಟು ಪ್ರಯತ್ನಿಸುತ್ತಾರೆ. ನಿಮ್ಮ ಮಕ್ಕಳೇ ಓಡೋಡಿ ಬಂದು ಹಾಲು ಕೇಳುವಂತೆ ಮಾಡಲು ಒಂದಿಷ್ಟು ಟಿಪ್ಸ್ ಇಲ್ಲಿದೆ. ಇದನ್ನು ಪಾಲಿಸಿದರೆ, ನಿಮ್ಮ ಮಕ್ಕಳು ಸಂತೋಷದಿಂದ ಹಾಲು ಕುಡಿಯುತ್ತಾರೆ. ಹಾಲನ್ನು ರುಚಿಕರವಾಗಿಸಲು ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ ಮಕ್ಕಳು ಹಾಲು ಕುಡಿಯುತ್ತಾರೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಹಾಲು ಮತ್ತು ಖರ್ಜೂರ: ಖರ್ಜೂರ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳು ಖರ್ಜೂರದ ಒಳಗೆ ಹೇರಳವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಮಗುವಿನ ಹಾಲಿಗೆ ಖರ್ಜೂರವನ್ನು ಬೆರೆಸಿದರೆ ಮಗುವಿನ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ. 5-6 ಖರ್ಜೂರವನ್ನು ನೀರಿನಲ್ಲಿ ನೆನೆಸಿ ನಂತರ ಬೀಜಗಳನ್ನು ತೆಗೆದುಹಾಕಿ ಮತ್ತು ಖರ್ಜೂರವನ್ನು ಪುಡಿಮಾಡಿ. ಮಿಶ್ರಣವನ್ನು ಹಾಲಿನಲ್ಲಿ ಬೆರೆಸಿ ಮಕ್ಕಳಿಗೆ ನೀಡಿ.
ಹಾಲು ಮತ್ತು ಏಲಕ್ಕಿ: ಏಲಕ್ಕಿಯು ಟೇಸ್ಟಿ ಮಾತ್ರವಲ್ಲದೇ ಉತ್ತಮ ಪರಿಮಳವನ್ನು ಹೊಂದಿರುತ್ತದೆ. ಏಲಕ್ಕಿಯನ್ನು ಸೇವಿಸುವುದರಿಂದ ಮಕ್ಕಳಿಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ದೊರೆಯುತ್ತವೆ. ಅಂತಹ ಸಂದರ್ಭಗಳಲ್ಲಿ ಹಾಲಿಗೆ ಏಲಕ್ಕಿ ಪುಡಿ ಸೇರಿಸಿ ಮಕ್ಕಳಿಗೆ ನೀಡಿ. ಇದು ರುಚಿ ಮಾತ್ರವಲ್ಲದೆ ಮಕ್ಕಳಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.
ಚಾಕೊಲೇಟ್: ನೀವು ಶಿಶುಗಳಿಗೆ ಹಾಲಿಗೆ ಚಾಕೊಲೇಟ್ನ್ನು ಕೂಡ ಸೇರಿಸಬಹುದು. ಚಾಕೊಲೇಟ್‌ಗಳು ಮಕ್ಕಳಿಗೆ ಇಷ್ಟವಾಗುವುದು ಮಾತ್ರವಲ್ಲದೇ ರುಚಿಯೂ ಕೂಡ. ಆದರೆ ಚಾಕೊಲೇಟ್ ಒಳಗೆ ಸಾಕಷ್ಟು ಸಕ್ಕರೆ ಇದೆ ಎಂದು ಗಮನಿಸಿ. ಅಂತಹ ಪರಿಸ್ಥಿತಿಯಲ್ಲಿ, ಸ್ವಲ್ಪ ಪ್ರಮಾಣದ ಹಾಲಿನಲ್ಲಿ ಚಾಕೊಲೇಟ್ ಸೇರಿಸಿ.
ಹಾಲು ಕುಡಿಯಲು ಸೂಕ್ತ ಸಮಯ ಯಾವುದು?
ಕೆಲವು ತಜ್ಞರು ನಿಮ್ಮ ದೇಹಕ್ಕೆ ಶಕ್ತಿ ಮತ್ತು ಪೌಷ್ಠಿಕಾಂಶ ಸಿಗಬೇಕೆಂದರೆ ಪ್ರತಿನಿತ್ಯ ಒಂದು ಗ್ಲಾಸ್ ಹಾಲು ಕುಡಿಯುವ ಮೂಲಕ ಪ್ರಾರಂಭಿಸಿ ಎಂದು ಸಲಹೆ ನೀಡುತ್ತಾರೆ. ಆದರೆ ಮತ್ತೆ ಕೆಲವರ ಪ್ರಕಾರ, ರಾತ್ರಿ ಸಮಯದಲ್ಲಿ ಹಾಲು ಕುಡಿಯುವುದರಿಂದ ಟ್ರಿಪ್ಟೊಫಾನ್ ಎಂಬ ಸಂಯುಕ್ತ ಬಿಡುಗಡೆ ಆಗುತ್ತದೆ. ಇದು ನಿದ್ರೆ ಬರಲು ಸಹಾಯ ಮಾಡುತ್ತದೆ ಮತ್ತು ಇದು ನಿಮ್ಮ ನರಮಂಡಲ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ.
ಮತ್ತಷ್ಟು ಆರೋಗ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.