AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heart Attack in Cats: ಬೆಕ್ಕುಗಳಲ್ಲಿ ಹೃದಯಾಘಾತವಾಗಲು ಕಾರಣವೇನು? ಲಕ್ಷಣಗಳೇನು ತಿಳಿದುಕೊಳ್ಳಿ

ಮನುಷ್ಯರಿಗೆ ಮಾತ್ರವಲ್ಲ ಬೆಕ್ಕಿಗೂ ಹೃದಯಾಘಾತವಾಗುತ್ತೆ ಎಂದರೆ ನಂಬುತ್ತೀರಾ? ಹೌದು ಇದು ನಿಜ. ಇದೊಂದು ಕೊರೊನರಿ ಅಪಧಮನಿ ಕಾಯಿಲೆಯಾಗಿದೆ. ಇದು ಬಹಳ ಅಪರೂಪವಾಗಿದ್ದರೂ ಕೂಡ ಇದು ಕಂಡು ಬಂದರೆ, ಬೆಕ್ಕು ಬದುಕುವುದು ಬಹಳ ಕಷ್ಟ. ಹಾಗಾದರೆ ಇದು ಕಂಡು ಬರಲು ಕಾರಣವೇನು? ಲಕ್ಷಣಗಳು ಯಾವ ರೀತಿಯಲ್ಲಿ ಇರುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Heart Attack in Cats: ಬೆಕ್ಕುಗಳಲ್ಲಿ ಹೃದಯಾಘಾತವಾಗಲು ಕಾರಣವೇನು? ಲಕ್ಷಣಗಳೇನು ತಿಳಿದುಕೊಳ್ಳಿ
ಬೆಕ್ಕು (ಸಾಂದರ್ಭಿಕ ಚಿತ್ರ)
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Dec 14, 2024 | 5:09 PM

Share

ಸಾಮಾನ್ಯವಾಗಿ ಹೃದಯಾಘಾತ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಅದಲ್ಲದೆ ಜನರು ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಿ ಅಲ್ಪ ಸ್ವಲ್ಪ ಮಟ್ಟಿಗೆ ಇದರ ಗುಣಲಕ್ಷಣ, ತಡೆಗಟ್ಟುವ ವಿಧಾನಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಆದರೆ ಮನುಷ್ಯರಿಗೆ ಮಾತ್ರವಲ್ಲ ಬೆಕ್ಕಿಗೂ ಹೃದಯಾಘಾತವಾಗುತ್ತೆ ಎಂದರೆ ನಂಬುತ್ತೀರಾ? ಹೌದು ಇದು ನಿಜ. ಇದೊಂದು ಕೊರೊನರಿ ಅಪಧಮನಿ ಕಾಯಿಲೆಯಾಗಿದೆ. ಇದು ಬಹಳ ಅಪರೂಪವಾಗಿದ್ದರೂ ಕೂಡ ಇದು ಕಂಡು ಬಂದರೆ ಬೆಕ್ಕು ಬದುಕುವುದು ಬಹಳ ಕಷ್ಟ. ಹಾಗಾದರೆ ಇದು ಕಂಡು ಬರಲು ಕಾರಣವೇನು? ಲಕ್ಷಣಗಳು ಯಾವ ರೀತಿಯಲ್ಲಿ ಇರುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಕ್ಕುಗಳಲ್ಲಿ ಹೃದಯಾಘಾತದ ಲಕ್ಷಣಗಳು

ಹೃದಯಾಘಾತದ ಲಕ್ಷಣಗಳು ಸಾಮಾನ್ಯವಾಗಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ. ಈ ರೋಗಲಕ್ಷಣಗಳಲ್ಲಿ ಇವು ಸೇರಿವೆ:

ತೀವ್ರ ದೌರ್ಬಲ್ಯ

ಆಲಸ್ಯ

ಮೂರ್ಛೆ ಹೋಗುವುದು ಅಥವಾ ಕುಸಿದು ಬೀಳುವುದು

ಹಸಿವಾಗದಿರುವುದು

ವಾಂತಿ

ಹೆಚ್ಚಿದ ಅಥವಾ ನಿಧಾನವಾದ ಹೃದಯ ಬಡಿತ

ಸ್ವಲ್ಪ ಜ್ವರ

ನಡೆಯಲು ಆಗದಿರುವುದು (ಕುಂಟತನ)

ಸೆಳೆತ

ಹೈಪರ್ ಆಕ್ಟಿವಿಟಿ

ಹಠಾತ್ ಸಾವು

ಬೆಕ್ಕುಗಳಲ್ಲಿ ಹೃದಯಾಘಾತಕ್ಕೆ ಕಾರಣಗಳು

ಮಯೋಕಾರ್ಡಿಯಂನಿಂದ ರಕ್ತದ ಹರಿವು ಕಡಿತಗೊಂಡಾಗ ಹೃದಯಾಘಾತ ಸಂಭವಿಸುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ (ಥ್ರೋಂಬೊಎಂಬೋಲಿಸಮ್) ಅಥವಾ ಹೃದಯ ಸ್ನಾಯು ಕಾಯಿಲೆ (ಕಾರ್ಡಿಯೋಮಯೋಪತಿ) ಗಳಿಂದ ಸಂಭವಿಸುತ್ತದೆ.

