
ಸಾಂಬಾರ ಪದಾರ್ಥಗಳ ರಾಣಿ ಎಂದೇ ಪ್ರಸಿದ್ಧಿಯಾಗಿರುವ ಏಲಕ್ಕಿಯೂ (cardamom) ಭಾರತೀಯ ಅಡುಗೆ ಮನೆಯಲ್ಲಿರುವ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದು. ಈ ಏಲಕ್ಕಿಯ ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ. ಸಾಂಬಾರ ಪದಾರ್ಥಗಳ ರಾಣಿ ಎಂದೇ ಕರೆಯಲಾಗುವ ಏಲಕ್ಕಿಯನ್ನು ಸಿಹಿ ತಿನಿಸುಗಳು, ಮಸಾಲೆಯುಕ್ತ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಊಟದ ನಂತರ ಏಲಕ್ಕಿಯನ್ನು ಜಗಿಯುವ ಅಭ್ಯಾಸದಿಂದ ನೀವು ಈ ಆರೋಗ್ಯ ಲಾಭಗಳನ್ನು (health benefits) ಪಡೆಯಬಹುದಾಗಿದೆ.
ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ: ಏಲಕ್ಕಿ ನೈಸರ್ಗಿಕ ಬಾಯಿಯ ಫ್ರೆಶ್ನರ್ ಆಗಿದ್ದು, ಏಲಕ್ಕಿಯನ್ನು ಅಗಿಯುವುದರಿಂದ ಲಾಲಾರಸವನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ಗುಣವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.
ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುತ್ತದೆ: ಏಲಕ್ಕಿಯ ನೈಸರ್ಗಿಕ ಸಿಹಿ ಮತ್ತು ಸ್ವಲ್ಪ ಖಾರದ ರುಚಿಯನ್ನು ಹೊಂದಿದೆ. ಊಟದ ನಂತರ ಏಲಕ್ಕಿ ಸೇವನೆಯು ಸಿಹಿತಿಂಡಿಗಳು ಅಥವಾ ಸಕ್ಕರೆ ತಿಂಡಿಗಳ ಬಯಕೆಯನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ: ಏಲಕ್ಕಿಯಲ್ಲಿ ಸಿನಿಯೋಲ್ ನಂತಹ ಸಂಯುಕ್ತಗಳಿದ್ದು, ಇವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತವೆ. ಊಟದ ನಂತರ ಏಲಕ್ಕಿಯನ್ನು ಜಗಿಯುವುದರಿಂದ ಗ್ಯಾಸ್, ಆಮ್ಲೀಯತೆಯಂತಹ ಸೇರಿದಂತೆ ಇನ್ನಿತ್ತರ ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ.
ಇದನ್ನೂ ಓದಿ:ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಈ ಒಂದು ಹಣ್ಣನ್ನು ಸೇವನೆ ಮಾಡಿ!
ನಿರ್ವಿಶಿಕರಣ: ಏಲಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಯಕೃತ್ತು ಮತ್ತು ಮೂತ್ರಪಿಂಡಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಮೂಲಕ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಊಟದ ಬಳಿಕ ಏಲಕ್ಕಿಯನ್ನು ಜಗಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ಬಾಯಿಯ ನೈರ್ಮಲ್ಯ ಕಾಪಾಡಲು ಸಹಕಾರಿ: ಏಲಕ್ಕಿ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಯಮಿತ ಬಳಕೆಯು ಬಾಯಿಯ ಸೋಂಕನ್ನು ತಡೆಗಟ್ಟಲು ಹಾಗೂ ಒಸಡುಗಳ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Sun, 19 October 25