ನಾವು ನಿತ್ಯ ಬಳಸುವ ವಸ್ತುಗಳ ಪೈಕಿ ಹಾಲು ಕೂಡ ಒಂದು. ಹಾಲು ಪ್ರೋಟೀನ್ಗಳು, ಕ್ಯಾಲ್ಸಿಯಂ, ವಿಟಮಿನ್ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ಚಿಕ್ಕವರು ಮತ್ತು ಹಿರಿಯರು ದಿನಕ್ಕೆ ಒಂದು ಲೋಟ ಹಾಲು (Milk) ಕುಡಿಯಬೇಕು. ನಾವು ಹಾಲಿನಿಂದ ಅನೇಕ ತಿನಿಸುಗಳನ್ನು ತಯಾರಿಸುತ್ತೇವೆ. ಹಾಲು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಲು ಮೂಳೆಗಳನ್ನು ಬಲವಾಗಿಡುತ್ತದೆ. ಇವು ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಹಾಲಿನ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಷಯಗಳನ್ನು ಕಲಿತಿದ್ದೇವೆ. ಹಾಲು ಸೇವನೆಯಿಂದ ಆಗುವ ಲಾಭಗಳ ಬಗ್ಗೆ ಹೇಳಬೇಕಾಗಿಲ್ಲ. ಆದರೆ ಕೆಲವರು ಅತಿಯಾಗಿ ಕುಡಿಯುತ್ತಾರೆ. ಏಕೆಂದರೆ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ. ಆದರೆ ಮಿತವಾಗಿ ತೆಗೆದುಕೊಂಡರೆ ಅಮೃತ.. ಅತಿಯಾಗಿ ಸೇವಿಸಿದರೆ ಅಮೃತವೂ ವಿಷವಾದೀತು ಅಲ್ಲವಾ? ಹಾಲು ಕೂಡ ಹಾಗೆಯೇ. ಹೆಚ್ಚು ಹಾಲು ಸೇವಿಸುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವು ಅಧ್ಯಯನಗಳು ತೋರಿಸಿವೆ. ಮತ್ತು ದಿನಕ್ಕೆ ಎಷ್ಟು ಹಾಲು ಕುಡಿಯಬೇಕು? ಅತಿಯಾಗಿ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳೇನು (Health) ಎಂಬುದನ್ನು ಈಗ ತಿಳಿದುಕೊಳ್ಳೋಣ.
ಎಷ್ಟು ಕುಡಿಯಬೇಕು: ದಿನಕ್ಕೆ ಮೂರು ಕಪ್ ಹಾಲು ಕುಡಿಯಿರಿ. ಕಲಬೆರಕೆ ಇಲ್ಲದ ಮತ್ತು ರಾಸಾಯನಿಕ ರಹಿತ ಹಾಲನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಲು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಆಯಾಸ: ದಿನನಿತ್ಯ ಮೂರು ಲೋಟಗಳಿಗಿಂತ ಹೆಚ್ಚು ಹಾಲು ಸೇವಿಸುವುದರಿಂದ ಸುಸ್ತು ಉಂಟಾಗುತ್ತದೆ. ಅತಿಯಾಗಿ ಸೇವಿಸುವುದರಿಂದ ಕರುಳಿನ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ ಮತ್ತು ನೀವು ಬೇಗನೆ ಆಯಾಸಗೊಳ್ಳಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಹಾಲಿನಲ್ಲಿರುವ ಎ1 ಕ್ಯಾಸೀನ್ ಇದಕ್ಕೆ ಕಾರಣ.
ಚರ್ಮದ ಸಮಸ್ಯೆಗಳು: ಹೆಚ್ಚು ಹಾಲು ಕುಡಿಯುವುದರಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಅಲರ್ಜಿ ಮತ್ತು ಮೊಡವೆಯಂತಹ ಚರ್ಮದ ಸಮಸ್ಯೆಗಳು ಬರುತ್ತವೆ. ನೀವು ಹಾಲಿನಲ್ಲಿ ಹೆಚ್ಚು ಸಂರಕ್ಷಕಗಳನ್ನು ಬಳಸಿದರೆ, ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ, ಬಿರುಕು ಮತ್ತು ರಾಷಸ್ ಆಗುತ್ತದೆ.
ಬ್ರೈನ್ ಫಾಗ್ಸ್: ಹೆಚ್ಚು ಹಾಲು ಸೇವಿಸುವುದರಿಂದ ಜ್ಞಾಪಕ ಶಕ್ತಿ ನಷ್ಟವಾಗುತ್ತದೆ. ಮೆದುಳು ಮಂಜು ಮಂಜಾಗುತ್ತದೆ. ಹೆಚ್ಚು ಹಾಲು ಕುಡಿದರೆ ಕೆಲಸದತ್ತ ಗಮನ ಹರಿಸದಿರುವುದು, ಏಕಾಗ್ರತೆ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ವಯಸ್ಸಾದವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.
ಜೀರ್ಣಕಾರಿ ಸಮಸ್ಯೆಗಳು: ಹೆಚ್ಚು ಹಾಲು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಹೊಟ್ಟೆ ಉಬ್ಬುವುದು ಮತ್ತು ಅತಿಸಾರದ ಅಪಾಯವೂ ಇದೆ. ನಿಮ್ಮ ದೇಹವು ಲ್ಯಾಕ್ಟೋಸ್ ಅನ್ನು ಸರಿಯಾಗಿ ಚಯಾಪಚಯಗೊಳಿಸಲು ಸಾಧ್ಯವಾಗದಿದ್ದರೆ, ಅದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
ಹಾರ್ಮೋನ್ ಸಮಸ್ಯೆಗಳು: ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಡೈರಿ ಉದ್ಯಮದಲ್ಲಿ ಬೆಳವಣಿಗೆಯ ಹಾರ್ಮೋನುಗಳನ್ನು ಬಳಸಲಾಗುತ್ತದೆ. ಇಂತಹ ಹಾಲು ಕುಡಿಯುವುದರಿಂದ ದೇಹದಲ್ಲಿ ಹಾರ್ಮೋನ್ ಸಮತೋಲನ ತಪ್ಪುತ್ತದೆ.
ಹಾಗಾಗಿ ವೈದ್ಯರ ಸಲಹೆಯಂತೆ ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಅದು ನಮ್ಮ ದೇಹಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ. ನಮಗೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಗುತ್ತವೆ.
ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