ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 5 ವಿಷಯಗಳಲ್ಲಿ ಗರ್ಭಕಂಠದ ಕ್ಯಾನ್ಸರ್

|

Updated on: Dec 14, 2024 | 6:26 PM

ಕಳೆದ ಕೆಲವು ವರ್ಷಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ.2024ರಲ್ಲಿ ಗೂಗಲ್​​ನ ಸೆರ್ಚ್‌ ಎಂಜಿನ್‌ ಬಿಡುಗಡೆ ಮಾಡಿದ ಫಲಿತಾಂಶಗಳ ಪ್ರಕಾರ, ಈ ವರ್ಷದ ಟಾಪ್ 5 ವಿಷಯಗಳ ಹುಡುಕಾಟಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಸರೂ ಸೇರಿದೆ. ಇದಕ್ಕೆ ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 5 ವಿಷಯಗಳಲ್ಲಿ ಗರ್ಭಕಂಠದ ಕ್ಯಾನ್ಸರ್
Cervical Cancer
Follow us on

ಕಳೆದ ಕೆಲವು ವರ್ಷಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಗೂಗಲ್‌ನ ವರದಿಯ ಪ್ರಕಾರ, ಈ ವರ್ಷದ ಟಾಪ್ 5 ಹುಡುಕಾಟಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಸರೂ ಸೇರಿದೆ. ಇದಕ್ಕೆ ಕಾರಣ ಏನೆಂದು ಇಲ್ಲಿ ತಿಳಿದುಕೊಳ್ಳಿ.

HPV ಲಸಿಕೆ ಘೋಷಣೆ:

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಲು ಮತ್ತು ಈ ಕಾಯಿಲೆಯಿಂದ ರಕ್ಷಿಸಲು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಂತಹ ಹಲವು ಕಾರ್ಯಕ್ರಮಗಳನ್ನು ಈ ವರ್ಷ ಅಂದರೆ 2024ರಲ್ಲೂ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನವೆಂಬರ್ 17 ರಂದು ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲ, ಈ ವರ್ಷ ಸರ್ಕಾರ ದೊಡ್ಡ ಘೋಷಣೆಯನ್ನೂ ಮಾಡಿದೆ. ಅದರ ಪ್ರಕಾರ, ಗರ್ಭಕಂಠದ ಕ್ಯಾನ್ಸರ್ ವಿರುದ್ಧ ರಕ್ಷಿಸುವ ಲಸಿಕೆಯನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಪಡಿಸಲಾಗಿದೆ. ಈ ಲಸಿಕೆ ಹೆಸರು HPV ಲಸಿಕೆ. ಈ ಘೋಷಣೆಯ ನಂತರವೂ ಗರ್ಭಕಂಠದ ಕ್ಯಾನ್ಸರ್ ಅನ್ನು ಸಾಕಷ್ಟು ಹುಡುಕಲಾಯಿತು ಎಂದು ತಿಳಿದುಬಂದಿದೆ.

ಪೂನಂ ಪಾಂಡೆ ಪೋಸ್ಟ್:

ಈ ಲಸಿಕೆ ಬಿಡುಗಡೆಯ ಸುದ್ದಿಯಲ್ಲದೆ, ಪೂನಂ ಪಾಂಡಾ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿತ್ತು. ಈ ಸುದ್ದಿ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಭಾಋಈ ಸದ್ದು ಮಾಡಿತ್ತು. ಆಕೆಯ ಸಾವಿಗೆ ಗರ್ಭಕಂಠದ ಕ್ಯಾನ್ಸರ್ ಕಾರಣ ಎಂದು ಹೇಳಲಾಗಿತ್ತು. ಈ ವಿಷಯ ತಿಳಿದ ನಂತರವೂ ಗೂಗಲ್‌ನಲ್ಲಿ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಜನ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದರೆ, ಮರುದಿನವೇ ಪೂನಂ ಪಾಂಡೆ ಜೀವಂತವಾಗಿದ್ದಾರೆ ಎಂದು ಪೋಸ್ಟ್‌ನಿಂದ ಸ್ಪಷ್ಟಪಡಿಸಲಾಗಿತ್ತು. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈಕೆ ಈ ಪೋಸ್ಟ್ ಮಾಡಿರುವುದಾಗಿ ಕೊನೆಗೆ ತಿಳಿದುಬಂದಿತ್ತು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:21 pm, Sat, 14 December 24