ಇದನ್ನೂ ಓದಿ: ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ಯಾವುದು ಆರೋಗ್ಯಕರ

ಬೆಕ್ಕುಗಳಲ್ಲಿ ಹೃದಯಾಘಾತದ ರೋಗನಿರ್ಣಯ

ಮೊದಲು ಪಶುವೈದ್ಯರಿಗೆ ಬೆಕ್ಕಿನ ಸಂಪೂರ್ಣ ಆರೋಗ್ಯ ಇತಿಹಾಸದ ಅಗತ್ಯವಿರುತ್ತದೆ. ಹಾಗಾಗಿ ಆ ಬಗ್ಗೆ ಮಾಹಿತಿ ನೀಡಿ. ಹೃದ್ರೋಗಕ್ಕೆ ಸಂಬಂಧಿಸಿದಂತೆ ಅದರ ಇತಿಹಾಸ, ರೋಗಲಕ್ಷಣಗಳ ವಿವರವಾದ ಪಟ್ಟಿ ಮತ್ತು ರೋಗಲಕ್ಷಣಗಳು ಮೊದಲು ಪ್ರಾರಂಭವಾದ ದಿನ ಮತ್ತು ಸಮಯ ನಿಮಗೆ ತಿಳಿದಿರಬೇಕಾಗುತ್ತದೆ. ನಂತರ ಪಶುವೈದ್ಯರು ಬೆಕ್ಕನ್ನು ದೈಹಿಕವಾಗಿ ಪರೀಕ್ಷಿಸುತ್ತಾರೆ, ಅದರ ಹೃದಯ ಬಡಿತ, ನಾಡಿಮಿಡಿತ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸುತ್ತಾರೆ. ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ಪ್ರಯೋಗಗಳನ್ನು ವೈದ್ಯರು ಮಾಡುತ್ತಾರೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದಾದ ಪರಿಸ್ಥಿತಿಗಳನ್ನು ಗುರುತಿಸಲು ಪಶುವೈದ್ಯರಿಗೆ ಸಹಾಯ ಮಾಡಬಹುದು. ಬೆಕ್ಕಿನ ಮೇಲೆ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಕೆಜಿ) ಮತ್ತು ಎಕೋಕಾರ್ಡಿಯೋಗ್ರಾಮ್ (ಇಸಿಜಿ) ನಡೆಸಲಾಗುತ್ತದೆ. ಇಕೆಜಿ ಹೃದಯದ ಚಟುವಟಿಕೆಗಳನ್ನು ಗಮನಿಸುತ್ತದೆ ಮತ್ತು ಹೃದಯ ಬಡಿತ ಅಸಹಜವಾಗಿದ್ದರೆ ಅದನ್ನು ಗುರುತಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಪಶುವೈದ್ಯರು ಬೆಕ್ಕಿನ ಎದೆಯ ಎಕ್ಸ್-ರೇ ತೆಗೆದುಕೊಳ್ಳಬಹುದು.

ಬೆಕ್ಕುಗಳಲ್ಲಿ ಹೃದಯಾಘಾತದ ಚೇತರಿಕೆ

ಬೆಕ್ಕಿನ ರೋಗನಿರ್ಣಯವು ಹೃದಯಾಘಾತದ ತೀವ್ರತೆ ಮತ್ತು ಅದಕ್ಕೆ ಕಾರಣವಾದ ಮೂಲ ಸ್ಥಿತಿಯ ಚಿಕಿತ್ಸೆಯನ್ನು ಅವಲಂಬಿಸಿರುತ್ತದೆ. ಇಕೆಜಿ ಪರೀಕ್ಷೆಗಳ ಮೂಲಕ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಪಶುವೈದ್ಯರು ಬೆಕ್ಕನ್ನು ಹೋಲ್ಟರ್ ಅಥವಾ ಈವೆಂಟ್ ಮಾನಿಟರ್ ನೊಂದಿಗೆ ಮನೆಗೆ ಕಳುಹಿಸಿದರೆ, ಸ್ಥಿತಿಯನ್ನು ಸರಿಯಾಗಿ ಪತ್ತೆಹಚ್ಚಲು ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ. ಹೃದಯಾಘಾತದ ನಂತರ ಚೇತರಿಸಿಕೊಳ್ಳುವಾಗ ಬೆಕ್ಕು ವಿಶ್ರಾಂತಿ ಪಡೆಯಬೇಕಾಗುತ್ತದೆ. ಹಾಗಾಗಿ ನಿಮ್ಮ ಮನೆಗಳಲ್ಲಿ ಬೆಕ್ಕು ಕುಸಿದು ಬಿದ್ದರೆ, ಸಾಕುಪ್ರಾಣಿ ಸಿಪಿಆರ್ನಲ್ಲಿ ನಿರ್ದಿಷ್ಟವಾಗಿ ತರಬೇತಿ ಪಡೆದುಕೊಳ್ಳದ ಹೊರತು ಸಿಪಿಆರ್ ಅನ್ನು ಎಂದಿಗೂ ನೀಡದಿರುವುದು ಒಳ್ಳೆಯದು ಏಕೆಂದರೆ ಇದು ಬೆಕ್ಕಿಗೆ ಹೆಚ್ಚುವರಿ ಗಾಯವನ್ನು ಉಂಟುಮಾಡಬಹುದು. ಹಾಗಾಗಿ ಯಾವುದೇ ರೀತಿಯ ಅಸಹಜ ಲಕ್ಷಣಗಳು ಕಂಡು ಬಂದರೆ ಮೊದಲು ಪಶುವೈದ್ಯರಿಗೆ ವರದಿ ಮಾಡಿ, ಸರಿಯಾದ ಕಾರಣಗಳನ್ನು ತಿಳಿದುಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:09 pm, Sat, 14 December 24